ಸಾವಿರಾರು ಭಕ್ತರನ್ನು ಹೊಂದಿರುವಂತ ಗುರುರಾಯರ ಸನ್ನಿದಿ ಇರುವುದು ಮಂತ್ರಾಲಯದಲ್ಲಿ. ಕರ್ನಾಟಕದ ರಾಯಚೂರಿನಿಂದ ಒಂದು ಗಂಟೆಗಳ ಪ್ರಯಾಣವಾಗುತ್ತದೆ. ರಾಯರ ಸನ್ನಿದಿಗೆ ಪ್ರತಿದಿನ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಪ್ರತಿ ವರ್ಷವು ಶ್ರಾವಣ ಕೃಷ್ಣ ಪಕ್ಷ ಪಾಡ್ಯದಿಂದ ಶ್ರಾವಣ ಕೃಷ್ಣ ಪಕ್ಷ ತದಗಿವರೆಗೂ ಭವ್ಯ ಆರಾಧನೆ ನಡೆಯುತ್ತದೆ.

ಪ್ರತಿ ದೇವರುಗಳು ಹಾಗು ದೇವಾಲಯಗಳು ತನ್ನದೆಯಾದ ವಿಶೇಷವಾದ ಮಹತ್ವವನ್ನು ಹೊಂದಿರುತ್ತವೆ, ಅದೇ ರೀತಿಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿದಿಯಲ್ಲೂ ವಿಭಿನ್ನತೆ ಕಾಣಬಹುದು. ಬೇರೆ ಬೇರೆ ದೇವಾಲಯಗಳಲ್ಲಿ ದೇವರ ಪ್ರಸಾದವೆಂದು ಕುಂಕುವ, ತೀರ್ಥ, ಹೂವು ಮುಂತಾದವುಗಳನ್ನು ಕೊಡುತ್ತಾರೆ, ಆದರೆ ರಾಯರ ಸನ್ನಿದಿಯಲ್ಲಿ ಮಂತ್ರಾಕ್ಷತೆ ಕೊಡುವುದರ ಹಿಂದೆ ಒಂದು ಕಾರಣ ಹಾಗು ಪವಾಡ ಇದೆ ಅದು ಏನು ಅನ್ನೋದನ್ನ ಮುಂದೆ ನೋಡಿ…

ಶ್ರೀ ರಾಘವೇಂದ್ರ ಸ್ವಾಮಿಗಳ ಬಳಿಯಲ್ಲಿ ಅನೇಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುತ್ತಾರೆ. ತಮ್ಮ ವ್ಯಾಸಂಗವನ್ನು ಮುಗಿಸಿಕೊಂಡು ಮನೆಗೆ ಹೋಗುವಾಗ ಒಬ್ಬ ಬಡ ವಿದ್ಯಾರ್ಥಿ ತಮ್ಮ ಬಡತನದ ಕಷ್ಟವನಲ್ಲ ರಾಯರ ಬಳಿ ಹೇಳುತ್ತಾನೆ.

ತನ್ನ ಕಷ್ಟವನ್ನೆಲ್ಲ ಹೇಳಿಕೊಂಡ ಭಕ್ತನು ತನ್ನನ್ನು ಅನುಗ್ರಹಿಸಬೇಕು ಸ್ವಾಮಿ ಎಂಬುದಾಗಿ ಬೇಡಿಕೊಳ್ಳುತ್ತಾನೆ, ಆ ಸಮಯದಲ್ಲಿ ಸ್ನಾನದಲ್ಲಿದ ರಾಯರು ನನ್ನ ಬಳಿ ಕೊಡಲು ಏನು ಇಲ್ಲವಲ್ಲ ಎಂಬುದಾಗಿ ಹೇಳಿದಾಗ, ಭಕ್ತನು ಸ್ವಾಮಿ ನೀವು ಏನು ಕೊಟ್ಟರು ನಾನು ಅದನ್ನು ಮಹಾ ಪ್ರಸಾದವಾಗಿ ಸ್ವೀಕರಿಸುತ್ತೇನೆ ಒಂದು ಹಿಡಿ ಮಂತ್ರಾಕ್ಷತೆಯನ್ನಾದರೂ ತಮ್ಮ ಕೈಯಿಂದ ದಯಪಾಲಿಸಬೇಕೆಂದು ಭಕ್ತಿಯಿಂದ ಬೇಡಿದನು.

