ಸಾಮಾನ್ಯವಾಗಿ ದೇವಸ್ಥಾನಕ್ಕೆ ಹೋಗುವಾಗ ಕೆಲವೊಂದು ತಪ್ಪುಗಳನ್ನು ಮಾಡುತ್ತೇವೆ ಆದ್ರೆ ಅವು ಯಾವು ಅನ್ನೋದನ್ನ ತಿಳಿಸುತ್ತೇವೆ ನೋಡಿ, ಮನಸ್ಸಿಗೆ ಸುಖ -ಶಾಂತಿ- ನೆಮ್ಮದಿ ಸಿಗಲು ದೇವರ ಬಳಿ ಹೋಗುತ್ತೇವೆ ಆದರೆ ದೇವರ ಕೃಪೆಯನ್ನು ಹೇಗೆ ಪಡೆಯಬೇಕು ಅನ್ನೋದನ್ನ ಸರಿಯಾದ ರೀತಿಯಲ್ಲಿ ತಿಳಿದುಕೊಂಡಿರೋದಿಲ್ಲ. ದೇವಸ್ಥಾನಕ್ಕೆ ಹೋದಾಗ ಈ ರೀತಿಯಾಗಿ ಮಾಡಿ ನೋಡಿ, ದೇವರ ಕೃಪೆ ನಿಮ್ಮ ಮೇಲೆ ಹಾಗು ನಿಮ್ಮ ಮನೆಯ ಮೇಲೆ ಸದಾಕಾಲ ನೆಲೆಸಿರುತ್ತದೆ ಹಾಗು ದೇವರ ಅನುಗ್ರಹವನ್ನು ಪಡೆಯಬಹುದು.

ಯಾವ ದಿನ ಯಾವ ದೇವರನ್ನು ಸ್ಮರಿಸಿದರೆ ಒಳ್ಳೆಯದು ಹಾಗು ದೇವಾಲಯಕ್ಕೆ ಹೋದಾಗ ಯಾವ ದೇವರಿಗೆ ಹೇಗೆ ಪ್ರದಕ್ಷಿಣೆ ಹಾಕಬೇಕು ಅನ್ನೋದನ್ನ ತಿಳಿಯೋಣ ಬನ್ನಿ.
ಮೊದಲನೆಯದಾಗಿ ದೇವಾಯಲಕ್ಕೆ ಪ್ರವೇಶಿಸಿದಾಗ ದೇವರ ಮುಂದಿರುವ ಧ್ವಜಸ್ತಂಭವನ್ನು ದರ್ಶನ ಮಾಡಬೇಕು, ಒಂದು ವೇಳೆ ಶೀನ ದೇವಾಲಯಕ್ಕೆ ಹೋಗಿದ್ದಾಗ ಮೊದಲಿಗೆ ನವಗ್ರಹವನ್ನು ಪ್ರದಶನ ಮಾಡಬೇಕು. ದರ್ಶನ ಪಡೆದ ನಂತರ ಕಾಲುಗಳನ್ನು ತೊಳೆದುಕೊಂಡು ಶಿವನ ದರ್ಶನ ಪಡೆಯಬೇಕು.

ವಿಷ್ಣು ದೇವರ ಸನ್ನಿದಿಗೆ ಹೋದಾಗ ಮೊದಲು ವಿಷ್ಣು ದೇವರ ದಶನ ಪಡೆದು, ನಂತರ ಬೇರೆ ದೇವರ ದರ್ಶನವನ್ನು ಪಡೆಯಬೇಕು. ಯಾವ ದೇವರಿಗೆ ಎಷ್ಟು ಪ್ರದಕ್ಷಿಣೆ ಹಾಕಿದರೆ ಒಳ್ಳೆಯದು.?

ಸರ್ವ ವಿಗ್ನಗಳನ್ನು ನಿವಾರಿಸುವಂತ ವಿನಾಯಕನಿಗೆ ಒಂದು ಬಾರಿ
ಶಿವನ ಸ್ವರೂಪಿಯಾಗಿರುವಂತ ಈಶ್ವರನಿಗೆ ಮೂರು ಬಾರಿ
ಹೆಣ್ಣು ದೇವತೆಗಳಿಗೆ ನಾಲ್ಕು ಬಾರಿ
ವಿಷ್ಣು ದೇವರಿಗೆ ನಾಲ್ಕು ಬಾರಿ
ಹಾಲದ ಮರಕ್ಕೆ ಪೂಜೆ ಸಲ್ಲಿಸುವಾಗ ಏಳು ಬಾರಿ ಪ್ರದಕ್ಷಿಣೆ ಹಾಕಬೇಕು.

ದೇವಾನು ದೇವತೆಗಳಿಗೆ ಇಷ್ಟವಾಗುವಂತದ್ದು ಏನು ಗೊತ್ತಾ.?
ಶಿವನಿಗೆ ಅಭಿಷೇಕ ಆದ್ರೆ, ವಿಷ್ಣುವಿಗೆ ಅಲಂಕಾರ ಹೀಗೆ ಸೂರ್ಯ ದೇವನಿಗೆ ನಮಸ್ಕಾರ, ಗಣಪತಿಗೆ ನೈವೇದ್ಯ, ಹೆಣ್ಣು ದೇವತೆಗಳಿಗೆ ಹೂವು ಕುಂಕುಮ ಅರ್ಚನೆ ಇವುಗಳು ತುಂಬಾನೇ ಇಷ್ಟವಾಗುವಂತವುಗಳು.

ದೇವಾಲಯದಲ್ಲಿ ದೇವರ ಮುಂದೆ ಪುರುಷರು ಸಾಷ್ಟಂಗ ನಮಸ್ಕಾರ ಮಾಡಬಹುದು, ಆದರೆ ಸ್ತ್ರೀಯರು ಮಾಡಬಾರದು, ಅರ್ಧ ಮಂಡಿ ಊರಿ ಹಣೆಯನ್ನು ನೆಲಕ್ಕೆ ತಾಗುವಂತೆ ನಮಸ್ಕಾರ ಮಾಡಬೇಕು. ಸ್ತ್ರೀಯರು ದೇವಾಲಯದಲ್ಲಿ ಓಂಕಾರ ಜಪಿಸಬಾರದು. ಹೀಗೆ ಮಾಡುವುದರಿಂದ ದೇವರ ಕೃಪೆ ನಿಮ್ಮ ಮೇಲಿರುವುದು ಖಂಡಿತ.

LEAVE A REPLY

Please enter your comment!
Please enter your name here