ರಾಗಿ ದೇಹಕ್ಕೆ ತಂಪು ನೀಡುವುದರ ಜತೆಗೆ ದೇಹಕ್ಕೆ ಉತ್ತಮ ಆರೋಗ್ಯವನ್ನು ವೃದ್ಧಿಸುವಲ್ಲಿ ಹೆಚ್ಚು ಸಹಕಾರಿಯಾಗಿದೆ, ರಾಗಿ ರೊಟ್ಟಿ ತಿಂದವನು ಹೆಚ್ಚು ಗಟ್ಟಿಯಾಗಬಲ್ಲ ಅನ್ನೋ ಮಾತು ಹಳ್ಳಿಕಡೆ ಹೇಳುತ್ತಿರುತ್ತಾರೆ. ಅಷ್ಟೇ ಅಲ್ಲದೆ ಹಳ್ಳಿ ಕಡೆ ಹೆಚ್ಚಿನ ಪ್ರಮಾಣದಲ್ಲಿ ರಾಗಿಯಿಂದ ತಯಾರಿಸುವಂತ ಆಹಾರಗಳನ್ನು ಸೇವಿಸುವುದರಿಂದ ಅವರು ಹೆಚ್ಚು ಗಟ್ಟಿ ಮುಟ್ಟಾಗಿರುತ್ತಾರೆ.
ನೀವು ಕೂಡ ಮನೆಯಲ್ಲಿ ರಾಗಿ ರೊಟ್ಟಿ ಮಾಡಲು ಬಯಸಿದರೆ ಈ ಸುಲಭ ವಿಧಾನವನ್ನು ಅನುಸರಿಸಬಹುದಾಗಿದೆ.

ಬೇಕಾಗುವ ಪದಾರ್ಥಗಳು
ರಾಗಿ ಹಿಟ್ಟು- 3/4 ಕಪ್‌, ಗೋಧಿ ಹಿಟ್ಟು- 1/4 ಕಪ್‌, ನೀರು 1 ಕಪ್‌, ಉಪ್ಪು ಅರ್ಧ ಚಮಚ

ತಯಾರಿಸುವ ವಿಧಾನ: ಮೊದಲು ಒಂದು ಬಾಣಲೆಯಲ್ಲಿ ನೀರು ಮತ್ತು ಉಪ್ಪು ಹಾಕಿ ಕುದಿಸಿ. ಅದು ಕುದಿಯುತ್ತಿರುವಂತೆ ಒಂದು ಚಮಚದಷ್ಟು ರಾಗಿ ಹಿಟ್ಟನ್ನು ಸೇರಿಸಿ, ಚೆನ್ನಾಗಿ ಗಂಟಿಲ್ಲದಂತೆ ಕಲಸಿ. ಆಮೇಲೆ ಉಳಿದ ಎರಡೂ ಹಿಟ್ಟುಗಳನ್ನು ಸೇರಿಸಿ, ಸ್ಟೌವ್‌ ಆರಿಸಿಬಿಡಿ. ಚೆನ್ನಾಗಿ ಕಲಸಿ. ತಣ್ಣಗಾದ ಮೇಲೆ ನಾದಿಕೊಂಡು ಉಂಡೆ ಮಾಡಿಟ್ಟುಕೊಳ್ಳಿ.

ನಂತರ ಚಪಾತಿ ಮಣೆಯ ಮೇಲೆ ಸ್ವಲ್ಪ ಒಣ ಹಿಟ್ಟನ್ನು ಉದುರಿಸಿಕೊಂಡು ಅದರ ಮೇಲೆ ಹಿಟ್ಟಿನ ಉಂಡೆ ಇಟ್ಟು ತೆಳುವಾಗಿ ಲಟ್ಟಿಸಿ. ಕಾದ ತವಾದ ಮೇಲೆ ಹಾಕಿ ಎರಡೂ ಬದಿ ಕಾಯಿಸಿ, ಇದು ಚೆನ್ನಾಗಿ ಉಬ್ಬುತ್ತದೆ ಹಾಗೂ ತುಂಬಾ ಸಮಯದವರೆಗೂ ಮೆದುವಾಗಿ ಉಳಿಯುತ್ತದೆ.ಇದನ್ನು ನೀವು ಕರವಾದ ಚಟ್ನಿಮಾಡಿಕೊಂಡು ಸವಿಯಬಹುದು.

LEAVE A REPLY

Please enter your comment!
Please enter your name here