ನಾವು ಪ್ರತಿದಿನ ಸೇವನೆ ಮಾಡುವಂತ ಆಹಾರಗಳು ಒಳ್ಳೆಯ ರೀತಿಯಲ್ಲಿದ್ದರು ಕೂಡ ವಿಷಕಾರಿ ಅಂಶವನ್ನು ಹೊಂದಿರುತ್ತವೆ ಅಂತಹ ವಿಷಕಾರಿ ಅಂಶಗಳನ್ನು ನಿವಾರಣೆ ಮಾಡುವಂತದ್ದು ದೇಹದಲ್ಲಿನ ಲಿವರ್, ಇಂತಹ ಲಿವರ್ ಆರೋಗ್ಯವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಕೂಡ ಅಷ್ಟೇ ಮಹತ್ವವಾದದ್ದು.

ದೇಹದಲ್ಲಿನ ವಿಷಕಾರಿ ಅಂಶವನ್ನು ನಿಯಂತ್ರಿಸುವಂತ ಲಿವರ್ ಅರೋಗ್ಯ ಸರಿ ಇಲ್ಲದೆ ಇದ್ರೆ ಹಲವು ಸಮಸ್ಯೆಗಳು ಕಾಯಿಲೆ ರೋಗಗಳು ಬರುವ ಸಾಧ್ಯತೆ ಹೆಚ್ಚು, ಹಾಗಾಗಿ ಲಿವರ್ ಸ್ವಚ್ಛತೆ ಮಾಡಿಕೊಳ್ಳೋದು ಕೂಡ ಅಷ್ಟೇ ಮಹತ್ವದ ಕೆಲಸ.

ನೀರು ವಿಷಕಾರಿ ಪದಾರ್ಥಗಳನ್ನು ಹೊರಹಾಕುತ್ತದೆ. ಆದರೆ, ಅದನ್ನು ಒಂದಿಷ್ಟು ಆಸಕ್ತಿಕರ ಫ್ಲೇವರ್ ಸೇರಿಸಿ ಸಿದ್ಧಪಡಿಸಿ ಸೇವಿಸಿದರೆ ದೇಹದೊಂದಿಗೆ ಮನಸ್ಸಿಗೂ ಹಿತ. ಹೀಗಾಗಿ, ಲಿವರ್ ನ್ನು ಟಾಕ್ಸಿನ್ಸ್ ಮುಕ್ತ ಮಾಡಿಕೊಳ್ಳಬಹುದು.

ಪ್ರತಿದಿನ ಬೆಳಗ್ಗೆ ಸ್ಟ್ರಾಬೆರಿ ರಸ ತೆಗೆದು ಅದಕ್ಕೆ ನೀರು, ಐಸ್ ಸೇರಿಸಿ ಮುಂಜಾನೆ ಕುಡಿಯಿರಿ ಇದರಿಂದ ಲಿವರ ಸ್ವಚ್ಛ ಆಗಲು ಸಹಕಾರಿಯಾಗಿರುತ್ತದೆ. ಅಷ್ಟೇ ಅಲ್ಲದೆ ದೇಹಕ್ಕೂ ಹೆಚ್ಚು ಅರ್ಪ್ಗ್ಯಕಾರಿ ಅಂಶಗಳನ್ನು ನೀಡುವಂತ ಸೇಬು ಹಣ್ಣಿನ ರಸ ಮತ್ತು ಅಡುಗೆಗೆ ಬಳಸುವ ಚಕ್ಕೆಯನ್ನು ನೀರಿನಲ್ಲಿ ಒಂದೆರಡು ಗಂಟೆಗಳ ಕಾಲ ಹಾಕಿಡಿ. ನಂತರ ಅದಕ್ಕೆ ಸ್ವಲ್ಪ ಐಸ್ ಹಾಕಿ ಕುಡಿಯುವುದರಿಂದ ಹೆಚ್ಚಿನ ಎನರ್ಜಿ ಪಡೆಯಬಹುದು.

ಮತ್ತೊಂದು ಸುಲಭ ಮನೆಮದ್ದು ಲಿವರನ್ನು ಸ್ವಚ್ಛ ಮಾಡಬಲ್ಲದು ಅದುವೇ ಎಳೆ ಸೌತೆಕಾಯಿ. ಹೌದು ಎಳೆಸೌತೆಕಾಯಿ ರಸಕ್ಕೆ ನಿಂಬೆರಸ, ಪುದೀನಾ, ಐಸ್ ಹಾಗೂ ನೀರು ಸೇರಿಸಿ ಪ್ರತಿದಿನ ಸೇವಿಸಿದಲ್ಲಿ ಒಳ್ಳೆಯ ಫಲಿತಾಂಶವಿದೆ ಹಾಗು ಹೊಟ್ಟೆಯನ್ನು ಕರಗಿಸಬಹುದು.

ಕಲ್ಲಂಗಡಿ ದೇಹಕ್ಕೆ ತಂಪು ನೀಡುವುದರ ಜತೆಗೆ ದೇಹದ ತೂಕ ಇಳಿಸಲು ಸಹಕಾರಿ, ಹೌದು ಕಲ್ಲಂಗಡಿ ಹಣ್ಣಿನ ರಸ, ಪುದೀನಾ, ಶುಂಠಿ ಹಾಗೂ ನೀರು ಮಿಶ್ರಣ ಮಾಡಿ ಸೇವನೆ ಮಾಡುವುದು ಉತ್ತಮ ಇದು ತೂಕ ಇಳಿಸಲೂ ಉಪಯೋಗಕಾರಿ.

LEAVE A REPLY

Please enter your comment!
Please enter your name here