ಹೌದು ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹಲವು ಆಚಾರ ವಿಚಾರಗಳಿವೆ. ಮನುಷ್ಯ ಹುಟ್ಟಿಂದ ಸಾಯುವವರೆಗೆ ಹಲವು ರೂಡಿ ಸಂಪ್ರದಾಯಗಳನ್ನು ಹೊಂದಿರುತ್ತಾನೆ. ಹಾಗೆಯೆ ಸತ್ತ ವ್ಯಕ್ತಿಯನ್ನು ಹಲವು ರೀತಿಯಲ್ಲಿ ಸಂಪ್ರದಾಯದ ಮೂಲಕ ಅಂತ್ಯ ಕ್ರಿಯೆಯನ್ನು ಮುಗಿಸುತ್ತಾರೆ. ಆದ್ರೆ ಸತ್ತ ವ್ಯಕ್ತಿಯ ಕಾಲಿನ ಹೆಬ್ಬೆರಳನ್ನು ಒಟ್ಟಿಗೆ ಸೇರಿಸಿ ಕಟ್ಟುತ್ತಾರೆ ಅದು ಯಾಕೆ ಅನ್ನೋ ಪ್ರಶ್ನೆ ಎಲ್ಲರಿಗು ಇರುತ್ತದೆ ಅದು ಯಾಕೆ ಅನ್ನೋದು ಮುಂದೆ ನೋಡಿ….

ಶವದ ಹೆಬ್ಬೆರಳನ್ನು ಯಾಕೆ ಒಟ್ಟಿಗೆ ಕಟ್ಟಿರುತ್ತಾರೆ ಅಂದರೆ,ಮನುಷ್ಯ ಮರಣಿಸಿದ ನಂತರ ಆತನ ಶ್ರಾದ್ಧ ಕರ್ಮಗಳನ್ನು ಮಾಡುವವರೆಗೂ ಆತನ ಆತ್ಮ ಈ ಲೋಕದಲ್ಲೇ ತಿರುಗಾಡುತ್ತಿರುತ್ತದೆ ಎಂದು ಹಿಂದು ಪುರಾಣಗಳು ಹೇಳುತ್ತವೆ. ಇದು ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೆ ಹಾಗೆ ತಿರುಗುತ್ತಿರುವ ಆತ್ಮ ಮತ್ತೆ ಮನೆಯೊಳಗೆ ಪ್ರವೇಶಿಸದಂತೆ ತಡೆಯಲು ಕಾಲುಗಳ ಹೆಬ್ಬೆರಳುಗಳನ್ನು ಒಟ್ಟಿಗೆ ಕಟ್ಟುತ್ತಾರೆ.

ಇದರಿಂದಾಗಿ ಆತ್ಮ ಒಂದೆಡೆಯಿಂದ ಇನ್ನೊಂದೆಡೆಗೆ ಕದಲುವುದಿಲ್ಲ ಹಾಗೂ ಮನೆಯೊಳಗೆ ಪ್ರವೇಶಿಸುವುದಿಲ್ಲ. ಇಷ್ಟೇ ಅಲ್ಲದೆ,ಸತ್ತ ವ್ಯಕ್ತಿಯ ಕಾಲುಗಳು ಅಗಲವಾಗದಿರಲು ಈ ರೀತಿ ಕಟ್ಟುತ್ತಾರೆ.

LEAVE A REPLY

Please enter your comment!
Please enter your name here