ಮನುಷ್ಯನಿಗೆ ಉತ್ತಮ ಅರೋಗ್ಯ ಇರಲು ಬರಿ ಊಟ ಗಾಳಿ ನೀರು ಅಷ್ಟೇ ಅಲ್ಲ, ಅವುಗಳ ಜೊತೆಗೆ ಒಳ್ಳೆಯ ನಿದ್ರೆ ಕೂಡ ಹೆಚ್ಚು ಅವಶ್ಯಕವಾಗಿದೆ. ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಎಷ್ಟು ಗಂಟೆಗಳ ಕಾಲ ನಿದ್ರೆ ಮಾಡಬೇಕು.? ಕಡಿಮೆ ನಿದ್ರೆ ಮಾಡಿದರೆ ಏನಾಗುತ್ತದೆ ಅನ್ನೋದನ್ನ ಮುಂದೆ ತಿಳಿಯೋಣ ಬನ್ನಿ..

ಕೆಲವೊಂದು ಸಂಶೋಧನೆಗಳ ಪ್ರಕಾರ ಒಬ್ಬ ವ್ಯಕ್ತಿ ಉತ್ತಮ ಆರೋಗ್ಯವಂತನಾಗಿರಲು, ಕನಿಷ್ಠ ದಿನಕ್ಕೆ ೭ ರಿಂದ ೮ ತಾಸುಗಳ ನಿದ್ರೆ ಮಾಡಬೇಕಾಗುತ್ತದೆ. ಹೀಗೆ ನಿದ್ರೆ ಮಾಡುವುದರಿಂದ ದೇಹದ ಆರೋಗ್ಯಕ್ಕೆ ಹೆಚ್ಚು ಸಹಕಾರಿಯಾಗುತ್ತದೆ ಎಂಬುದಾಗಿ ಹೇಳಲಾಗುತ್ತದೆ.

ಕಡಿಮೆ ನಿದ್ರೆ ಮಾಡುವುದರಿಂದ ಏನಾಗುತ್ತದೆ..
ಸಂಶೋಧನ ತಜ್ಞರು ಹೇಳುವ ಪ್ರಕಾರ ಕಡಿಮೆ ನಿದ್ರೆ ಮಾಡುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ, ಹಾಗು ಯಾವುದೇ ರೋಗಗಳು ದೈಹಿಕ ಸಮಸ್ಯೆಗಳು ಬಂದ್ರೆ ಬೇಗನೆ ವಾಸಿಯಾಗುವುದಿಲ್ಲ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದ್ದರೆ ಯಾವುದೇ ತರಹದ ರೋಗಗಳು ಬಂದ್ರೆ ಅದನ್ನು ನಿವಾರಿಸುವ ಸಾಮರ್ಥ್ಯ ರೋಗನಿರೋಧಕ ಕಣಗಳಿಗಿರುತ್ತವೆ.

ದೇಹದಲ್ಲಿ ರೋಗನಿರೋಧಕ ಕಣಗಳು ಉತ್ತಮವಾಗಿದ್ದರೆ ಯಾವುದೇ ಕಾಯಿಲೆಗಳು ರೋಗಗಳು ಬಂದಾಗ ಔಷಧಿಗಳನ್ನು ತಗೆದುಕೊಂಡರೆ ಅವುಗಳಿಗೆ ರೋಗನಿರೋಧಕ ಕಣಗಳು ಸ್ಪಂದಿಸುತ್ತವೆ. ಹಾಗಾಗಿ ದೇಹಕ್ಕೆ ಒಳ್ಳೆಯ ಆಹಾರದ ಜೊತೆಗೆ ಒಳ್ಳೆಯ ನಿದ್ರೆ ಇದ್ರೆ ಮನುಷ್ಯ ಅರೋಗ್ಯ ಹಾಗು ಆಯಸ್ಸು ಹೆಚ್ಚುತ್ತದೆ.

LEAVE A REPLY

Please enter your comment!
Please enter your name here