ರಾತ್ರಿ ಮಲಗುವಾಗ ನಮ್ಮ ದೇಹದಲ್ಲಿ ಹಲವು ಬದಲಾವಣೆಗಳು ಆಗುತ್ತಿರುತ್ತವೆ, ಆದ್ರೆ ಅವುಗಳ ಬಗ್ಗೆ ನಮಗೆ ನೇರವಾಗಿ ತಿಳಿಯೋದಿಲ್ಲ. ಬಹಳಷ್ಟು ಜನ ಕೂಡ ಹಾಗೆ ಹೇಳುತ್ತಾರೆ ಮಲಗುವಾಗ ಎಡಗಡೆ ಹೊರಳಿ ಮಲಗಬೇಕು ಎಂಬುದಾಗಿ, ಆದ್ರೆ ಇದರ ಇದರ ಹಿಂದಿರುವ ವೈಜ್ಞಾನಿಕ ಕಾರಣ ಹಾಗು ಲಾಭವೇನು ಅನ್ನೋದನ್ನ ತಿಳಿಯೋಣ ಬನ್ನಿ..

ರಾತ್ರಿ ಮಲಗುವಾಗ ಹೇಗೆ ಬೇಕು ಹಾಗೆ ಮಲಗುವುದರಿಂದ ದೇಹದ ಮೇಲೆ ಪರಿಣಾಮ ಬೀರುತ್ತದೆ, ಹಾಗಾಗಿ ಮಲಗುವಾಗ ಉತ್ತಮ ವಿಧಾನಗಳನ್ನು ಅನುಸರಿಸುವುದು ಉತ್ತಮ. ದೇಹಕ್ಕೆ ಒಳ್ಳೆಯ ಆಹಾರದ ಜೊತೆಗೆ ನಿದ್ರೆ ಕೂಡ ಅಷ್ಟೇ ಮಹತ್ವವಾದದ್ದು. ವಿಷ್ಯಕ್ಕೆ ಬರೋಣ ಎಡಗಡೆ ಹೊರಳಿ ಮಲಗುವುದರಿಂದ ದೇಹಕ್ಕೆ ಏನು ಲಾಭ ಅನ್ನೋದನ್ನ ನೋಡಣ.

ಎಡಗಡೆ ಮಲಗುವುದರಿಂದ ಆರೋಗ್ಯಕ್ಕೆ ಹೃದಯದ ಆರೋಗ್ಯಕ್ಕೆ ಒಳ್ಳೆಯದು, ಯಾಕೆಂದರೆ ಎಡಭಾಗದಲ್ಲಿ ಹೃದಯ ಇರೋದ್ರಿಂದ ಹೃದಯಕ್ಕೆ ರಕ್ತ ಸಂಚಾರ ಸರಿಯಾಗಿ ಆಗುತ್ತದೆ. ಇದರಿಂದ ಹೃದಯ ಅರೋಗ್ಯ ಉತ್ತಮ ರೀತಿಯಲ್ಲಿರುತ್ತದೆ. ಹಾಗಾಗಿ ಹಿರಿಯರು ಗರ್ಭಿಣಿಯರಿಗೆ ಎಡಗಡೆ ಹೊರಳಿ ಮಲಗಲು ಹೇಳುತ್ತಾರೆ.

ಎಡಗಡೆ ಮಲಗುವುದರಿಂದ ಜೀರ್ಣಕ್ರಿಯೆ ಸರಾಗವಾಗಿ ನಡೆಯುತ್ತದೆ, ಅಜೀರ್ಣತೆ ಮುಂತಾದ ಸಮಸ್ಯೆ ಕಾಡುವುದಿಲ್ಲ. ಅಷ್ಟೇ ಅಲ್ಲದೆ ಬೆನ್ನುಗಳ ಮೂಳೆಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ, ಜೊತೆಗೆ ಬೆನ್ನು ನೋವು ಇದ್ರೆ ನಿವಾರಣೆಯಾಗುತ್ತದೆ.
ಎಡಗಡೆ ಮಲಗುವುದರಿಂದ ದೇಹದಲ್ಲಿ ರಕ್ತ ಸಂಚಾರ ಸರಳವಾಗಿ ಸಂಚರಿಸಲು ಸಹಕಾರಿಯಾಗುತ್ತದೆ. ಬಲಗಡೆ ಮಲಗುವುದರಿಂದ ರಕ್ತ ಸಂಚಾರಕ್ಕೆ ಅಡೆತಡೆಯಾಗುತ್ತದೆ ಎಂಬುದಾಗಿ ಹೇಳಲಾಗುತ್ತದೆ.

LEAVE A REPLY

Please enter your comment!
Please enter your name here