ಕಳೆದ ಹತ್ತು ದಿನಗಳಿಂದ ಬರುತ್ತಿರುವ ಮಳೆಯಿಂದಾಗಿ ಕರಾವಳಿ ಹಾಗೂ ಉತ್ತರ ಕರ್ನಾಟಕದ ಜನರ ಪರಿಸ್ಥಿತಿ ತುಂಬಾನೇ ಕಷ್ಟಕರವಾಗಿದ್ದು, ಹಲವು ಸಹಾಯಗಳ ಅಗತ್ಯತೆ ಹೆಚ್ಚಾಗಿ ಬೇಕಾಗುತ್ತದೆ. ಹೀಗಾಗಲೇ ಬಹಳಷ್ಟು ಜನರು ನಮ್ಮ ಕ್ರನಾಟಕದ ಉಳಿವಿಗಾಗಿ ಅಗತ್ಯವಾದ ವಸ್ತುಗಳನ್ನು ಸಹಾಯ ಮಾಡಲು ಮುಂದಾಗಿದ್ದಾರೆ. ನೆರೆ ಪೀಡಿತರಿಗಾಗಿ ಜೋಳಿಗೆ ಹಿಡಿದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ನೆರೆ ಸಂತ್ರಸ್ತರಿಗಾಗಿ ನೆರವಿಗಾಗಿ ಸ್ವಾಮೀಜಿಯವರು ಈ ಕೆಲಸಕ್ಕೆ ಮುಂದಾಗಿದ್ದಾರೆ.

ಅಷ್ಟೇ ಅಲ್ಲದೆ ಮಹಾಮಳೆಯಿಂದ ಲಕ್ಷಾಂತರ ಜನರ ಬದುಕು ಬೀದಿಗೆ ಬಂದಿದೆ. ಪ್ರವಾಹದಿಂದ ಕಂಗಲಾಗಿರುವ ಕರ್ನಾಟಕದ ಪ್ರಕೃತಿ ವಿಕೋಪವನ್ನು ರಾಷ್ಟ್ರೀಯ ವಿಪತ್ತೆಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕೂಡಲೇ ಘೋಷಣೆ ಮಾಡಬೇಕು ಎಂದು ಸಿದ್ಧರಬೆಟ್ಟದ ಶ್ರೀ ವೀರಭದ್ರ ಶಿವಚಾರ್ಯ ಸ್ವಾಮೀಜಿ ಆಗ್ರಹಿಸಿದರು.

ಪಟ್ಟಣದ ಸರಕಾರಿ ಬಸ್‌ ನಿಲ್ದಾಣ, ಮುಖ್ಯರಸ್ತೆ ಮತ್ತು ಪಪಂ ಮುಂಭಾಗ ಹಿಂದು-ಮುಸ್ಲಿಂ ಬಾಂಧವರು ಸೋಮವಾರ ನಡೆಸಿದ ನೇರೆ ಸಂತ್ರಸ್ತರಿಗೆ ದೇಣಿಗೆ ಸಂಗ್ರಹ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಬೆಳಗಾವಿ, ಕಲಬುರಗಿ, ಉಡುಪಿ, ಬಾಗಲಕೋಟೆ, ವಿಜಯಪುರ, ಕೊಪ್ಪಳ, ಧಾರವಾಡ, ಉತ್ತರ ಕನ್ನಡ, ಬಳ್ಳಾರಿ, ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಗದಗ, ಕೊಡಗು ಸೇರಿ 17 ಜಿಲ್ಲೆಗಳು ಪ್ರವಾಹಕ್ಕೆ ಸಿಲುಕಿವೆ. ಪ್ರವಾಹದಿಂದ ನೊಂದ ಜೀವಗಳ ಜತೆ ಕರುನಾಡು ಸದಾ ಜತೆಗಿದೆ. ಅವರಿಗೆ ಬೇಕಾದ ಅಗತ್ಯ ವಸ್ತುಗಳನ್ನು ಪೂರೈಸುವುದು ನಮ್ಮೆಲ್ಲರ ಪ್ರಮುಖ ಕರ್ತವ್ಯವಾಗಿದೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here