ಸಿದ್ಧಗಂಗಾ ಸ್ವಾಮೀಜಿಯವರ ಹುಟ್ಟೂರು ವೀರಾಪುರ ಎಂಬುದಾಗಿ, ಬಾಲ್ಯದಲ್ಲಿ ಶಿವಣ್ಣನಾಗಿದ್ದ ಸ್ವಾಮೀಜಿಗಳು ಇಂದು ಸಿದ್ಧಗಂಗ ಮಠದ ಶಿವಕುಮಾರ ಸ್ವಾಮಿಯಾಗಿ ಜಗತ್ ಪ್ರಸಿದ್ಧಿಯಾಗಿದ್ದಾರೆ, ಸಾವಿರಾರು ಜನರಿಗೆ ದಾರಿದೀಪವಾಗಿರುವ ಶ್ರೀಗಳು ಅದೆಷ್ಟೋ ಮಕ್ಕಳ ಬಾಳಿಗೆ ಬೆಳಕಾಗಿದ್ದಾರೆ.

ತಮ್ಮ ಹುಟ್ಟೂರು ವೀರಪುರಕ್ಕೆ ಕೊನೆಯದಾಗಿ ಹೋಗಿದ್ದು 2003 ಅಕ್ಟೋಬರ್ ತಿಂಗಳಲ್ಲಿ, ಇಂದಿಗೆ ಸುಮಾರು ೧೫ ವರ್ಷಗಳು. ಹೌದು ೧೫ ವರ್ಷಗಳ ಹಿಂದೆ ಶ್ರೀಗಳು ತಮ್ಮ ಹುಟ್ಟೂರು ವೀರಪುರಕ್ಕೆ ಗ್ರಾಮದ ಶಾಲೆಗೆ ಜಾಗ ಕಡಿತೆ ಇದ್ದದನ್ನು ಗಮನಿಸಿದ ಅಂದಿನ ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಾಧರಯ್ಯ ಅವರು, ಗ್ರಾಮಸ್ಥರ ನೆರವು ಪಡೆದು ಒಂದಿಷ್ಟು ಜಾಗವನ್ನು ಪಡೆದು ಶಾಲೆಗೆ ಕಾಂಪೌಂಡ್‌ವೊಂದನ್ನು ನಿರ್ಮಿಸಿದ್ದರು. ಅದರ ಉದ್ಘಾಟನೆಗೆ ಶ್ರೀಗಳನ್ನು ಆಹ್ವಾನಿಸಿದ್ದರು ಆ ಸಂದರ್ಭದಲ್ಲಿ ಶ್ರೀಗಳು ತಮ್ಮ ಹುಟ್ಟೂರಿಗೆ ಹೋಗಿದ್ದರು ಅಂದೇ ಕೊನೆ ಮತ್ತೆ ಇಂದಿಗೂ ತಮ್ಮ ಹುಟ್ಟೂರು ಕಡೆಗೆ ಹೋಗಲಿಲ್ಲ.

ನೆನ್ನೆ ನಮ್ಮನೆಲ್ಲ ಬಿಟ್ಟು ನಡೆದಾಡುವ ದೇವರು ದೇವಲೋಕಕ್ಕೆ ಹೊರಟಿದ್ದಾರೆ, ಇಂದು ಶ್ರೀಗಳು ಐಕ್ಯರಾಗಲು ಸಕಲ ಸಿದ್ಧತೆ ನಡೆಯುತ್ತಿದೆ.

LEAVE A REPLY

Please enter your comment!
Please enter your name here