ಭಕ್ತಿಯಿಂದ ಬೇಡಿದ ಭಕ್ತನನ್ನು ರಾಯರು ಒಂದು ಹಿಡಿ ಮಂತ್ರಾಕ್ಷತೆಯನ್ನು ಕೊಡುತ್ತಾರೆ, ಅದನ್ನು ಭಕ್ತನು ಮಹಾ ಪ್ರಸಾದ ಎಂಬುದಾಗಿ ಸ್ವೀಕರಿಸಿ ಊರಿಗೆ ಹೊರಡುತ್ತಾನೆ. ಊರಿಗೆ ಹೋಗುವ ಸಂದರ್ಭದಲ್ಲಿ ತಡವಾಗಿ ಕತ್ತಲಾಗುತ್ತವೆ. ಹೋಗುವ ದಾರಿಯಲ್ಲಿ ಒಂದು ಮನೆ ಇರುತ್ತದೆ ಆ ಮನೆಯಲ್ಲಿ ಒಂದು ರಾತ್ರಿ ಉಳಿಯಲಿ ಅಪ್ಪಣೆ ಕೇಳಿಕೊಳ್ಳುತ್ತಾನೆ. ಆ ಮನೆಯವರು ಜಗಲಿ ಕಟ್ಟೆಯ ಮೇಲೆ ಮಲಗಲು ಅಪ್ಪಣೆ ಕೊಡುತ್ತಾರೆ

ಆ ಮನೆಯ ಮಾಲೀಕನ ಹೆಂಡತಿ ಗರ್ಭಿಣಿಯಾಗಿದ್ದಳು. ಮಧ್ಯರಾತ್ರಿಯಲ್ಲಿ ಒಂದು ಪಿಶಾಚಿಯು ಆ ಮನೆಯೊಳಗೆ ಹೋಗಿ, ಗರ್ಭಿಣಿಯ ಹೊಟ್ಟೆಯಲ್ಲಿರುವ ಮಗುವನ್ನು ಕೊಲ್ಲಬೇಕೆಂದು ಅಲ್ಲಿಗೆ ಬಂದಿತು. ಆದರೆ ಜಗಲಿಯಲ್ಲಿ ಮಲಗಿದ ಭಕ್ತನ ಬಳಿಯಿರುವ ಮಂತ್ರಾಕ್ಷತೆ ದಾಟಲು ಪ್ರಯತ್ನಿಸಿದಾಗ ಮಂತ್ರಾಕ್ಷತೆ ಬೆಂಕಿಯಂತೆ ಕಂಡು ಬಂದಿತು. ಇದರಿಂದ ಗಾಬರಿಗೊಂಡ ಪಿಶಾಚಿಯು ಭಕ್ತನನ್ನು ನೋಡಿ ಮಂತ್ರಾಕ್ಷತೆ ದೂರ ಎಸೆಯಲು ಹೇಳುತ್ತದೆ.

ಪಿಶಾಚಿಯನ್ನು ನೋಡಿ ಹೆದರಿದ ಭಕ್ತನು ಮಂತ್ರಾಕ್ಷತೆಯನ್ನು ಅದರ ಮೇಲೆ ಎಸೆಯುತ್ತಾನೆ. ರಾಯರು ಕೊಟ್ಟಂತ ಮಂತ್ರಾಕ್ಷತೆಯಿಂದ ಆ ಪಿಶಾಚಿ ಅಲ್ಲೇ ಸುಟ್ಟು ಭಸ್ಮವಾಗುತ್ತದೆ. ಆಗಾಗಿ ಅಂದಿನಿಂದ ರಾಯರ ಸನ್ನಿದಿಯಲ್ಲಿ ಪ್ರಸಾದದ ರೂಪದಲ್ಲಿ ಮಂತ್ರಾಕ್ಷತೆಯನ್ನು ಕೊಡುತ್ತಾರೆ ಎಂಬುದಾಗಿ ಹೇಳಲಾಗುತ್ತದೆ.

LEAVE A REPLY

Please enter your comment!
Please enter your name here