ಮಳೆಗಾಲದಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚು ಸೊಳ್ಳೆಗಳ ನಿಯಂತ್ರಣಕ್ಕೆ ಹಲವು ರಾಸಾಯನಿಕ ಕಾಯಲ್ ಗಳನ್ನೂ ಬಳಸಿದರು ಕೆಲವೊಮ್ಮೆ ಸೊಳ್ಳೆಗಳ ಕಾಟ ಕಡಿಮೆಯಾಗೋದಿಲ್ಲ. ಅಂತಹ ಸಮಯದಲ್ಲಿ ಈ ಮನೆಮದ್ದನ್ನು ನಿಮ್ಮ ಮನೆಯಲ್ಲೇ ಸುಲಭವಾಗಿ ಮಾಡಿ ಸೊಳ್ಳೆಗಳ ಹಾವಳಿಯನ್ನು ತಪ್ಪಿಸಬಹುದು. ಇದರಿಂದ ಯಾವುದೇ ಅಡ್ಡ ಪರಿಣಾಮವಿಲ್ಲದೆ ನೈಸರ್ಗಿಕ ಟಿಪ್ಸ್ ಪಡೆದುಕೊಳ್ಳಬಹುದು.

ಅಡುಗೆ ಮನೆಯಲ್ಲಿ ಬಳಸುವಂತ ಲವಂಗ ಹಾಗು ಲಿಂಬೆಯನ್ನು ಈ ರೀತಿಯಾಗಿ ಬಳಸಿದರೆ ಸೊಳ್ಳೆಗಳ ನಿಯಂತ್ರಣವಾಗುವುದು. ನಿಂಬೆ ಹಣ್ಣನ್ನು ಅರ್ಧಕ್ಕೆ ಕತ್ತರಿಸಿ ಅದರ ಮೇಲೆ ಲವಂಗಗಳನ್ನು ಸಿಕ್ಕಿಸಿ. ಇದನ್ನು ಮನೆಯ ಬೇರೆ ಬೇರೆ ಭಾಗಗಳಲ್ಲಿ ಇಡಿ. ಇದರಿಂದ ಮನೆಯಲ್ಲಿ ಸೊಳ್ಳೆ, ನೊಣ ಯಾವುದೂ ಸುಳಿಯುವುದಿಲ್ಲ.

ಕಾಫಿ ಬೀಜಗಳನ್ನು ಹೀಗೆ ಬಳಸಿದರೆ ಸೊಳ್ಳೆಗಳನ್ನು ಸರ್ವನಾಶ ಮಾಡಬಹುದು. ಹೌದು ಕಾಫಿ ಬೀಜಗಳನ್ನು ನಿಂತ ನೀರಿರುವ ಜಾಗದ ಮೇಲೆ ಹಾಕುವುದು. ಇವು ನೀರಿನ ಕೆಳಗೆ ಹೋದಾಗ ಸೊಳ್ಳೆ ಮೊಟ್ಟೆಗಳು ಸಹ ನೀರಿನ ಕೆಳಗೆ ಹೋಗುತ್ತವೆ. ಅಲ್ಲಿ ಆಕ್ಸಿಜನ್ ಕೊರತೆಯಿಂದ ಸೊಳ್ಳೆಗಳು ಹುಟ್ಟುವ ಮೊದಲೇ ಸಾಯುತ್ತವೆ.

ಬೆಳ್ಳುಳ್ಳಿಯನ್ನು ಜಜ್ಜಿ ನೀರಿನಲ್ಲಿ ಹಾಕಿ ಕುದಿಸಿ. ಈ ನೀರನ್ನು ಸ್ಪ್ರೇ ಬಾಟಲ್‌ಗೆ ಹಾಕಿ ಮೂಲೆ ಮೂಲೆಗೂ ಸ್ಪ್ರೇ ಮಾಡಿ. ಒಂದೇ ಒಂದು ಸೊಳ್ಳೆ ಸುಳಿಯೋದಿಲ್ಲ. ಅಷ್ಟೇ ಅಲ್ಲದೆ ಡಿಶ್ ವಾಷ್ ಸೋಪನ್ನು ನೀರಿನ ಜೊತೆ ಮಿಕ್ಸ್ ಮಾಡಿ, ಸ್ಪ್ರೇ ಮಾಡಿದರೆ ಸೊಳ್ಳೆಗಳು ನಾಶವಾಗುತ್ತದೆ. ಈ ಮನೆಮದ್ದುಗಳು ಸೊಳ್ಳೆಗಳ ಹಾವಳಿಯನ್ನು ತಪ್ಪಿಸಿ ನೆಮ್ಮದಿಯಾಗಿರಲು ಸಹಕಾರಿಯಾಗಿವೆ.

LEAVE A REPLY

Please enter your comment!
Please enter your name here