ನಿಂಬೆಹಣ್ಣು ಹಲವು ಉಪಯೋಗಳನ್ನು ಹೊಂದಿದೆ ಆರೋಗ್ಯಕ್ಕೆ ಸಂಬಂಧಿಸಿದಂತೆ ನಿಂಬೆ ಬಹುಪಯೋಗಕಾರಿಯಾಗಿದೆ. ನಿಂಬೆಹಣ್ಣು ಮನೆಯಲ್ಲಿದ್ರೆ ಎಷ್ಟೊಂದು ಉಪಯೋಗಗಳನ್ನು ಪಡೆಯಬಹುದು ಹಾಗು, ಅಜೀರ್ಣತೆ, ಮಲಬದ್ಧತೆ, ವಾಂತಿ-ಬೇಧಿ ಸಮಸ್ಯೆಗಳಿಗೆ ನಿಂಬೆಹಣ್ಣು ಹೇಗೆ ಕೆಲಸ ಮಾಡುತ್ತದೆ ಅನ್ನೋದನ್ನ ತಿಳಿಸುತ್ತೇವೆ ನೋಡಿ..

ಸೇವಿಸುವಂತ ಆಹಾರ ಸರಿಯಾಗಿ ಜೀರ್ಣವಾಗದೇ ಇದ್ದಾಗ ಅಜೀರ್ಣತೆ ಸಮಸ್ಯೆ ಕಾಡುತ್ತದೆ, ಈ ಸಮಸ್ಯೆ ನಿವಾರಣೆಗೆ ನಿಂಬೆ ಹೇಗೆ ಸಹಕಾರಿಯಾಗಿದೆ ಗೊತ್ತಾ.? ಎರಡು ಚಮಚ ನಿಂಬೆ ರಸ, ಒಂದು ಚಮಚ ಶುಂಠಿ ರಸ, ಸೈ0ದವ ಲವಣ ಎರಡು ಗ್ರಾಂ, ಒಂದು ಚಮಚ ಜೇನು ಇವುಗಳನ್ನು ಸೇರಿಸಿ ಪ್ರತಿದಿನ ಬೆಳಗ್ಗೆ ಒಂದು ವಾರಗಳ ಕಾಲ ಸೇವಿಸಬೇಕು. ಇದನ್ನು ಸೇವಿಸಿದ ನಂತರ ಒಂದು ಗಂಟೆಗಳವರೆಗೆ ಆಹಾರ ತಗೆದುಕೊಳ್ಳಬಾರದು, ಹೀಗೆ ಮಾಡಿದರೆ ಪದೇ ಪದೇ ಕಾಡುವ ಅಜೀರ್ಣ ಸಮಸ್ಯೆ ನಿವಾರಣೆಯಾಗುವುದು.

ಮಲಬದ್ದತೆಗೆ ನಿಂಬೆ ಹೇಗೆ ಕೆಲಸ ಮಾಡುತ್ತೆ.?
ಗುದದ್ವಾರದಲ್ಲಿ ರಕ್ತ ಸ್ರಾವ ಆಗುತ್ತಿದ್ದರೆ, ನಿಂಬೆಯಿಂದ ಜಸ್ಟ್ ಹೀಗೆ ಮಾಡಿ. ಊಟ ಆದ ತಕ್ಷಣ ಒಂದು ನಿಂಬೆಹಣ್ಣನ್ನು ಪೂರ್ತಿಯಾಗಿ ಬಾಯಲ್ಲಿ ಹಾಕಿಕೊಂಡು ಕಚ್ಚಿ ಪೂರ್ಣ ಪ್ರಮಾಣದಲ್ಲಿ ರಸವನ್ನು ಹೀರಿಕೊಳ್ಳಬೇಕು. ಹೀಗೆ ಮಾಡುವುದರಿಂದ ಮೂಲವ್ಯಾದಿ ನಿವಾರಣೆಯಾಗುವುದು, ಅಷ್ಟೇ ಅಲ್ಲದೆ ರಕ್ತ ಪಿತ್ತ ಕೂಡ ನಿವಾರಣೆಯಾಗುವುದು. ಈ ವಿಧಾನವನ್ನು ೨-೩ ವಾರಗಳವರೆಗೆ ಮಾಡಬೇಕಾಗುತ್ತದೆ.

ಮೂಲವ್ಯಾಧಿಯಿಂದ ಗುದದ್ವಾರದಲ್ಲಿ ಮೊಳಕೆ ರೀತಿಯಾಗಿದ್ದರೆ, 50 ಗ್ರಾಂ ನಷ್ಟು ನಿಂಬೆಯ ಚಿಗುರೆಲೆಯನ್ನು ನುಣ್ಣಗೆ ಅರೆದು 120 ಗ್ರಾಂ ನಷ್ಟು ಹಸುವಿನ ಬೆಣ್ಣೆಯಲ್ಲಿ ಕಲಸಿ ಒಂದು ರಾತ್ರಿ ಆಗೇ ಇಟ್ಟು ಮರುದಿನ ತುಪ್ಪಕಾಯಿಸಿ, ತುಪ್ಪವನ್ನು ಶೋಧಿಸಿಕೊಂಡು ಆ ತುಪ್ಪವನ್ನು ಪ್ರತಿದಿನ ಮೊಳಕೆ ಇರುವ ಜಾಗಕ್ಕೆ ದಿನದಲ್ಲಿ ಎರಡು ಬಾರಿ ಹೆಚ್ಚು ಬಂದರೆ ೨-೩ ವಾರಗಳಲ್ಲಿ ಮೊಳಕೆ ನಿವಾರಣೆಯಾಗುತ್ತದೆ.

ವಾಂತಿ-ಬೇಧಿ ಸಮಸ್ಯೆಗೆ ಅಕ್ಕಿಯನ್ನು ಹುರಿದು ರವೇ ರೀತಿಯಲ್ಲಿ ಮಾಡಿ ಮೊಸರಿನಲ್ಲಿ ನೆನಸಿ ಒಣಗಿಸಿ. ನುಣ್ಣಗೆ ಅರೆದು ನಿಂಬೆ ರಸದೊಂದಿಗೆ ಸೇವಿಸಿದರೆ ವಾಂತಿ ಭೇಧಿ ನಿಲ್ಲುತ್ತದೆ. ಆರೋಗ್ಯದ ದೃಷ್ಟಿಯಿಂದ ಇದನ್ನು ಬೇರೆಯವರಿಗೂ ತಿಳಿಸಿ ಇದರ ಉಪಯೋಗವನ್ನು ಪಡೆದುಕೊಳ್ಳಲಿ.

LEAVE A REPLY

Please enter your comment!
Please enter your name here