ಇಂತಹ ಮಾನವೀಯ ಘಟನೆ ನಡೆದಿರುವುದು ಕೊಪ್ಪಳದ ಕೆಎಸ್‍ಆರ್ ಟಿಸಿ ಡಿಪೋದಲ್ಲಿ, ಹೌದು ಮಗಳು ಮೃತ ಪಟ್ಟ ವಿಚಾರವನ್ನು ಮುಚ್ಚಿಟ್ಟು ಕರ್ತವ್ಯಕ್ಕೆ ಕಳುಹಿಸಿದ ಅಮಾನವೀಯ ಘಟನೆಗೆ ಸಾಕ್ಷಿ ಯಾಗಿರೋದು ಗಂಗಾವತಿ ಕೆಎಸ್‍ಆರ್ ಟಿಸಿ ಡಿಪೋದ ಅಧಿಕಾರಿಗಳು.

ಕಂಡಕ್ಟರ್ ಮಂಜುನಾಥ್ ಅವರು ತನ್ನ ಮಗಳು ಮೃತಪಟ್ಟಿದ್ದರೂ ಕೊನೆಗಳಿಗೆ ಮುಖವನ್ನು ನೋಡದಂತೆ ಆಗಿದೆ. ಕೊಪ್ಪಳದ ಗಂಗಾವತಿ ಕೊಲ್ಲಾಪುರ ಬಸ್ಸಿನ ಕಂಡಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಬಾಗಲಕೋಟೆ ತಾಲೂಕಿನ ರಾಂಪೂರದ ಮಂಜುನಾಥ್ ಅವರ ಪುತ್ರಿ ಕವಿತಾ ಅನಾರೋಗ್ಯದ ಕಾರಣ ಬುಧವಾರ ಮುಂಜಾನೆ 10 ಗಂಟೆ ಸುಮಾರಿಗೆ ಮೃತಪಟ್ಟಿದ್ದಾಳೆ.

ಕವಿತಾ ಸಾವನ್ನಪ್ಪಿದ ವಿಷಯವನ್ನು ತಂದೆ ಮಂಜುನಾಥ್‍ಗೆ ತಿಳಿಸಲು ಕುಟುಂಬ್ಥರು ಗಂಗಾವತಿ ಬಸ್ ಡಿಪೋಗೆ ಫೋನ್ ಮಾಡಿ ಹೇಳಿದ್ದಾರೆ. ಆದರೆ ಅಲ್ಲಿನ ಅಧಿಕಾರಿಗಳು ಮಂಜುನಾಥ್‍ಗೆ ಮಗಳು ಮೃತಪಟ್ಟಿರುವ ವಿಷಯ ತಿಳಿಸದೇ ಕೆಲಸಕ್ಕೆ ಕಳುಹಿಸಿದ್ದಾರೆ.

ಮಂಜುನಾಥ್ ಕೆಲಸಕ್ಕೆ ಹೋಗಿ ಗುರುವಾರ ರಾತ್ರಿ ಡಿಪೋಗೆ ಬಂದಾಗ ವಿಷಯ ಗೊತ್ತಾಗಿದೆ. ಮಗಳ ಸಾವಿನ ವಿಷಯವನ್ನು ಒಂದು ದಿನ ತಡವಾಗಿ ತಿಳಿದ ಮಂಜುನಾಥ್ ದಿಗ್ಭ್ರಮೆಗೊಂಡಿದ್ದಾರೆ. ವಿಷಯ ತಿಳಿದ ಕೂಡಲೇ ಮಂಜುನಾಥ್ ಅವರು ಅಧಿಕಾರಿಗಳ ಬಳಿ ಹೋಗಿ ಮಗಳು ಸಾವನ್ನಪ್ಪಿರುವ ವಿಷಯ ತಿಳಿಸಿದ್ದಾರೆ. ನನಗೆ ಶುಕ್ರವಾರ ರಜೆ ಕೊಡಿ ಊರಿಗೆ ಹೋಗುತ್ತೇನೆ ಎಂದು ಅಂಗಲಾಚಿ ಬೇಡಿಕೊಂಡರೂ ಅಧಿಕಾರಿಗಳು ಮಾತ್ರ ರಜೆ ನೀಡಲು ನಿರಾಕರಿಸಿದ್ದಾರೆ.

ಕೊನೆಯ ಸಾರಿ ಮಗಳ ಮುಖವನ್ನು ನೋಡದ ಹಾಗೆ ಮಾಡಿದ ಅಧಿಕಾರಿಗಳು ಇದೀಗ ಮನೆಗೆ ಹೋಗಲು ಸಹ ರಜೆ ನೀಡುತಿಲ್ಲ ಎಂದು ಸಹೋದ್ಯೋಗಿಗಳ ಜೊತೆ ಮಂಜುನಾಥ್ ತಮ್ಮ ಅಳಲನ್ನು ತೊಡಿಕೊಳ್ಳುತ್ತಿದ್ದಾರೆ.

LEAVE A REPLY

Please enter your comment!
Please enter your name here