ನಾವು ಸಾಮಾನ್ಯವಾಗಿ ಪಡ್ಡು ದೋಸೆ ಇಡ್ಲಿ ಮಾಡ್ತಾನೆ ಇರುತ್ತೀವಿ ಇಡ್ಲಿ ಹಿಟ್ಟಿಗೂ ಪಡ್ಡಿನ ಹಿಟ್ಟಿಗೂ ಅಷ್ಟಾಗಿ ವ್ಯತ್ಯಾಸ ಇರುವುದಿಲ್ಲ. ಪಡ್ಡನ್ನು ತಿಂದಿರ್ತೀವಿ ಆದರೆ ವೆಜಿಟೇಬಲ್ ಪಡ್ಡು ತಿಂದಿರಲ್ಲ. ಇಲ್ಲಿದೆ ನೋಡಿ ವೆಜಿಟೇಬಲ್ ಪಡ್ಡು ಮಾಡುವ ಸುಲಭ ವಿಧಾನ….

ಬೇಕಾಗುವ ಪದಾರ್ಥಗಳು
* ಅರ್ಧ ಕಪ್ ಇಡ್ಲಿ ಹಿಟ್ಟು
* 1 ಚಿಕ್ಕ ಕ್ಯಾರೆಟ್
* 1 ಈರುಳ್ಳಿ (ಚಿಕ್ಕದಾಗಿ ಕತ್ತರಿಸಿದ್ದು)

* 2-3 ಚಮಚ ಎಲೆಕೋಸು (ಕ್ಯಾಬೇಜ್‌)
* 1 ಚಮಚ ಪುದೀನಾ
* 1-2 ಹಸಿ ಮೆಣಸಿನಕಾಯಿ
* ಸ್ವಲ್ಪ ಕೊತ್ತಂಬರಿ ಸೊಪ್ಪು

* ಸ್ವಲ್ಪ ಶುಂಠಿ
* 3 ಚಮಚ ಎಣ್ಣೆ
* ರುಚಿಗೆ ತಕ್ಕ ಉಪ್ಪು

ಮಾಡುವ ವಿಧಾನ
ಎಲ್ಲಾ ಸಾಮಾಗ್ರಿಯನ್ನು ಹಿಟ್ಟಿಗೆ ಹಾಕಿ ಚನ್ನಾಗಿ ಮಿಕ್ಸ್‌ ಮಾಡಿ. ಈಗ ಪಡ್ಡು ಕಾವಲಿಯನ್ನು ಬಿಸಿ ಮಾಡಿ ಅದಕ್ಕೆ ಎಣ್ಣೆ ಸವರಿ, ಮಿಕ್ಸ್ ಮಾಡಿಟ್ಟ ಹಿಟ್ಟು ಹಾಕಿ, 2 ನಿಮಿಷ ಬಿಸಿ ಮಾಡಿ, ಚಿಕ್ಕ ಕಡ್ಡಿಯಿಂದ ಚುಚ್ಚಿ ಮಗುಚಿ ಹಾಕಿ. ಈ ರೆಡಿಯಾದ ಪಡ್ಡು ಅನ್ನು ಬಿಸಿ-ಬಿಸಿ ಇರುವಾಗಲೇ ಖಾರ ಚಟ್ನಿ ಜತೆ ಸವಿಯಿರಿ. ಇಲ್ಲ ಕಾಯಿ ಚಟ್ನಿ ಜೊತೆಯೂ ತಿನ್ನಬಹುದು.

 

LEAVE A REPLY

Please enter your comment!
Please enter your name here