ನೆನ್ನೆ ನಡೆದ ಬೆಂಗಳೂರು ಹಾಗು ಹೈದ್ರಾಬಾದ್ ಪಂದ್ಯವನ್ನು ವೀಕ್ಷಿಸಲು ಬಂದಂತ ಈ ಹುಡುಗಿ ಕ್ಯಾಮರಾಮೆನ್ ಕಣ್ಣಿಗೆ ಬಿದ್ದು ಒಂದೇ ದಿನದಲ್ಲಿ ಕರ್ನಾಟಕದ ಕ್ರಷ್ ಆಗಿದ್ದಾಳೆ ಅಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿದ್ದಾಳೆ. ಕೆಲವೊಮ್ಮೆ ಯಾರ ಯಾರ ಅದೃಷ್ಟ ಹೇಗೆ ಇರುತ್ತೆ ಅನ್ನೋದೇ ಗೊತ್ತಾಗಲ್ಲ ಅನ್ನೋದಕ್ಕೆ ಈ ಹುಡುಗಿನೇ ಸಾಕ್ಷಿ. ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡವನ್ನು ಬೆಂಬಲಿಸಿದ್ದ ಅಭಿಮಾನಿಯೊಬ್ಬರು ಒಂದೇ ದಿನದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾರೆ.

ಶನಿವಾರ ನಡೆದ ಪಂದ್ಯದಲ್ಲಿ ದೀಪಿಕಾ ಘೋಷ್ ಎಂಬವರು ಬೆಂಗಳೂರು ತಂಡವನ್ನು ಧ್ವಜ ಹಿಡಿದು ಬೆಂಬಲಿಸುತ್ತಿದ್ದರು. ಇವರು ಧ್ವಜ ಹಿಡಿದು ಬೆಂಬಲಿಸುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದೇ ತಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇನ್‍ಸ್ಟಾಗ್ರಾಮ್‍ನಲ್ಲಿ 6 ಸಾವಿರ ಮಂದಿ ಫಾಲೋ ಮಾಡುತ್ತಿದ್ದರೆ ದಿನ ಬೆಳಗಾಗುವುದರ ಒಳಗಡೆ ಒಂದು ಲಕ್ಷಕ್ಕೂ ಅಧಿಕ ಮಂದಿ ಫಾಲೋ ಮಾಡಿದ್ದಾರೆ. ದೀಪಿಕಾ ತಮ್ಮ ಖಾತೆಯಲ್ಲಿ ಬೆಂಗಳೂರು ತಂಡದ ಧ್ವಜ ಹಿಡಿದು ಸಂಭ್ರಮಿಸುತ್ತಿರುವ ವಿಡಿಯೋ ಅಪ್ಲೋಡ್ ಮಾಡಿದ್ದು 13 ಗಂಟೆಯಲ್ಲಿ 7 ಲಕ್ಷ ವ್ಯೂ ಕಂಡಿದೆ.

ಸಾಮಾಜಿಕ ಜಾಲತಾಣದಲ್ಲಿ ದೀಪಿಕಾ ಘೋಷ್ ಭಾವಚಿತ್ರ ಹಾಕಿ ಹಲವಾರು ನಕಲಿ ಖಾತೆಯನ್ನು ಸಹ ತೆರೆಯಲಾಗುತ್ತಿದೆ. ಈ ವಿಚಾರ ತಿಳಿಯುತ್ತಿದ್ದಂತೆ ನನ್ನ ಹೆಸರಿನಲ್ಲಿ ಹಲವಾರು ನಕಲಿ ಖಾತೆಗಳನ್ನು ತೆರೆಯಲಾಗಿದೆ. ಅವುಗಳನ್ನು ಫಾಲೋ ಮಾಡಬೇಡಿ ಎಂದು ದೀಪಿಕಾ ಘೋಷ್ ಪೋಸ್ಟ್ ಪ್ರಕಟಿಸಿದ್ದಾರೆ. ಭಾನುವಾರ ಸಂಜೆಯ ವೇಳೆ ದೀಪಿಕಾ ಇನ್‍ಸ್ಟಾಗ್ರಾಮ್ ಖಾತೆಯನ್ನು 1.30 ಲಕ್ಷ ಮಂದಿ ಫಾಲೋ ಮಾಡಿದ್ದಾರೆ.

LEAVE A REPLY

Please enter your comment!
Please enter your name here