ಸಾಸಿವೆ ಅಡುಗೆಯಲ್ಲಿ ಬಳಸುವ ಪದಾರ್ಥವಾಗಿದೆ ಅಷ್ಟೇ ಅಲ್ಲದೆ ಸಾಸಿವೆಯನ್ನು ಹಲವು ಮನೆಮದ್ದುಗಳ ಬಳಕೆಯಲ್ಲಿ ಬಳಸಲಾಗುತ್ತದೆ. ಸಾಸಿವೆ ಹಾಗು ಅದರ ಎಣ್ಣೆ ಆಯುರ್ವೇದದಲ್ಲಿ ಹೆಚ್ಚಾಗಿ ಉಪಯೋಗವನ್ನು ಹೊಂದಿದೆ. ಸಾಸಿವೆ ಬಳಸಿ ಯಾವೆಲ್ಲ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು ಅನ್ನೋದನ್ನ ತಿಳಿಸುತ್ತೇವೆ ನೋಡಿ..

ಮಂಡಿ ನೋವು ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ ಸಾಸಿವೆ ನಿವಾರಿಸುತ್ತದೆ ಹೇಗೆ ಅಂತೀರಾ.? ಒಂದು ಕಪ್ ಸಾಸಿವೆಯನ್ನು ಸ್ವಲ್ಪ ಬಿಸಿನೀರಿನಲ್ಲಿ ಕಲಸಿ ಬಟ್ಟೆಯ ಮೇಲೆ ಲೇಪಿಸಿ ಅದನ್ನು ನೋವಿರುವ ಮಂದಿಯ ಮೇಲೆ ಕಟ್ಟಿದರೆ ಮಂಡಿ ನೋವು ನಿವಾರಣೆಯಾಗುತ್ತದೆ.

ದೇಹದಲ್ಲಿ ಸ್ನಾಯುಸೆಳೆತ ಸಮಸ್ಯೆ ಇದ್ರೆ ಹಳದಿ ಸಾಸಿವೆ ಪೇಸ್ಟ್ ಅನ್ನು ಒಂದು ಚಮಚ ಸೇವಿಸಿ ನಂತರ ಸ್ವಲ್ಪ ಬಿಸಿ ನೀರು ಕುಡಿದರೆ ಸ್ನಾಯುಸೆಳೆತ ಸಮಸ್ಯೆ ನಿವಾರಣೆಯಾಗುತ್ತದೆ.

ಶೀತದಿಂದ ಕಫ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ, ಸಾಸಿವೆ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಎದೆಯಭಾಗದಲ್ಲಿ ಮಸಾಜ್ ರೀತಿ ಮಾಡಿದರೆ ಎದೆಯಲ್ಲಿರುವ ಕಫ ಕರಗುತ್ತದೆ.

LEAVE A REPLY

Please enter your comment!
Please enter your name here