ಹೌದು ವಿಧಿ ಎಲ್ಲರ ಜೀವನದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಆಟವಾಡುತ್ತದೆ ಅಂದರೆ ತಪ್ಪಾಗಲಾರದು. ಕಾಲ ಚಕ್ರ ಉರುಳುತ್ತ ಹೊಂದಂತೆಲ್ಲ ಮನುಷ್ಯನ ಜೀವನ ಕೂಡ ಬದಲಾವಣೆಯನ್ನು ಕಾಣುತ್ತದೆ. ನಾವು ನಿಮಗೆ ಒಬ್ಬ ವ್ಯಕ್ತಿಯ ಸಾಧನೆಯನ್ನು ತಿಳಿಸಲು ಇಚ್ಛಿಸುತ್ತೇವೆ ಅವರು ಮಾಡಿರುವಂತ ಸಾಧನೆ ಏನು ಅನ್ನೋದನ್ನ ಮುಂದೆ ನೋಡಿ

ಈ ವ್ಯಕ್ತಿಯು ತಾನು ಕೂಡ ಬೇರೆಯವರ ಹಾಗೆ ದುಡಿದು ತನ್ನ ಕಾಲಿನ ಮೇಲೆ ತಾನು ನಿಂತು ಭವಿಷ್ಯವನ್ನು ರೂಪಿಸಿ ಕೊಳ್ಳಬೇಕು ಅಂದುಕೊಂಡಿದ್ದರು ಆದರೆ ವಿಧಿಯ ಆಟ ಇವರ ಜೀವನದ ದಿಕ್ಕನ್ನೇ ಬದಲಾಯಿಸಿತು.

ಆ ಸಮಯ ಇವರ ಪಾಲಿಗೆ ಕೆಟ್ಟ ಸಮಯ ಅಂತಾನೆ ಹಳಬಹುದು ಕಬ್ಬಿನ ಗ್ರೈಂಡರ್ಗೆ ಆಕಸ್ಮಿಕವಾಗಿ ತಮ್ಮ ಎರಡು ಕೈಗಳು ಎಳೆಯಲ್ಪಟ್ಟು ಕೈಗಳನ್ನು ಕಳೆದು ಕೊಳ್ಳುತ್ತಾರೆ. ಅಂತಹ ಸಮಯದಲ್ಲಿ ಏನು ಮಾಡಲಾಗದೆ ಮನೆಯಲ್ಲೆಯೇ ಹಲವು ವರ್ಷಗಳು ಕಾಲ ಕಳೆಯುತ್ತಾರೆ.

ಹೀಗೆ ಕಾಲ ಚಕ್ರ ಉರುಳಿದಂತೆ ತಮಗೆ ಏನು ಮಾಡಬೇಕು ಅಂತ ದಾರಿ ಕಾಣದಂತಾಗುತ್ತದೆ. ಏನಾದರು ಒಂದು ಸಾಧನೆಯನ್ನು ಮಾಡಬೇಕು ಅನ್ನೋ ಛಲವನ್ನು ಬೆಳೆಸಿ ಕೊಳ್ಳುತ್ತಾರೆ, ಆ ಛಲದೊಂದಿಗೆ ಸಾಧನೆಯ ಹಾದಿಯನ್ನು ಮುಟ್ಟಲು ಸಿದ್ಧರಾಗುತ್ತಾರೆ, ಎರಡು ಕೈಗಳನ್ನು ಕಳೆದು ಕೊಂಡಿದ್ದರು ಇವರು ಏನು ಸಾಧನೆ ಮಾಡುತ್ತಾರೆ ಅನ್ನೋ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು ಆದ್ರೆ ಅವರಲ್ಲಿರುವ ಛಲ ನೋಡಿ ತಮ್ಮ ಬಾಯಿಯಿಂದ ಚಿತ್ರವನ್ನು ಬಿಡಿಸಲು ಪ್ರಾರಂಭಿಸುತ್ತಾರೆ.

ಹೀಗೆ ಚಿತ್ರವನ್ನು ಬಿಡಿಸಲು ಪ್ರಾರಂಭಿಸಿದ ಇವರು ಹಳ್ಳಿಯಿಂದ ಸಿಟಿಗೆ ಬಂದು ಪೇಂಟಿಂಗ್ ಪರೀಕ್ಷೆ ಬರೆದು ಪಾಸಾಗುತ್ತಾರೆ. ಪೇಂಟಿಂಗ್ ಇಂದ ಹಲವು ಪ್ರಶಸ್ತಿಗಳನ್ನು ಪಡೆಯುತ್ತಾರೆ. ಇವರ ವರ್ಣ ಚಿತ್ರಗಳು ವಿಶ್ವದ ಅನೇಕ ಭಾಗಗಳಲ್ಲಿ ಮಾರಾಟ ಆಗುತ್ತಿವೆ. ಇವರು ಇದುವರೆಗೂ ಒಂದು ಲಕ್ಷಕ್ಕೂ ಅಧಿಕ ಪೈಂಟಿಂಗ್ ಅನ್ನು ಬಾಯಿಯಿಂದ ಬಿಡಿಸಿದ್ದಾರೆ.

ಇವರ ಈ ಸಾಧನೆ ಇತರರಿಗೂ ಮಾದರಿ ಆಗಿದೆ ಅಂತಾನೆ ಹೇಳಬಹುದು ಎಲ್ಲ ಇದ್ದು ಏನು ಸಾಧನೆ ಮಾಡದ ಜನರ ಮದ್ಯೆ ಇವರ ಸಾಧನೆಗೆ ಮೆಚ್ಚಲೇ ಬೇಕು.

LEAVE A REPLY

Please enter your comment!
Please enter your name here