ಮಣ್ಣು ಅಂದ್ರೆ ಮೂಗು ಮುರಿಯುವ ಮಂದಿ ಇದ್ದಾರೆ, ಆದ್ರೆ ಮಣ್ಣು ಅನ್ನೋದು ಶ್ರೇಷ್ಠ ಮಣ್ಣಿನಲ್ಲಿ ಚಿನ್ನವಿದೆ ಹಾಗೂ ಮಣ್ಣು ಮನುಷ್ಯನ ಆರೋಗ್ಯಕ್ಕೂ ಸಹಕಾರಿಯಾಗಿದೆ ಅನ್ನೋದನ್ನ ಆಯುರ್ವೇದ ಚಿಕಿತ್ಸೆ ಹೇಳುತ್ತದೆ. ಹಾಗಾದರೆ ಮಣ್ಣಿನ ಆರೋಗ್ಯಕಾರಿ ಗುಣಗಳನ್ನು ಹೇಗೆ ಪಡೆಯಬಹುದಾಗಿದೆ ಅನ್ನೋದನ್ನ ಸಂಪರ್ಣವಾಗಿ ತಿಳಿಯೋಣ ಮುಂದೆ ಓದಿ.

ಕೆಲವೊಮ್ಮೆ ಯಾವ ಔಷದಿ ಮಾತ್ರೆಗಳಿಂದ ವಾಸಿಯಾಗದ ಕಾಯಿಲೆ ರೋಗಗಳು ಪ್ರಕೃತಿ ಚಿಕಿತ್ಸೆಯಿಂದ ನಿವಾರಣೆಯಾಗುವುದು, ಅಂತಹ ಚಮತ್ಕಾರವನ್ನು ನಿಸರ್ಗ ಮಾತೇ ಮಾಡುತ್ತಾಳೆ.ಆಯುರ್ವೇದದಲ್ಲಿ ಆರಂಭವಾದ ಮಣ್ಣಿನ ಚಿಕಿತ್ಸೆ ಈಗ ಜಾಗತಿಕವಾಗಿ ಜನಪ್ರಿಯವಾಗುತ್ತಿದೆ. ಮಣ್ಣೆಂದು ಮೂಗು ಮುರಿಯುತ್ತಿದ್ದವರೇ ಮಣ್ಣಿನಲ್ಲೇ ಚಿನ್ನವಿದೆ ಎಂಬುದನ್ನು ಅರಿಯುತ್ತಿದ್ದಾರೆ.

ನಿಸರ್ಗ ಚಿಕಿತ್ಸೆಗಳಲ್ಲಿ ಈ ಮಣ್ಣಿನ ಮಡ್ ಥೆರಪಿ ಕೂಡ ಒಂದು ದೇಹದಿಂದ ವಿಷಕಾರಿ ಅಂಶಗಳನ್ನು ನಿವಾರಿಸಿ ದೊಡ್ಡ ದೊಡ್ಡ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಈ ಮಣ್ಣಿಗೆ ಇರುತ್ತದೆ. ಅಷ್ಟೇ ಅಲ್ಲದೆ ಮಣ್ಣಿನ ಈ ಮಡ್ ಥೆರಪಿ ಹೇಗೆಲ್ಲ ಸಹಕಾರಿ ಅನ್ನೋದನ್ನ ನೋಡಿ.

ಮನುಷ್ಯನಿಗೆ ಕಾಯಿಲೆ ಬೀಳಿಸಬಲ್ಲಂಥ ಕೆಟ್ಟ ಟಾಕ್ಸಿನ್‌ಗಳನ್ನು ಮಣ್ಣು ಹೀರಿಕೊಳ್ಳುತ್ತದೆ. ಇಂಥ ಮಣ್ಣನ್ನು ಹೊಟ್ಟೆಯ ಸುತ್ತ ದಪ್ಪನಾಗಿ ಹಚ್ಚಿಕೊಳ್ಳುವುದರಿಂದ ಅದು ನಿಮ್ಮನ್ನು ಡಿಟಾಕ್ಸ್ ಮಾಡಿ, ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ. ಜೊತೆಗೆ, ಚಯಾಪಚಯ ಕ್ರಿಯೆಯನ್ನೂ ವೇಗಗೊಳಿಸುತ್ತದೆ.

ಅಷ್ಟೇ ಅಲ್ಲದೆ ತಲೆನೋವು ಅಥವಾ ಜ್ವರದಿಂದಾಗಿ ಕೆಲಸದಲ್ಲಿ ಏಕಾಗ್ರತೆ ಬರುತ್ತಿಲ್ಲವೇ? ಹಾಗಿದ್ದರೆ ಮಡ್ ಥೆರಪಿ ಟ್ರೈ ಮಾಡಿ. ಹೊಟ್ಟೆಯ ಸುತ್ತಮುತ್ತ ಹಾಗೂ ಹಣೆಯಲ್ಲಿ ಮಣ್ಣನ್ನು ಹಚ್ಚುವುದರಿಂದ ಅದು ದೇಹವನ್ನು ಒಳಗಿನಿಂದ ತಂಪಾಗಿಸುತ್ತದೆ. ಮಾತ್ರವಲ್ಲ ಹೀಟ್ ಸ್ಟ್ರೋಕ್‌ನಿಂದಲೂ ತಕ್ಷಣ ರಿಲೀಫ್ ಕೊಡಿಸುತ್ತದೆ.

