ಮನೆಯಲ್ಲಿ ಅಡುಗೆಗೆ ಬಳಸುವ ಸೋಡಾ ಬರಿ ಅಡುಗೆಗೆ ಸೀಮಿತವಾಗಿಲ್ಲ, ದೇಹದಲ್ಲಿ ಹತ್ತಾರು ದೈಹಿಕ ಸಮಸ್ಯೆಗಳು ಕಾಣಿಸಿ ಕೊಳ್ಳುತ್ತವೆ ಅಂತಹ ಕೆಲವೊಂದು ಸಮಸ್ಯೆಗಳನ್ನು ನಿವಾರಿಸುವ ಗುಣವನ್ನು ಈ ಸೋಡಾ ಹೊಂದಿದೆ. ಹಾಗಾದರೆ ಇದರ ಉಪಯೋಗವನ್ನು ತಿಳಿಯೋಣ ಬನ್ನಿ…

* ಕಪ್ಪು ಕಲೆಗಳ ನಿರ್ಮೂಲನೆ
ಬೇಕಿಂಗ್ ಸೋಡವನ್ನು ಸೂರ್ಯಾಘಾತವಾದ ಭಾಗಗಳಲ್ಲಿ ಲೇಪಿಸುವುದರಿಂದ ಚರ್ಮವು ತಂಪಾಗುವುದಲ್ಲದೆ, ಸನ್ ಬರ್ನಿಂದಲೂ ಪಾರಾಗುವುದು. ಸನ್ ಬರ್ನ್ ಗೊಳಗಾದ ತಕ್ಷಣವೇ ಬೇಕಿಂಗ್ ಸೋಡಾದ ಲೇಪನದಿಂದ ಚರ್ಮವು ಕಪ್ಪಾಗುವುದನ್ನು ತಡೆಗಟ್ಟಬಹುದು.

* ಉದರ ಸಮಸ್ಯೆ
‘ಉದರ ರೋಗಗಳಿಗೆ ಉತ್ತಮ ಪರಿಹಾರಿ’ ಎಂದು ಕರೆಯಿಸಿಕೊಳ್ಳುವ ಬೇಕಿಂಗ್ ಸೋಡಾವು, ಹೊಟ್ಟೆಯಲ್ಲಿರುವ ಅಧಿಕ ಆಮ್ಲವನ್ನು ತಟಸ್ಥಗೊಳಿಸುವುದು. ಇದರಿಂದ, ಆಸಿಡಿಟಿಯಿಂದ ಉಂಟಾಗುವ ಉದರ ಸಂಬಂಧಿತ ಸಮಸ್ಯೆಗಳಿಗೆ ಶಮನವಾಗುವುದು.

* ದಂತ ಸಮಸ್ಯೆ
ದಂತದ ಶುಚಿತ್ವದಲ್ಲಿ ಅತ್ಯಂತ ಪರಿಣಾಮಕಾರಿಯಾಗಿರುವ ಬೇಕಿಂಗ್ ಸೋಡಾವು ವೈಟೆನಿಂಗ್ ಏಜೆಂಟ್ ಮಾತ್ರವಲ್ಲದೆ ಕಲೆಗಳ ನಿವಾರಕವಾಗಿಯೂ ಕಾರ್ಯನಿರ್ವಹಿಸುವುದು. ಆದರೆ ಸ್ವಲ್ಪ ಕೊರೆಯುವ ಗುಣವನ್ನು ಹೊಂದಿರುವ ಬೇಕಿಂಗ್ ಸೋಡಾದ ಅತಿಯಾದ ಬಳಕೆಯೂ ಹಲ್ಲಿನ ಹೊರಪದರ ಸವೆತಕ್ಕೆ ಕಾರಣವಾಗುವುದು.

* ಪಾದಗಳ ರಕ್ಷಣೆಗೆ
ಅಗಲ ಬಾಯಿಯ ಪಾತ್ರೆಯಲ್ಲಿ ನೀರನ್ನು ತುಂಬಿಕೊಂಡು ಅದಕ್ಕೆ ಬೇಕಿಂಗ್ ಸೋಡವನ್ನು ಸೇರಿಸಿ ಪಾದಗಳನ್ನು ಮುಳುಗಿಸಿಡುವುದರಿಂದ, ಪಾದಕ್ಕೆ ಆರಾಮ ಸಿಗುವುದು. ರಕ್ತಪರಿಚಲನೆಯನ್ನು ಅಧಿಕಗೊಳಿಸುವಂತಹ ಸ್ವಭಾವದಿಂದಾಗಿ, ದಿನದ ಕೆಲಸಗಳಿಂದ ನಿಶ್ಯಕ್ತ ಕಾಲುಗಳಿಗೆ ಪುನರ್ಜೀವನ ಲಭಿಸುವುದು. ಪಾದದ ಡೆಡ್ ಸ್ಕಿನ್ ನಿವಾರಿಸಲು ಉಪಯೋಗಿಸಲ್ಪಡುವ ಬೇಕಿಂಗ್ ಸೋಡಾವು ಉತ್ತಮ ಎಕ್ಸ್ಫೋಲಿಯೇಟರ್ ಕೂಡ ಹೌದು.

LEAVE A REPLY

Please enter your comment!
Please enter your name here