ಮೂರ್ಛೆ ರೋಗ ಅನ್ನೋದು ತುಂಬಾನೇ ಅಪಾಯಕಾರಿ ಇದು ಯಾವ ಸಮಯದಲ್ಲಿ ಎಲ್ಲಿ ಹೇಗೆ ಬರುತ್ತದೆ ಅನ್ನೋದು ತಿಳಿಯುವುದಿಲ್ಲ. ಆದ್ರೆ ಇದರಿಂದ ಕೆಲವೊಂದು ಸಮಯದಲ್ಲಿ ಪ್ರಾಣ ಹೋಗುವ ಸಂಭವ ಇರುತ್ತದೆ. ಈ ರೋಗವನ್ನು ಹೊಂದಿರುವಂತರು ಒಂಟಿಯಾಗಿ ಎಲ್ಲಾದರೂ ಹೋಗುತ್ತಿದ್ದಾಗ ಮೂರ್ಛೆ ಬಂದರೆ ತುಂಬಾನೇ ಅಪಾಯಕಾರಿ. ಇಂತಹ ಮಾರಕ ರೋಗಗಕ್ಕೆ ಇಲ್ಲಿದೆ ಸೂಕ್ತ ಮನೆ ಮದ್ದು…

ಮೂರ್ಛೆ ರೋಗ ಎಂದರೇನು?

ವಾಸ್ತವದಲ್ಲಿ ಮೂರ್ಛೆ ರೋಗ ಒಂದು ಪ್ರತ್ಯೇಕ ರೋಗವೇ ಅಲ್ಲ. ಅದು ಮೆದುಳಿನ ರೋಗದ ಲಕ್ಷಣ! ಇಂಗ್ಲಿಷ್‌ನಲ್ಲಿ ಎಪಿಲೆಪ್ಸಿ ಎಂಬ ಪದ ಮೂಲತಃ ಗ್ರೀಕ್ ಭಾಷೆಯದ್ದು. ಇದು ವೆುದುಳಿನ ನರಗಳ ಚಟುವಟಿಕೆಯಲ್ಲಿ ಉಂಟಾಗುವ ಏರುಪೇರು ಅಥವಾ ಅವ್ಯವಸ್ಥೆಯಿಂದ ಆಗುವ ಒಂದು ಪ್ರಕಾರದ ತೊಂದರೆ. ಶೇ 33ರಷ್ಟು ಜನರಲ್ಲಿ ಮಾತ್ರ ಈ ರೋಗಕ್ಕೆ ಕಾರಣ ಗುರುತಿಸಬಹುದು.

ಮೂರ್ಛೆ ರೋಗಕ್ಕೆ ಮನೆ ಮದ್ದುಗಳಿವು…
* ಮೂರ್ಛೆ ಬಂದಂತ ಸಂದರ್ಭದಲ್ಲಿ ಮನೆಯಲ್ಲಿ ಸುಲಭವಾಗಿ ಸಿಗುವಂತ ಬಿಳಿ ಈರುಳ್ಳಿ ರಸವನ್ನು ರೋಗಿಯ ಮೂಗಿಗೆ ಬಿಡುವುದು ಸೂಕ್ತ.

* ಮುತ್ತುಗದ ಬೇರನ್ನು ನೀರಿನೊಂದಿಗೆ ಅರೆದು ಮೂಗಿಗೆ ನಶ್ಯದಂತೆ ಏರಿಸುವುದು.

* ತುಳಸಿ ರಸದಲ್ಲಿ ಸೈನ್ಧವ ಲವಣವನ್ನು ಸೇರಿಸಿ ಮೂಗಿಗೆ ಬಿಡುವುದು.

* ವಾಯುವಿಳಂಗ, ಕರಿಮೆಣಸು, ನುಗ್ಗೆ,ಇಪ್ಪೆ ಬೀಜಗಳನ್ನು ಕುಟ್ಟಿ ಶೋಧಿಸಿ ಮೂಗಿಗೆ ಹನಿಗಳನ್ನು ಬಿಟ್ಟಲ್ಲಿ ಹಿಸ್ಟೇರಿಯಾದಿಂದ ಮೂರ್ಛೆ ಹೋದವರಿಗೆ ಉಪಶಮನ ದೊರಕುವುದು.

* ವಿಟಮಿನ್ ಸಿ ಹೊಂದಿರುವಂತ ಕಿತ್ತಳೆ ಹಣ್ಣಿನ ನಿರಂತರ ಸೇವನೆ ಮೂರ್ಛೆರೋಗವನ್ನು ತಗ್ಗಿಸಲು ಪೂರಕವಾಗಬಲ್ಲದು.

LEAVE A REPLY

Please enter your comment!
Please enter your name here