ನೇಲ್ ಪಾಲಿಶ್ ಉಗುರಿನ ಸೌಂದರ್ಯವನ್ನ ಇನ್ನಷ್ಟು ಹೆಚ್ಚಿಸುವ ಒಂದು ವಸ್ತು. ಇದನ್ನ ಉಗುರುಗಳಿಗೆ ಹಚ್ಚುವ ವಿಧಾನದಲ್ಲೂ ಹಲವು ಬಗೆಗಳಿವೆ. ಮಹಿಳೆಯರು ಹೆಚ್ಚಾಗಿ ಉಗುರುಗಳಿಗೆ ಬಣ್ಣಗಳನ್ನ ಹಚ್ಚುತ್ತಾರೆ ಇದು ಅವರ ಖುಷಿಯ ಜೊತೆಗೆ ಅಂದವನ್ನ ಹೆಚ್ಚಿಸುತ್ತದೆ. ಉಗುರಿಗೆ ಹಚ್ಚಿರುವ ಬಣ್ಣ ಕೆಲವು ದಿನಗಳಾದ ಮೇಲೆ ಅಲ್ಲಲ್ಲಿ ಸ್ವಲ್ಪ ಮಟ್ಟಿಗೆ ಮಾತ್ರ ಉಳಿದುಕೊಂಡಿರುತ್ತಾರೆ. ಆಗ ಉಗುರಿನ ಅಂದ ಅಷ್ಟಾಗಿ ಅಂದವಾಗಿ ಕಾಣುವುದಿಲ್ಲ. ಹಾಗಾಗಿ ಕೆಲವು ದಿನಗಳಾದ ಮೇಲೆ ಅದನ್ನ ಸಂಪೂರ್ಣವಾಗಿ ತೆಗೆಯಲು ಮಹಿಳೆಯರು ನೇಲ್ ರಿಮೂವರ್ ಅನ್ನು ಬಳಸುತ್ತಾರೆ.

ಮಾರುಕಟ್ಟೆಯಲ್ಲಿ ಬಗೆ ಬಗೆಯ ಕಂಪನಿಯ ನೇಲ್ ರಿಮೂವರ್ ಗಳು ಲಭ್ಯವಿವೆ. ಆದರೆ ಮಾರುಕಟ್ಟೆಯಲ್ಲಿ ಸಿಗುವುದನ್ನ ಬಿಟ್ಟು ಮನೆಯಲ್ಲಿಯೇ ಇರುವ ವಸ್ತುಗಳನ್ನ ಬಳಸಿ ನೇಲ್ ಪಾಲಿಶ್ ರಿಮೂವ್ ಮಾಡುವ ಕೆಲವು ವಿಧಾನಗಳು ಇಲ್ಲಿವೆ ನೋಡಿ…..

* ಹಾಟ್ ಡ್ರಿಂಕ್ಸ್
ಮನೆಯಲ್ಲಿ ಹಾಟ್ ಡ್ರಿಂಕ್ಸ್ ಇದ್ದರೆ ಅದನ್ನು ಉಗುರಿನ ಮೇಲೆ ಹಾಕಿ ಹತ್ತಿಯ ಬಟ್ಟೆಯ ಸಹಾಯದಿಂದ ನಿದಾನವಾಗಿ ಒರೆಸಿದರೆ ಉಗುರಿನ ಬಣ್ಣ ಸಂಪೂರ್ಣವಾಗಿ ಹೋಗಿ ಉಗುರು ಸ್ವಚ್ಛವಾಗುತ್ತದೆ.

* ಟೂತ್ ಪೇಸ್ಟ್
ಟೂತ್ಪೇಸ್ಟ್ ನಿಂದ ಅನೇಕ ಉಪಯೋಗಗಳನ್ನ ನಾವೀಗಾಗಲೇ ಪಡೆದುಕೊಂಡಿದ್ದೇವೆ. ಈ ಟೂತ್ ಪೇಸ್ಟ್ ನಿಂದ ಉಗುರಿನ ಬಣ್ಣವನ್ನ ಸಹ ತೆಗೆಯಬಹುದು. ಉಗುರಿಗೆ ಟೂತ್ಪೇಸ್ಟ್ ಹಚ್ಚಿ. ನಿಧಾನವಾಗಿ ಉಗುರನ್ನು ಮಸಾಜ್ ಮಾಡಿ. ತಣ್ಣೀರಿನಲ್ಲಿ ತೊಳೆದರೆ ಬಣ್ಣ ಹೋಗುತ್ತದೆ.

* ನೇಲ್ ಪಾಲಿಶ್
ನೇಲ್ ಪಾಲಿಶ್ ಕೂಡ ಉಗುರಿಗೆ ಅಂಟಿರುವ ನೇಲ್ ಪಾಲಿಶ್ ತೆಗೆಯಲು ಸಹಕಾರಿ. ಇರುವ ಬಣ್ಣದ ಮೇಲೆ ಇನ್ನೊಂದು ನೇಲ್ಉ ಪಾಲಿಶ್ ಹಚ್ಚಿ ಹತ್ತಿಯ ಬಟ್ಟೆಯಿಂದ ಒರೆಸಿದರೆ ಬಣ್ಣ ಹೋಗುತ್ತದೆ.

* ವಿನೆಗರ್
ಒಂದೆರತದು ಹನಿಗಳಷ್ಟು ವಿನೆಗರ್ ಅನ್ನು ಹತ್ತಿಯ ಮೇಲೆ ಹಾಕಿ ಅದನ್ನು ಉಗುರಿನ ಬಣ್ಣದ ಮೇಲೆ ನಯವಾಗಿ ಉಜ್ಜಿದರೆ ಉಗುರಿನ ಬಣ್ಣ ಹೋಗುತ್ತದೆ.

* ಬಿಸಿ ನೀರು
ಬಿಸಿ ಬಿಸಿ ನೀರಿನಲ್ಲಿ 10 ನಿಮಿಷ ಉಗುರುಗಳನ್ನ ಮುಳುಗಿಸಿಡಿ ನಂತರ ಹತ್ತಿಯಲ್ಲಿ ನಿಧಾನವಾಗಿ ಉಗುರಿನ ಬಣ್ಣವನ್ನು ಒರೆಸಿ ಬಣ್ಣ ಹೋಗುತ್ತದೆ.

LEAVE A REPLY

Please enter your comment!
Please enter your name here