ನಮ್ಮ ಸಂಸ್ಕೃತಿ ಆಚಾರ ವಿಚಾರಗಳು ನಮ್ಮ ಹಿರಿಯರಿಂದ ಹಾಗೂ ಪರಂಪರೆಯಿಂದ ಬಂದಿರುವಂತವು, ಇತ್ತೀಚಿನ ದಿನಗಳಲ್ಲಿ ಅವುಗಳು ಎಲ್ಲೋ ಒಂದು ಕಡೆ ನಶಿಸುತ್ತಿದೆ ಅನ್ನಬಹುದು. ಪ್ರಸ್ತುತ ದಿನಗಳಲ್ಲಿ ಎದ್ದ ತಕ್ಷಣ ಮೊಬೈಲ್ ಫೋನ್ ನೋಡುವ ಅವ್ಯಾಸ ಬೆಳೆಸಿಕೊಂಡಿರುತ್ತಾರೆ ಕೆಲ ಮಂದಿ ಅವುಗಳನ್ನು ಬಿಟ್ಟು ಈ ಮುಂದೆ ತಿಳಿಸಿರುವ ವಿಷಯವನ್ನು ಗಮನಿಸಿ ಅವುಗಳನ್ನು ಪಾಲಿಸಿದರೆ ನಿಮ್ಮ ಆದಿನವನ್ನು ಉತ್ತಮ ದಿನ ಮತ್ತು ಶುಭದಿನವನ್ನಾಗಿ ಕಾಣಬಹುದು..

ಬೆಳಗ್ಗೆ ಎದ್ದ ತಕ್ಷಣ ಗೋ ಮಾತೆಯ ದರ್ಶನ ಮಾಡಿದರೆ ಗೋವಿನಲ್ಲಿ ಅಷ್ಟದೇವತೆಗಳು ನೆಲೆಸಿರುತ್ತಾರೆ ಎಂದು ಹೇಳುತ್ತಾರೆ. ಅದಕ್ಕಾಗಿ ಬೆಳಿಗ್ಗೆ ಗೋವಿನ ದರ್ಶನ ಮಾಡಿದ್ದರೆ ಅಷ್ಟದೇವತೆಗಳ ದರ್ಶನ ಮಾಡಿದ ಪುಣ್ಯ ದೊರಕುತ್ತದೆಯಂತೆ.

ಹಾಗೆ ಬೆಳಿಗ್ಗೆ ಎದ್ದ ತಕ್ಷಣ ಭೂಮಿತಾಯಿ ಹಾಗೂ ಸೂರ್ಯನಿಗೆ ನಮಸ್ಕರಿಸಬೇಕು. ಹಾಗೆ ತುಳಸಿ ಗಿಡಕ್ಕೂ ಕೂಡ ನಮಸ್ಕರಿಸಬಹುದು.ಇದರಿಂದ ಒಳ್ಳೆದಾಗುತ್ತದೆ ಎಂದು ಹೇಳುತ್ತಾರೆ. ಹಾಗೇ ಅಗ್ನಿ, ಜಲವನ್ನು ನೋಡಿದರೆ ಆ ದಿನ ಒಳ್ಳೆದಾಗುತ್ತದೆ.

ಬೆಳಿಗ್ಗೆ ಎದ್ದ ತಕ್ಷಣ ನಮ್ಮ ಅಂಗೈ ನೋಡಿದರೆ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ ಏಕೆಂದರೆ ಅಂಗೈಯಲ್ಲಿ ಲಕ್ಷ್ಮೀ, ಸರಸ್ವತಿ, ಗೌರಿ ನೆಲೆಸಿರುತ್ತಾರೆ ಎಂದು ಪಂಡಿತರು ಹೇಳುತ್ತಾರೆ. ಆಗಾಗಿ ನೀವು ಬೆಳಗ್ಗೆ ಎದ್ದ ತಕ್ಷಣ ಇವುಗಳನ್ನು ನೋಡುವ ಅವ್ಯಾಸ ಮಾಡಿಕೊಳ್ಳುವುದು ಉತ್ತಮ .

LEAVE A REPLY

Please enter your comment!
Please enter your name here