ಭಾರತದೆಲ್ಲೆಡೆ ಬೆಳೆಯುವಂತ ಸೇವಂತಿಗೆ ಹೂವು ಬರಿ ಪೂಜೆಗೆ ಮಾತ್ರವಲ್ಲದೆ ಮಾನವನ ಹಲವಾರು ರೋಗಗಳನ್ನು ಹೋಗಲಾಡಿಸಲು ಸಹ ಉಪಯೋಗಕಾರಿಯಾಗಿದೆ. ಈ ಸೇವಂತಿಗೆಯ ಗಿಡದ ಎಲೆ, ಹೂವು ಮತ್ತು ಬೇರು ಉಪಯೋಗ ಭಾಗಗಳಾಗಿವೆ.

ಇದು ತಿಕ್ತ ರಸ ಹೊಂದಿದ್ದು ಪಿತ್ತ ಮತ್ತು ಕಫದೋಷಹರವಾಗಿದೆ. ಕೆಮ್ಮು ಇರುವಾಗ ಸೇವಂತಿಗೆ ಎಲೆಗಳ ರಸದಲ್ಲಿ ಜೇನುತುಪ್ಪ ಬೆರೆಸಿ ಸೇವಿಸಬೇಕು. ರಕ್ತಬೇದಿಯಾಗುತ್ತಿದ್ದಲ್ಲಿ ಹೂವುಗಳನ್ನು ಅರೆದು ಸಕ್ಕರೆ ಮತ್ತು ಜೀರಿಗೆ ಪುಡಿ ಬೆರೆಸಿ ಸೇವಿಸಿ ನಂತರ ನೀರು ಕುಡಿಯಬೇಕು.

ಗಾಯಗಳಾಗಿದ್ದಲ್ಲಿ ಸ್ವಲ್ಪ ಸೇವಂತಿಗೆ ಎಲೆಯನ್ನು ಅರಿಸಿನ ಪುಡಿಯೊಂದಿಗೆ ಅರೆದು ಚಟ್ನಿ ಮಾಡಿ ಲೇಪಿಸಬೇಕು. ಹೊಟ್ಟೆನೋವಿನಿಂದ ಬಳಲುವವರು ಸೇವಂತಿಗೆ ಹೂವಿನ ರಸವನ್ನು ಜೇನಿನಲ್ಲಿ ಬೆರೆಸಿ ಕುಡಿಯಬೇಕು. ಮುಟ್ಟಿನ ಸಮಯದಲ್ಲಿ ಹೊಟ್ಟೆನೋವು ಅಧಿಕವಾಗಿ ಬರುತ್ತಿದ್ದಲ್ಲಿ ಸೇವಂತಿಗೆ ಹೂವಿನ ರಸದ ಸೇವನೆ ಉತ್ತಮ ಫಲ ನೀಡುತ್ತದೆ.

ಮಾನಸಿಕ ಕಾಯಿಲೆಯಿಂದ ಬಳಲುವವರಿಗೂ ಕೂಡ ಇದು ಉತ್ತಮ ಔಷಧಿಯಾಗಿದೆ. ಅರುಚಿ ಮತ್ತು ಆಮ್ಲಪಿತ್ತದಿಂದ ಬಳಲುವವರಿಗೂ ಇದು ಅತ್ಯಂತ ಉಪಯುಕ್ತ. ಬೇಸಿಗೆಯಲ್ಲಿ ಉಂಟಾಗುವ ಅತಿಸಾರಕ್ಕೆ ಸೇವಂತಿಗೆಯ ರಸ ಸೇವನೆ ಉತ್ತಮ ಫಲ ನೀಡುತ್ತದೆ.

LEAVE A REPLY

Please enter your comment!
Please enter your name here