ಪ್ರತಿಯೊಬ್ಬರಿಗೂ ಸುಲಭವಾಗಿ ಕಾಣುವಂತ ತುಂಬೆ ಗಿಡ, ಗ್ರಾಮೀಣ ಪ್ರದೇಶಗಳಲ್ಲಿ ಹೊಲ ಗದ್ದೆಗಳ ಬದಿಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.ಈ ತುಂಬೆ ಗಿಡದ ತುಂಬೆಲ್ಲ ಇದೆ ಆರೋಗ್ಯಕಾರಿ ಲಾಭಗಳು.

ತುಂಬೆ ಗಿಡ ಯಾವೆಲ್ಲ ಸಮಸ್ಯೆಗಳಿಗೆ ಔಷಧಿಯಾಗಿ ಕೆಲಸ ಮಾಡುತ್ತದೆ ಅನ್ನೋದನ್ನ ಈ ಮೂಲಕ ತಿಳಿಯೋಣ ಬನ್ನಿ..
ಮನೆ ಮದ್ದಿನಲ್ಲಿ ತುಂಬೆ ಗಿಡವನ್ನು ಹೇಗೆ ಬಳಸಬೇಕು ಹಾಗು ಯಾವ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು ಅನ್ನೋದನ್ನ ಮುಂದೆ ನೋಡಿ..

ಕಣ್ಣಿನ ಅಲರ್ಜಿಯನ್ನು ನಿವಾರಿಸುತ್ತದೆ, ಕಣ್ಣಿನಲ್ಲಿ ತುರಿಕೆ, ಕಣ್ಣಲ್ಲಿ ನೀರು ಬರುವ ಸಮಸ್ಯೆ ಇದ್ರೆ ತುಂಬೆಗಿಡದ ರಸಕ್ಕೆ ಅಕ್ಕಿತೊಳೆದ ನೀರನ್ನು ಬೆರೆಸಿ ಕಣ್ಣು ತೊಳೆದರೆ ಕಣ್ಣಿಗೆ ತುಂಬಾನೇ ಒಳ್ಳೆಯದು ಎಂದು ಆಯುರ್ವೇದ ಪಂಡಿತರು ಹೇಳುತ್ತಾರೆ.

ಅಜೀರ್ಣತೆಯನ್ನು ನಿವಾರಿಸುತ್ತದೆ, 10 ರಿಂದ 15ml ತುಂಬೆಗಿಡದ ಕಷಾಯಕ್ಕೆ ಸೈಂಧವ 2-3 ಗ್ರಾಂ ಉಪ್ಪು ಸೇರಿಸಿ ದಿನದಲ್ಲಿ ಎರಡು ಬಾರಿ ಸೇವಿಸಿದರೆ ಉತ್ತಮ ಜೀರ್ಣಕ್ರಿಯೆಯನ್ನು ಪಡೆಯಬಹುದಾಗಿದೆ.

ಮಕ್ಕಳಲ್ಲಿ ಹೆಚ್ಚಾಗಿ ಕಾಡುವ ಜಂತು ಹುಳ ಸಮಸ್ಯೆಯನ್ನು ತುಂಬೆ ನಿವಾರಿಸುತ್ತದೆ, ತುಂಬೆ ಹೂ ಹಾಗೂ ಎಲೆಯನ್ನು ಜಜ್ಜಿ ಅದರ ರಸಕ್ಕೆ 2 ಹನಿ ಜೇನುತುಪ್ಪ ಬೆರೆಸಿ ಕುಡಿಸಿದರೆ ಹೊಟ್ಟೆ ನೋವು ಜೊತೆಗೆ ಜಂತು ನಿವಾರಣೆಯಾಗುತ್ತದೆ.

ಶೀತ ತಲೆ ನೋವು ಸಮಸ್ಯೆಯನ್ನು ನಿವಾರಿಸುವ ತುಂಬೆ, ತುಂಬೆಗಿಡದ ಕಾಂಡವನ್ನು ನೀರಿನಲ್ಲಿ ಕುದಿಸಿ ಅದರ ಹಬೆ ತೆಗೆದುಕೊಂಡರೆ ಈ ಸಮಸ್ಯೆಗೆ ಪರಿಹಾರ ಕಾಣಬಹುದು.

ಕೈಕಾಲುಗಳು ಊತ ಕಂಡು ಬಂದರೆ, ತುಂಬೆಯ ಸಹಾಯವನ್ನು ಪಡೆದುಕೊಳ್ಳುವುದು ಉತ್ತಮ,ತುಂಬೆ ಗಿಡದ ಕಾಂಡವನ್ನು ನೀರಿನಲ್ಲಿ ಕುದಿಸಿ ನಂತರ ಬಟ್ಟೆಯನ್ನು ಅದರಲ್ಲಿ ಮುಳುಗಿಸಿ ಹಿಂಡಿ, ಊತ ಇರುವ ಕಡೆ ಒತ್ತಿದರೆ ಊತ ಕಮ್ಮಿಯಾಗುತ್ತದೆ.

ಅಲರ್ಜಿ ಸಮಸ್ಯೆಗೆ ಮನೆಮದ್ದು,ಅಲರ್ಜಿ ಸಮಸ್ಯೆ ಕಂಡು ಬಂದರೆ ಸ್ವಲ್ಪ ತುಂಬೆ ಎಲೆಯನ್ನು ನೀರಿಗೆ ಹಾಕಿ ಕುದಿಸಿ ಕುಡಿಯಬೇಕು ಹಾಗೂ ತುಂಬೆರಸವನ್ನು ತುರಿಕೆ ಇರುವ ಜಾಗಕ್ಕೆ ಹಚ್ಚಿದರೆ ಅಲರ್ಜಿ ಕಮ್ಮಿಯಾಗುವುದು.

LEAVE A REPLY

Please enter your comment!
Please enter your name here