ಮನೆಯಲ್ಲಿ ಪದೆ ಪದೇ ಕಷ್ಟಗಳು ಹಾಗು ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರದೆ, ಮನೆಯಲ್ಲಿ ಅಶಾಂತಿಯ ವಾತಾವರಣ ಅವರಿಸಿಕೊಂಡಿದ್ದರೆ ಈ ವಸ್ತು ಸಲಹೆಯನ್ನು ಅನುಸರಿಸಿ ಮನೆಯಲ್ಲಿ ನೆಮ್ಮದಿಯಾಗಿರಿ. ತಾಮ್ರದ ತಂಬಿಗೆಯಿಂದ ಉತ್ತಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು ಹಾಗು ಧಾರ್ಮಿಕವಾಗಿ ಮನೆಯಲ್ಲಿ ಅಶಾಂತಿಯ ವಾತಾವರಣವನ್ನು ನಿವಾರಿಸಿಕೊಳ್ಳಬಹುದು ಹೇಗೆ ಅನ್ನೋದನ್ನ ಮುಂದೆ ನೋಡಿ..

ತಾಮ್ರದ ತಂಬಿಗೆಯಲ್ಲಿ ಪ್ರತಿದಿನ ನೀರು ಕುಡಿಯೋದ್ರಿಂದ ಉತ್ತಮ ಅರೋಗ್ಯ ವೃದ್ಧಿಯಾಗುತ್ತದೆ, ಹಾಗು ತಾಮ್ರದ ತಂಬಿಗೆಯನ್ನು ಮನೆಯ ಆ ಜಾಗದಲ್ಲಿ ಈ ರೀತಿಯಾಗಿ ಇಟ್ಟರೆ ಮನೆಯಲ್ಲಿನ ನೆಗೆಟಿವ್ ಎನರ್ಜಿ ಹೊರ ಹೋಗಿ ಪಾಸಿಟಿವ್ ಎನರ್ಜಿ ಮನೆಯಲ್ಲಿ ಆವರಿಸುತ್ತದೆ.

ಎಷ್ಟು ದುಡಿದರು ಮನೆಯಲ್ಲಿ ದುಡಿ ಇರೋದಿಲ ಅನ್ನೋರು ಹಾಗು ಮನೆಯಲ್ಲಿ ಶಾಂತಿ ನೆಮ್ಮದಿಯ ಕೊರತೆ ಇದೆ ಅನ್ನೋರು ಇದನ್ನ ಪ್ರತಿದಿನ ಪಾಲಿಸಿ ನೋಡಿ, ಒಂದು ತಾಮ್ರದ ತಂಬಿಗೆಯನ್ನು ತಗೆದುಕೊಂಡು ಅದನ್ನು ಒಳಗೆ ಹೊರಗೆ ಚನ್ನಾಗಿ ತೊಳೆದು ಶುದ್ಧವಾದ ಗಂಗಾಜಲವನ್ನು ಅದರಲ್ಲಿ ಹಾಕಿ, ಆ ತಂಬಿಗೆಯನ್ನು ಒಂದು ಎಲೆಯ ಮೇಲೆ ಇಟ್ಟು ಅದಕ್ಕೆ ಅರಿಸಿನ ಕುಂಕುಮ, ಹೂವು ಹಾಗು ಒಂದು ರೂಪಾಯಿಯ ನಾಣ್ಯವನ್ನು ಮತ್ತು ಪಚ್ಚ ಕರ್ಪುರವನ್ನು ಹಾಕಿ.

ಹೀಗೆ ಇದೆಲ್ಲ ಹಾಕಿದ ಮೇಲೆ ನಿಮ್ಮ ಮನೆಯ ಮುಖ್ಯ ಬಾಗಿಲ ಹಿಂದೆ ಅಂದರೆ ಒಳಗಡೆ ಬಾಗಿಲ ಹಿಂದೆ ಇಡಬೇಕು, ಪ್ರತಿದಿನ ತಂಬಿಗೆಯಿಂದ ತೆಗೆಯುವ ನೀರನ್ನು ಮನೆಯ ಮುಂದಿನ ಗಿಡಗಳಿಗೆ ಹಾಕಿದರೆ ಉತ್ತಮ. ಹೀಗೆ ಪ್ರತಿದಿನ ಮಾಡುವುದರಿಂದ ಅತಿ ಬೇಗನೆ ನಿಮ್ಮ ಕಷ್ಟಗಳನ್ನು ನಿವಾರಣೆಯಾಗಿ ಆರ್ಥಿಕವಾಗಿ ವೃದ್ಧಿಯಾಗುತ್ತಿರ, ಅಷ್ಟೇ ಅಲ್ಲದೆ ನಿಮ್ಮ ಮನೆಯ ವಾಸ್ತು ದೋಷ, ದೃಷ್ಟಿ ದೋಷ, ನಿವಾರಣೆಯಾಗಿ ಮನೆಯಲ್ಲಿ ನೆಮ್ಮದಿಯ ವಾತಾವರಣೆ ನೆಲೆಸುವುದು.

LEAVE A REPLY

Please enter your comment!
Please enter your name here