ಮೆಡಿಕೇಶನ್‌ನಂತೆ ಈ ಮಡ್ ಥೆರಪಿಯಲ್ಲಿ ಯಾವ ಅಡ್ಡ ಪರಿಣಾಮಗಳೂ ಇಲ್ಲ. ಹೀಗಾಗಿ, ಪ್ರಯತ್ನಿಸಿ ನೋಡಲು ಯಾವ ಅಡ್ಡಿಯೂ ಇಲ್ಲ ಮಡ್ ಥೆರಪಿಯ ಅತಿ ದೊಡ್ಡ ಲಾಭ ಪಡೆದುಕೊಳ್ಳುವುದು ನಿಮ್ಮ ಚರ್ಮ. ಆಯುರ್ವೇದದ ಪ್ರಕಾರ ಮಣ್ಣು ದೇಹದಿಂದ ಟಾಕ್ಸಿನ್ಸ್ ಹೊರ ಹಾಕಿ ಪಿತ್ತದ ದೋಷಗಳನ್ನು ತೊಡೆದು ಹಾಕುತ್ತದೆ. ಅದೇ ಸಮಯದಲ್ಲಿ ನಿಮ್ಮ ಚರ್ಮದ ಅಶುದ್ಧತೆಯನ್ನು ತೊಡೆದು ಹಾಕಿ ಕಾಂತಿಯುತ ತ್ವಚೆಯನ್ನು ನಿಮ್ಮದಾಗಿಸುತ್ತದೆ.

ಮಣ್ಣಿಗೆ ತಂಪಾಗಿಸುವ ಗುಣವಿರುವುದರಿಂದ ನ್ಯಾಚುರೋಪತಿ ಹಾಗೂ ಇತರೆ ಹೀಲರ್‌ಗಳು ನರಸಂಬಂಧಿ ತೊಂದರೆಗಳಾದ ಒತ್ತಡ, ನಿದ್ರಾ ಸಮಸ್ಯೆ, ಆತಂಕ, ಪೋಸ್ಟ್ ಟ್ರೊಮ್ಯಾಟಿಕ್ ಡಿಸಾರ್ಡರ್ಸ್ ಇರುವವರಿಗೆ ಮಡ್ ಥೆರಪಿ ಸಲಹೆ ಮಾಡುತ್ತಾರೆ. ಇದು ಮೆದುಳಿನ ಸುತ್ತಮುತ್ತ ಬ್ಲಾಕ್ ಆಗಿರುವ ಹಾದಿಗಳನ್ನು ಸುಗಮಗೊಳಿಸಿ, ಮೇಲೆ ಕುಳಿತ ಟಾಕ್ಸಿನ್ಸ್ ಗುಡಿಸಿ ಹಾಕುತ್ತದೆ.

ನಾವು ದಿನದ ಬಹುತೇಕ ಸಮಯ ಸ್ಕ್ರೀನ್ ನೋಡುತ್ತಲೇ ಕಳೆಯುವುದರಿಂದ ಕಣ್ಣುಗಳಿಗೆ ಅಗತ್ಯ ವಿಸ್ರಾಂತಿ ಸಿಗುವುದೇ ಇಲ್ಲ. ಸುಮ್ಮನೇ ಕೆಸರಿನಲ್ಲಿ ನಡೆಯುವುದು ಅಥವಾ ಕಣ್ಣಿನ ಸುತ್ತ ಮಣ್ಣನ್ನು ಪೇಸ್ಟ್‌ನಂತೆ ಹಚ್ಚಿಕೊಳ್ಳುವುದರಿಂದ (ಮುಲ್ತಾನಿ ಮಿಟ್ಟಿ) ಕಣ್ಣುಗಳು ತಂಪಾಗಿ ಆರೋಗ್ಯ ಕಂಡುಕೊಳ್ಳುತ್ತವೆ ಎಂದು ಬಹು ಶತಮಾನಗಳಿಂದ ನಂಬಿಕೊಂಡು ಬರಲಾಗಿದೆ. ಮಡ್ ಬಾತ್ ವಯಸ್ಸಾದಂತೆಲ್ಲಗ್ಲುಕೋಮಾ ಬರುವುದನ್ನು ಕೂಡಾ ತಡೆಯುತ್ತದೆ ಎಂದು ಅಧ್ಯಯನಗಳು ಕಂಡುಕೊಂಡಿವೆ. ಸಂಗ್ರಹ

LEAVE A REPLY

Please enter your comment!
Please enter your name here