ಐಸ್ ಕ್ಯೂಬ್ ನ ಬಗ್ಗೆ ಸ್ವಲ್ಪ ಮಟ್ಟಿಗೆಯಾದರೂ ನೀವು ತಿಳಿದಿರುತ್ತೀರ, ಇದನ್ನು ಹಲವು ಉಪಯೋಗಗಳಿಗೆ ಬಳಸುತ್ತಾರೆ, ಜೊತೆಗೆ ಮುಖದ ಕಾಂತಿಯನ್ನು ಹೆಚ್ಚಿಸಲು ಇದನ್ನು ಬಳಸುತ್ತಾರೆ. ಮುಖದ ಮೇಲಿನ ಮೊಡವೆಗಳನ್ನು ನಿವಾರಿಸಿ ಕಲೆಯನ್ನು ಹೋಗಲಾಡಿಸುತ್ತದೆ. ಹಾಗಾದರೆ ತ್ವಚೆಯ ಕಾಂತಿಯನ್ನು ಪಡೆಯಲು ಐಸ್ ಕ್ಯೂಬ್ ಅನ್ನು ಹೇಗೆ ಬಳಸಬೇಕು ಅನ್ನೋದನ್ನ ಮುಂದೆ ನೋಡಿ..

ಸೂರ್ಯನ ಶಾಖದಿಂದ ಮುಖದಲ್ಲಿ ಕಪ್ಪು ಕಾಣಿಸಿಕೊಂಡರೆ, ಮುಖದ ಮೇಲಿನ ಕಪ್ಪು ಕಲೆಗಳನ್ನು ನಿವಾರಿಸಲು ಐಸ್ ಕ್ಯೂಬ್ ಅನ್ನು ನೇರವಾಗಿ ತ್ವಚೆ ಅಚ್ಚಬಾರದು. ಒಂದು ಬಿಳಿ ಹತ್ತಿ ಬಟ್ಟೆಯಲ್ಲಿ ಹಾಕಿ ಅದರ ಮೂಲಕ ಮುಖಕ್ಕೆ ಮಸಾಜ್ ರೀತಿಯಲ್ಲಿ ಮಾಡಬೇಕು. ನೇರವಾಗಿ ಮಾಡುವುದರಿಂದ ಮುಖದ ಚರ್ಮ ಒಡೆಯುವ ಸಾಧ್ಯತೆಗಳಿರುತ್ತವೆ.

ಮುಖವನ್ನು ಸುಂದರವಾಗಿ ಕಾಣಲು ಪ್ರತಿದಿನ ೧೦ ರಿಂದ ೨೦ ನಿಮಿಷ ಐಸ್ ಕ್ಯೂಬ್ ಗಳಿಂದ ಮುಖವನ್ನು ಮಸಾಜ್ ಮಾಡಿ ತೊಳೆದುಕೊಂಡರೆ ಮುಖ ಹೊಳೆಯುತ್ತದೆ. ಮುಖದ ಚರ್ಮ ಒಣಗಿದ್ದರೆ, ಎರಡು ಮೂರೂ ಬಾದಾಮಿಗಳನ್ನು ಪೇಸ್ಟ್ ಮಾಡಿಕೊಂಡು ಅದನ್ನು ಐಸ್ ಕ್ಯೂಬ್ ಗಳನ್ನಾಗಿ ಮಾಡಿಕೊಂಡು ಮುಖಕ್ಕೆ ಮಸಾಜ್ ಮಾಡಿದರೆ, ಚರ್ಮದ ಆರೋಗ್ಯ ಹೆಚ್ಚುತ್ತದೆ.

ಆಯಿಲ್ ಸ್ಕಿನ್ ಇರೋರು ಐಸ್ ಕ್ಯೂಬ್ ಮಾಡಿಕೊಳ್ಳುವಾಗ ಸ್ವಲ್ಪ ನಿಂಬೆ ಹಣ್ಣಿನ ರಸ ಸೇರಿಸಿ ಐಸ್ ಕ್ಯೂಬ್ ಗಳನ್ನು ಮಾಡಿಕೊಂಡು ಮಸಾಜ್ ಮಾಜಿಕೊಂಡರೆ ಚರ್ಮ ಉತ್ತಮವಾಗಿರುತ್ತದ. ಅಷ್ಟೇ ಅಲ್ಲದೆ ಕಂಕಳಲ್ಲಿ ಹೆಚ್ಚು ಬೆವರು ಬರುವವರು ಇದನ್ನು ಮಾಡುವುದು ಒಳ್ಳೆಯದು.

ದೇಹದಲ್ಲಿ ಬಾಹು ಬಂದು ಊದಿಕೊಂಡಿದ್ದರೆ ಐಸ್ ಕ್ಯೂಬ್ ಬಳಸಿ ನಿವಾರಿಸಿಕೊಳ್ಳಬಹುದು, ಅಷ್ಟೇ ಅಲ್ಲದೆ ಕುತ್ತಿಗೆಯ ಮೇಲಿನ ಮೊಣಕೈ, ಮೊಣಕಾಲಿನ ಮೇಲಿನ ಕಪ್ಪು ಕಲೆಗಳ ನಿವಾರಣೆಗೆ ಆಲೋವೆರಾ (ಲೋಳೆರಸ) ಕ್ಯೂಬ್ ಗಳನ್ನು ಮಾಡಿಕೊಂಡು ಜಾಸ್ಮಿನ್ ಅಥವಾ ಬೇವಿನ ಎಣ್ಣೆಯನ್ನು ಸೇರಿಸಿದರೆ ಚರ್ಮಕ್ಕೆ ಅತ್ಯುತ್ತಮವಾದ ಔಷಧಿಯಾಗುತ್ತದೆ.ಇದನ್ನು ಕಪ್ಪು ಕಲೆ ಇರುವ ಜಾಗಕ್ಕೆ ಹಚ್ಚಿದರೆ ನಿವಾರಣೆಯಾಗುತ್ತದೆ.

LEAVE A REPLY

Please enter your comment!
Please enter your name here