ಪ್ರತಿ ಮನುಷ್ಯನು ಒಂದಲ್ಲ ಒಂದು ದೈಹಿಕ ಸಮಸ್ಯೆಯಿಂದ ಪ್ರತಿದಿನ ಬಳಲುತ್ತಾನೆ, ಅದರಲ್ಲೂ ಈ ಕೆಮ್ಮು, ನೆಗಡಿ, ತಲೆನೋವು ಮುಂತಾದ ಸಾಮಾನ್ಯ ಸಮಸ್ಯೆಗಳು ಪ್ರತಿಯೊಬ್ಬರಿಗೂ ಕಾಡುವುದುಂಟು, ಹಾಗಾಗಿ ಪ್ರತಿಯೊಂದಕ್ಕೂ ಇಂಗ್ಲಿಷ್ ಮಾತ್ರೆಗಳನ್ನು ಬವಳಸುವ ಬದಲು ಈ ಮನೆಮದ್ದನ್ನು ಅತಿ ಸುಲಭವಾಗಿ ಮಾಡಿ ಪರಿಹಾರವನ್ನು ಕಂಡು ಕೊಳ್ಳಬಹುದಾಗಿದೆ.

ಅತಿಯಾದ ತಲೆಭಾರ ಹಾಗೂ ತಲೆನೋವು ನಿವಾರಣೆಗೆ: ಅವರೆ ಎಲೆಯ ರಸವನ್ನು ಒಂದು ಚಿಕ್ಕ ಬಟ್ಟೆಯಲ್ಲಿ ಹಾಕಿ, ಆ ಬಟ್ಟೆಯನ್ನು ಹಣೆಯ ಮೇಲೆ ಹಾಕಿಕೊಂಡಿರಬೇಕು. ಹೀಗೆ ಮಾಡುವುದರಿಂದ ತಲೆಭಾರ ಮತ್ತು ತಲೆನೋವು ಗುಣವಾಗುವುದು.

ಹುಟ್ಟೆಯಲ್ಲಿ ಜಂತು ಹುಳು ಸಮಸ್ಯೆ ಇದ್ರೆ: ಪರಂಗಿಹಣ್ಣಿನ ಬೀಜದೊಂದಿಗೆ ಸ್ವಲ್ಪ ಬೆಲ್ಲವನ್ನು ಸೇವಿಸುತ್ತಾ ಬಂದರೆ ಹೊಟ್ಟೆಯಲ್ಲಿನ ಜಂತುಹುಳುಗಳ ಉಪದ್ರವ ಮರೆಯಾಗುತ್ತದೆ.

ಆಮಶಂಕೆ ಸಮಸ್ಯೆ ಬಂದ್ರೆ: ಸ್ವಲ್ಪ ಮೆಂತ್ಯೆಯನ್ನು ಬಾಯಿಗೆ ಹಾಕಿಕೊಂಡು ಸ್ವಲ್ಪ ಗಟ್ಟಿ ಮೊಸರನ್ನು ಅದರೊಂದಿಗೆ ಸೇರಿಸಿ ಕುಡಿಯಬೇಕು ಆಮಶಂಕೆ ಪ್ರಾರಂಭವಾದ ಕೂಡಲೇ ಹೀಗೆ ಮಾಡುವುದರಿಂದ ಗುಣವಾಗುತ್ತದೆ.

ಅತಿ ಉಷ್ಣದಿಂದ ಕಣ್ಣು ನೋವು ಇದ್ರೆ: ಎಳ್ಳೆಣ್ಣೆಯಂನ್ನುಕಣ್ಣಿನ ರೆಪ್ಪೆಯ ಮೇಲೆ ಸವರಿದರೆ ಮತ್ತು ಕಣ್ಣಿಅಂಚಿಗೆ ಹಚ್ಚಿಕೊಂಡರೆ ಅತಿ ಉಷ್ಣದ ಕಣ್ಣುನೋವು ನೀಗುತ್ತದೆ. ಪ್ರತಿದಿನ ಹೊಸ ಹೊಸ ಬಗೆಯ ಸಮಸ್ಯೆಗಳಿಗೆ ಮನೆಮದ್ದು ತಿಳಿದುಕೊಳ್ಳಲು ನಮ್ಮ ಪೇಜ್ ಅನ್ನು ಬೆಂಬಲಿಸಿ.

LEAVE A REPLY

Please enter your comment!
Please enter your name here