ಹೊಟ್ಟೆಯಲ್ಲಿ ಜಂತುಹುಳು ಸಮಸ್ಯೆ ನಿಮಗೆ ಕಾಡುತ್ತಿದ್ದರೆ, ಮನೆಯಲ್ಲಿಯೇ ಇದೆ ಔಷಧಿಯ ಗುಣಗಳು, ಮನೆಯಲ್ಲಿ ಬಳಸುವಂತ ಈ ಪದಾರ್ಥಗಳಿಂದ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದಾಗಿದೆ.

ಜಂತುಹುಳು ಸಮಸ್ಯೆಯನ್ನು ಪರಿಹರಿಸಿಕೊಳ್ಳುವುದು ಹೇಗೆ.?
ಹೆಚ್ಚಾಗಿ ಈ ಸಮಸ್ಯೆ ಮಕ್ಕಳಲ್ಲಿ ಕಂಡುಬರುತ್ತದೆ, ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳುವ ಸುಲಭವಾದ ಔಷಧಿಯ ಗುಣಗಳು ಇಲ್ಲಿದೆ ನೋಡಿ..

ಒಂದು ಚಮಚ ಜೇನುತುಪ್ಪದ ಜೊತೆಗೆ ಎರಡು ಚಮಚ ಬಿಲ್ವಪತ್ರೆ ರಸ ಸೇರಿಸಿ ಒಂದು ವಾರಗಳ ಕಾಲ ಸೇವನೆ ಮಾಡುವುದರಿಂದ ಜಂತುಹುಳು ನಿವಾರಣೆ ಮಾಡಿಕೊಳ್ಳಬಹುದು.

ಬೆಳ್ಳುಳ್ಳಿಯನ್ನು ಬಳಸಿ ಜಂತು ಹುಳು ನಿವಾರಣೆ ಮಾಡಿಕೊಳ್ಳಬಹುದಾಗಿದೆ, ೫-೬ ಬೆಳ್ಳುಳ್ಳಿಯನ್ನು ರಾತ್ರಿಯಿಡಿ ನೀರಿನಲ್ಲಿ ನೆನೆಸಿ ಆ ನೀರನ್ನು ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸುವುದರಿಂದ ಹೊಟ್ಟೆಯಲ್ಲಿನ ಜಂತುಹುಳು ನಿವಾರಣೆಯಾಗುತ್ತದೆ.

ಸಿಹಿ ಕುಂಬಳಕಾಯಿ ಬೀಜದ ಪುಡಿಯನ್ನು ನೀರಲ್ಲಿ ಕುದಿಸಿ ತಣ್ಣಗಾದ ನಂತರ ಆ ನೀರನ್ನು ಸೇವಿಸಿದರೆ ಹೊಟ್ಟೆಯಲ್ಲಿನ ಜಂತುಹುಳು ಹೊರ ಬೀಳುತ್ತದೆ.

ತುಂಬೆಹೂವು ಮತ್ತು ಅದರ ಎಲೆಗಳ ರಸವನ್ನು ನಿಯಮಿತವಾಗಿ ಸೇವಿಸಿದರೆ ಜಂತುಹುಳು ಕಡಿಮೆಯಾಗುತ್ತದೆ, ಜೊತೆಗೆ
ಬಾಳೆದಿಂಡಿನ ಪಲ್ಯ, ಕೋಸಂಬರಿಯನ್ನು ನಿಯಮಿತವಾಗಿ ಸೇವಿಸಿದರೆ ಜಂತುಹುಳು ನಿವಾರಣೆಯಾಗುತ್ತದೆ.

LEAVE A REPLY

Please enter your comment!
Please enter your name here