ಮಂಡಿ ನೋವಿಗೆ ಹಲವು ಔಷಧಿಗಳಿವೆ ಹಾಗು ಮನೆಮದ್ದುಗಳಿವೆ, ಅವುಗಳಲ್ಲಿ ಸುಲಭವಾಗಿ ಪರಿಹರಿಸುವ ಈ ಹೂವಿನ ಬಗ್ಗೆ ಒಮ್ಮೆ ತಿಳಿಯೋಣ ಬನ್ನಿ. ಈ ಹೂವನ್ನು ಪಾರಿಜಾತ ಹೂವು ಎಂಬುದಾಗಿ ಕರೆಯಲಾಗುತ್ತದೆ, ಸಾಮಾನ್ಯವಾಗಿ ಈ ಹೂವು ಬಹಳಷ್ಟು ಜನಕ್ಕೆ ಪರಿಚಯವಾಗಿರುತ್ತದೆ.

ಈ ಹೂವು ಬಿಳಿ ಬಣ್ಣವನ್ನು ಹೊಂದಿರುತ್ತದೆ ಹಾಗು, ರಾತ್ರಿಯಲ್ಲಿ ಅರಳುವುದು ಇದರ ಸುವಾಸನೆ ಸುಮಾರು ದೂರದವರೆಗೆ ಪರಿಮಳವಿರುತ್ತದೆ. ಈ ಹೂವಿನ ಗಿಡಗಳನ್ನು ಹೆಚ್ಚಾಗಿ ಬೆಟ್ಟ ಗುಡ್ಡಗಳಲ್ಲಿ ಹಾಗು ದೇವಾಲಯ, ಮನೆ ಮುಂದೆ ಕಾಣಬಹುದು.

ಈ ಪಾರಿಜಾತ ಗಿಡದ ಎಲೆಗಳನ್ನು 6-7 ತಗೆದುಕೊಂಡು ತೊಳೆದು ನುಣ್ಣಗೆ ಅರೆದು ಪೇಸ್ಟ್ ರೀತಿ ಮಾಡಿಕೊಳ್ಳಬೇಕು, ಈ ಪೇಸ್ಟ್ ಅನ್ನು ಒಂದು ಗ್ಲಾಸ್ ನೀರಿನಲ್ಲಿ ಹಾಕಿ ಕುದಿಸಬೇಕು. ಆ ನೀರು ಅರ್ಧ ಆಗುವವರೆಗೂ ಕಷಾಯದಂತೆ ಮಾಡಿಕೊಳ್ಳಬೇಕು, ಆ ಕಷಾಯವನ್ನು ರಾತ್ರಿಯೆಲ್ಲ ಹಾಗೆಯೇ ಇಟ್ಟು ಬೆಳಿಗ್ಗೆ ತಣ್ಣಗೆ ಇರುವಾಗಲೇ ಕುಡಿಯಬೇಕು.

ಈ ಕಷಾಯ ರುಮಟಾಯಿಡ್, ಅರ್ಥರೈಟಿಸ್ ನೋವುಗಳಿಗೆ ಉತ್ತಮವಾದ ಔಷಧವಾಗಿ ಕೆಲಸ ಮಾಡುತ್ತದೆ. ಇದನ್ನು ತಯಾರಿಮಾಡಿಕೊಂಡು ಪ್ರತಿದಿನ ತೆಗೆದುಕೊಂಡರೆ ಒಂದು ತಿಂಗಳಿನಲ್ಲಿ ಎಂತಹ ಕೀಲು ನೋವು ಇದ್ರು ನಿವಾರಣೆಯಾಗುವುದು ಅಷ್ಟೇ ಅಲ್ಲದೆ ಮೂಳೆಗಳು ಸವೆದು ಹೋಗಿದ್ದರೆ ಕಾರ್ಟಿಲೆಜ್ ಎಂಬ ಅಂಶ ಮತ್ತೆ ಉತ್ಪತ್ತಿಯಾಗುತ್ತದೆ.

LEAVE A REPLY

Please enter your comment!
Please enter your name here