ಹೌದು ನೈಸರ್ಗಿಕವಾಗಿ ನಾವುಗಳು ಎಷ್ಟೊಂದು ಆರೋಗ್ಯಕಾರಿ ಲಾಭಗಳನ್ನು ಪಡೆಯಬಹುದು ಗೋತ್ತಾ.? ಆದ್ರೆ ಅವುಗಳ ಬಗ್ಗೆ ನಮಗೆ ಸರಿಯಾದ ಮಾಹಿತಿ ತಿಳಿದಿರ ಬೇಕು ಅಷ್ಟೇ . ಮನೆಯ ಮುಂದೆ ಯಾವುದೇ ರೀತಿಯ ಸೊಳ್ಳೆಗಳು ಹಾಗು ವಿಷಕಾರಿ ಜಂತುಗಳು ಬಾರದ ಹಾಗೆ ಮಾಡಲು ಮನೆ ಮುಂದೆ ಈ ಗಿಡಗಳನ್ನು ಬೆಳೆಸಿ. ಅಷ್ಟೇ ಅಲ್ಲದೆ ಮನೆಯ ಮುಂದೆ ಒಳ್ಳೆಯ ಗಿಡಗಳನ್ನು ಬೆಳೆಸಿದರೆ ಉತ್ತಮ ಅರೋಗ್ಯ ನಿಮ್ಮ ಕೈಯಲ್ಲಿದ್ದಂತೆ.

ಅಷ್ಟಕ್ಕೂ ಮನೆಯ ಮುಂದೆ ಯಾವ ಗಿಡಗಳನ್ನು ಬೆಳೆಸ ಬೇಕು ಹಾಗು ಇವುಗಳು ನಮಗೆ ಹೇಗೆ ಸಹಾಯಕವಾಗಿವೆ ಅನ್ನೋದನ್ನ ತಿಳಿಯೋಣ ಬನ್ನಿ …

ಸೊಳ್ಳೆಗಳ ಕಾಟದಿಂದ ಬೇಸತ್ತಿರುತ್ತೀರಾ ಹಾಗು ಅವುಗಳನ್ನ ನಿಯಂತ್ರಿಸಲು ಹಲವು ಹರಸಾಹಸ ಪಡುತ್ತೀರ, ಆದ್ರೆ ಅದೆಲ್ಲವನ್ನು ಬಿಡಿ ಮನೆ ಮುಂದೆ ಈ ಗಿಡಗಳನ್ನು ಬೆಳೆಸಿ ನೋಡಿ …

ನಿಮ್ಮ ಮನೆಯ ಮುಂದೆ ತುಳಸಿ ಗಿಡವನ್ನು ಬೆಳೆಸಿ ಯಾಕೆಂದರೆ ಇದು ಅನಾರೋಗ್ಯ ಸಮಸ್ಯೆಗಳಷ್ಟೇ ಅಲ್ಲ, ಸೊಳ್ಳೆಗಳನ್ನು ಓಡಿಸುವ ಶಕ್ತಿ ಹೊಂದಿದೆ. ಇವುಗಳ ಹೂವುಗಳು ಸೊಳ್ಳೆಗಳನ್ನು ದೂರ ಓಡಿಸುತ್ತವೆ ಅಷ್ಟೇ ಅಲ್ಲದೆ ತುಳಸಿ ಗಿಡ ನಿಮ್ಮ ಮನೆಯ ಮುಂದಿದ್ದಾರೆ ಹತ್ತಾರು ಆರೋಗ್ಯಕಾರಿ ಲಾಭಗಳನ್ನು ಪಡೆಯಬಹುದು.

ಮನೆ ಮುಂದೆ ಲವಂಗದ ಗಿಡವನ್ನು ಬೆಳೆಸಿದರೆ ಇನ್ನು ಉತ್ತಮ ಹೇಗೆಂದರೆ ಲವಂಗ ಗಿಡದ ಎಲೆಗಳಿಂದ ಬರುವ ವಾಸನೆ ಅಷ್ಟೇ ಅಲ್ಲ, ಈ ಗಿಡದ ಹೂವುಗಳು ಸಹ ಸೊಳ್ಳೆಗಳನ್ನು ಓಡಿಸುತ್ತವೆ.ಲವಂಗ ಎಣ್ಣೆಯನ್ನು ನಿದ್ರಿಸುವ ಮುನ್ನ ಚರ್ಮಕ್ಕೆ ಹಚ್ಚಿಕೊಂಡರೆ ಆ ವಾಸನೆಗೂ ಸೊಳ್ಳೆಗಳು ಹತ್ತಿರ ಸುಳಿಯಲ್ಲ.

ಮತ್ತೊಂದು ಗಿಡ ಎಂದರೆ ಚಂಡು ಹೂವಿನ ಗಿಡ ಈ ಚೆಂಡು ಹೂವಿನ ಗಿಡಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ಸೊಳ್ಳೆಗಳಿಂದ ಪಾರಾಗಬಹುದು. ಚೆಂಡು ಹೂಗಳನ್ನು ಅರೆದು ಚರ್ಮಕ್ಕೆ ಹಚ್ಚಿಕೊಂಡರೆ ಸೊಳ್ಳೆಗಳು ಕಚ್ಚದಂತೆ ಇರುತ್ತವೆ. ಅಷ್ಟೇ ಅಲ್ಲದೆ ಈ ಗಿಡಗಳನ್ನು ನಿಮ್ಮ ಮನೆ ಮುಂದೆ ಬೆಳೆಸಿದರೆ ಇವುಗಳ ವಾಸನೆಗೆ ಮನೆಯ ಮುಂದೆ ಯಾವುದೇ ವಿಷಕಾರಿ ಜಂತುಗಳು ಸುಳಿಯುವುದಿಲ್ಲ ಎಂಬುದಾಗಿ ಹೇಳುತ್ತಾರೆ ಹಿರಿಯರು.

LEAVE A REPLY

Please enter your comment!
Please enter your name here