ಹೌದು ಅಂದು ಹೊಟ್ಟೆಪಾಡಿಗಾಗಿ ತಮ್ಮ ಜೀವನಕ್ಕಾಗಿ ಹಲವು ಕಷ್ಟಗಳನ್ನು ಪಟ್ಟಿದ್ದಾರೆ ಅಷ್ಟೇ ಅಲ್ಲದೆ ಹೊಟ್ಟೆ ಪಾಡಿಗಾಗಿ ರುಬ್ಬುವ ಕಲ್ಲನ್ನು ಬೀದಿ ಬೀದಿಗಳಲ್ಲಿ ಮಾರಾಟ ಮಾಡಿ ಜೀವನ ಸಾಗಿಸಿದ್ದಾರೆ. ಅಂತಹ ಕಷ್ಟದ ಜೀವನವನ್ನು ಕಳೆದ ಇವರು ಇಂದು ಉನ್ನತ ಪೊಲೀಸ್ ಅಧಿಕಾರಿಯಾಗಿದ್ದಾರೆ. ಇದರ ಹಿಂದೆ ಒಂದು ರೋಚಕ ಕಥೆ. ಆ ಕಥೆ ಏನು ಅನ್ನೋದನ್ನ ಮುಂದೆ ನೋಡಣ ಬನ್ನಿ…

ಪದ್ಮಶೀಲ ತೀರ್ಪುಡೆ ಎನ್ನುವವರು ಬೀದಿ ಬೀದಿಗಳಲ್ಲಿ ಹೊಟ್ಟೆ ಪಾಡಿಗಾಗಿ ರುಬ್ಬುವ ಕಲ್ಲನ್ನು ಹೊತ್ತುಕೊಂಡು ವ್ಯಾಪಾರ ಮಾಡಿ ಬಂದಂಥ ಕಾಸಿನಿಂದ ಆ ಹೊತ್ತಿನ ಊಟ ಮಾಡಿದಂತ ಮಹಿಳೆ. ಅಂತಹ ಬಡತನದಲ್ಲಿ ಇದ್ದಂತ ಮಹಿಳೆಗೆ ಬೆನ್ನೆಲಬಾಗಿ ನಿಂತಿದ್ದು ತನ್ನ ಗಂಡ . ಆ ಬಡತನದಲ್ಲೂ ಹೆಂಡತಿಯನ್ನು ಪೊಲೀಸ್ ಅಧಿಕಾರಿ ಮಾಡುವ ಅಸೆ ಗಂಡನದ್ದು. ತನ್ನ ಪತ್ನಿಯನ್ನು ಎಷ್ಟೇ ಕಷ್ಟ ಬಂದರು ಪೊಲೀಸ್ ಅಧಿಕಾರಿಯನ್ನಾಗಿ ಮಾಡಬೇಕು ಎಂದು ಪಣ ತೊಟ್ಟಿದ್ದರು. ಅಂತಹ ಒಂದು ಪ್ರಯತ್ನಕ್ಕೆ ಆ ದೇವರು ಯಶಸ್ಸನ್ನು ಕೊಟ್ಟಿದ್ದಾನೆ.

ಮಹಾರಾಷ್ಟ್ರ ಸರಕಾರದ ಪೋಲೀಸ್ ಟೆಸ್ಟ್ ಬರೆದು ಪಾಸಾಗಿ PSI ಆಗಿದ್ದಾರೆ. ಕಷ್ಟದ ದಿನಗಳನ್ನು ಕಳೆದು ಕುಗ್ಗದೆ ತಮ್ಮ ಸಾಧನೆಯ ಹಾದಿಯನ್ನು ಮುಟ್ಟಿರುವಂತ ಇವರಿಗೆ ನಮ್ಮೆಲ್ಲರ ಕಡೆಯಿಂದ ಧನ್ಯವಾದಗಳು.

LEAVE A REPLY

Please enter your comment!
Please enter your name here