ಸಾಮಾನ್ಯವಾಗಿ ಪುರುಷರಲ್ಲಿ ಹಾಗೂ ಮಹಿಳೆಯರಲ್ಲಿ ಕಾಡುವ ಚರ್ಮದ ತೊಂದರೆಯಲ್ಲಿ ಭಂಗು ಕೂಡ ಒಂದು. ಈ ಸಮಸ್ಯೆಯಿಂದ ಮುಖದ ಮೇಲೆ ಕಪ್ಪಾಗುದರಿಂದ ತುಂಬಾ ಕಿರಿ ಕಿರಿಯನ್ನು ಅನುಭವಿಸುತ್ತಾರೆ, ಎಷ್ಟೋ ಮಂದಿಗೆ ಇದೊಂದು ದೊಡ್ಡ ಸಮಸ್ಯೆಯಾಗಿ ಉಳಿದಿದೆ, ಅದಕ್ಕೆ ಇಲ್ಲಿದೆ ನೋಡಿ ಪರಿಹಾರ.

ಎಕ್ಕದ ಹಾಲಲ್ಲಿ ಕಸ್ತೂರಿ ಅರಿಶಿನವನ್ನು ಕಲಸಿ ಹಚ್ಚಿದರೆ ಭಂಗು ನಿವಾರಣೆಯಾಗುತ್ತದೆ.
ಕಿತ್ತಳೆ ಹಣ್ಣಿನ ತಾಜಾ ಸಿಪ್ಪೆಯನ್ನು ಮುಖಕ್ಕೆ ತಿಕ್ಕಿದರೆ ಭಂಗು ಕಡಿಮೆಯಾಗುತ್ತದೆ.
ಮೊಸರು ಮತ್ತು ನಿಂಬೆ ರಸವನ್ನು ಕಲಸಿ ಮುಖಕ್ಕೆ ಲೇಪಿಸಬೇಕು.
ಮೂಲಂಗಿ ರಸವನ್ನು ಮಜ್ಜಿಗೆ ಜೊತೆ ಮಿಶ್ರಣಮಾಡಿ ಲೇಪನ ಮಾಡಬೇಕು.
ಜೇನುತುಪ್ಪಕ್ಕೆ ಬೆಣ್ಣೆ ಕಲಸಿ ಲೇಪನ ಮಾಡಬೇಕು.

ಅರಿಶಿನಕ್ಕೆ ರಕ್ತಚಂದನ ಮತ್ತು ಎಮ್ಮೆ ಹಾಲನ್ನು ಸೇರಿಸಿ ಮಿಶ್ರಣ ಮಾಡಿ ಹಚ್ಚಬೇಕು.
ಅಲೋವೆರಾ ತಿರುಳಿಗೆ ನಿಂಬೆ ರಸ ಬೆರೆಸಿ ರಾತ್ರಿ ಮಲಗುವ ಮುನ್ನ ಮುಖಕ್ಕೆ ಹಚ್ಚುತ್ತಿದ್ದರೆ ಭಂಗು ನಿವಾರಣೆಯಾಗುತ್ತದೆ. ಹೀಗೆ ಈ ಮೇಲಿನ ಕ್ರಮಗಳನ್ನು ಅನುಸರಿಸುವುದರಿಂದ ಭಂಗು ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.

LEAVE A REPLY

Please enter your comment!
Please enter your name here