ಪ್ರತಿ ಮನುಷ್ಯನಿಗೂ ಒಂದಲ್ಲ ಒಂದು ರೀತಿಯ ಅನಾರೋಗ್ಯದ ಸಮಸ್ಯೆ ಕಾಡುವುದುಂಟು, ಅಂತ ಸಮಸ್ಯೆಗಳಿಗೆ ಸರಿಯಾದ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಸೂಕ್ತ. ಸಾಮಾನ್ಯವಾಗಿ ತುಂಬೆ ಗಿಡ ಗ್ರಾಮೀಣ ಪ್ರದೇಶದಲ್ಲಿ ಇರುವಂತವರಿಗೆ ಹೆಚ್ಚಾಗಿ ಗೊತ್ತಿರುತ್ತದೆ ಈ ಗಿಡದಲ್ಲಿ ಹಲವು ದೈಹಿಕ ಸಮಸ್ಯೆಗಳಿಗೆ ಪರಿಹಾರವನ್ನು ಪಡೆದುಕೊಳ್ಳಬಹುದು.

ತುಂಬೆ ಗಿಡದಲ್ಲಿರುವ ಔಷಧಿ ಗುಣಗಳು : ಮಕ್ಕಳಲ್ಲಿ ಕಾಡುವಂತ ಜಂತು ಹುಳ ಸಮಸ್ಯೆಗೆ ತುಂಬೆ ಗಿಡದಲ್ಲಿದೆ ಔಷಧಿ,ತುಂಬೆ ಹೂ ಹಾಗೂ ಎಲೆಯನ್ನು ಜಜ್ಜಿ ಅದರ ರಸಕ್ಕೆ 2 ಹನಿ ಜೇನುತುಪ್ಪ ಬೆರೆಸಿ ಕುಡಿಸಿದರೆ ಮಕ್ಕಳಿಗೆ ಹೊಟ್ಟೆನೋವು ಕಾಡುವುದಿಲ್ಲ ಹಾಗು ಜಂತು ಹುಳ ನಿವಾರಣೆಯಾಗುವುದು.

ಅಲರ್ಜಿ ಸಮಸ್ಯೆ ಇದ್ರೆ ತುಂಬೆ ಎಲೆಯನ್ನು ನೀರಿಗೆ ಹಾಕಿ ಕುದಿಸಿ ಕುಡಿಯಬೇಕು ಹಾಗೂ ತುಂಬೆರಸವನ್ನು ತುರಿಕೆ ಇರುವ ಜಾಗಕ್ಕೆ ಹಚ್ಚಿದರೆ ಅಲರ್ಜಿ ಕಮ್ಮಿಯಾಗುವುದು. ಅಷ್ಟೇ ಅಲ್ದೆ ಶೀತದಿಂದ ಮೂಗು ಕಟ್ಟಿದ್ದಂತಾಗಿ ತಲೆನೋವು ಉಂಟಾದರೆ ತುಂಬೆಗಿಡದ ಕಾಂಡವನ್ನು ನೀರಿನಲ್ಲಿ ಕುದಿಸಿ ಅದರ ಹಬೆ ತೆಗೆದುಕೊಂಡರೆ ರಿಲೀಫ್‌ ಅನಿಸುವುದು.

ಕೈ ಕಾಲುಗಳಿಗೆ ಪೆಟ್ಟು ಬಿದ್ದು ಊತವಾಗಿದ್ದರೆ ತುಂಬೆ ಗಿಡದ ಕಾಂಡವನ್ನು ನೀರಿನಲ್ಲಿ ಕುದಿಸಿ ನಂತರ ಬಟ್ಟೆಯನ್ನು ಅದರಲ್ಲಿ ಮುಳುಗಿಸಿ ಹಿಂಡಿ, ಊತ ಇರುವ ಕಡೆ ಒತ್ತಿದರೆ ಊತ ಕಮ್ಮಿಯಾಗುವುದು. ಇನ್ನು ಹಲವು ದೈಹಿಕ ಸಮಸ್ಯೆಗಳಿಗೆ ತುಂಬೆ ರಾಮಬಾಣವಾಗಿ ಕೆಲಸ ಮಾಡುತ್ತದೆ.

LEAVE A REPLY

Please enter your comment!
Please enter your name here