ದಾಸವಾಳ ಹೂವು ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಚಿರಪರಿಚಿತವಾಗಿರುತ್ತದೆ, ಈ ಹೂವು ಪೂಜೆಯ ಬಳಕೆಗೆ ಹಾಗು ಹಲವು ಮನೆ ಔಷಧಿಗಳಲ್ಲಿ ಸಹಕಾರಿಯಾಗಿದೆ. ಬಾಯಿ ಹುಣ್ಣು ಸಮಸ್ಯೆ ಹಾಗು ತಲೆ ಕೂದಲು ಉದುರುವಂತ ಸಮಸ್ಯೆಗೆ ದಾಸವಾಳ ಹೇಗೆ ಕೆಲಸ ಮಾಡುತ್ತೆ ಅನ್ನೋದನ್ನ ಮುಂದೆ ನೋಡಿ.

ಬಹಳಷ್ಟು ಜನ ಈ ದಾಸವಾಳದ ಗಿಡವನ್ನು ಮನೆ ಮುಂಭಾಗದಲ್ಲಿ ಬೆಳೆಸಿರುತ್ತಾರೆ ಆಗಾಗಿ ಇದು ಪ್ರತಿಯೊಬ್ಬರಿಗೂ ಸುಲಭವಾಗಿ ಸಿಗುವಂತಾದಾಗಿದೆ. ತಲೆ ಕೂದಲು ಸೊಂಪಾಗಿ ಕಪ್ಪಾಗಿ ದಟ್ಟವಾಗಿ ಬೆಳೆಯಲು ದಾಸವಾಳ ನೈಸರ್ಗಿಕ ಚಿಕಿತ್ಸೆಯಾಗಿದೆ. ಹೌದು ದಾಸವಾಳದ ಹೂವನ್ನು ಕೊಬ್ಬರಿ ಎಣ್ಣೆಯಲ್ಲಿ ಕಾಯಿಸಿ ಶೋಧಿಸಿ, ಎಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಸೊಂಪಾಗಿ, ಕಪ್ಪಾಗಿ ಬೆಳೆಯುತ್ತದೆ.

ತಲೆಯಲ್ಲಿ ನೆರೆಗೂದಲು ಸಮಸ್ಯೆ ಕಾಡುವವರಿಗೆ ದಾಸವಾಳ ಹೂವು ಹೇಗೆ ಪರಿಹಾರವನ್ನು ನೀಡಬಲ್ಲದು, ದಾಸವಾಳದ ಹೂವುಗಳನ್ನು ಗೋ ಮೂತ್ರದಲ್ಲಿ ರುಬ್ಬಿ ತಲೆಗೆ ಹಚ್ಚುವುದರಿಂದ ನೆರೆಗೂದಲು ಕಡಿಮೆಯಾಗುವುದು ಈ ಸಮಸ್ಯೆಗೆ ದಾಸವಾಳ ಉತ್ತಮ ಫಲಿತಾಂಶ ನೀಡಬಲ್ಲದು.

ತಲೆಯಲ್ಲಿ ಹೊತ್ತು ಸಮಸ್ಯೆ ಇದ್ರೆ ದಾಸವಾಳದ ಎಲೆ ಮತ್ತು ಹೂವನ್ನು ಚೆನ್ನಾಗಿ ಅರೆದು ತಲೆಗೆ ಹಚ್ಚಿ ಅರ್ಧಗಂಟೆ ಬಿಟ್ಟು ಸ್ನಾನ ಮಾಡಿದರೆ ತಲೆಹೊಟ್ಟು ಸಮಸ್ಯೆಗೆ ಪರಿಹಾರ ಸಿಗುವುದು. ಅಷ್ಟೇ ಅಲ್ಲದೆ ಇನ್ನು ಹಲವು ಉಪಯೋಗಗಳಿವೆ ಈ ದಾಸವಾಳದಲ್ಲಿ

ಮಹಿಳೆಯರಲ್ಲಿ ಮುಟ್ಟಿನ ಸಮಯದಲ್ಲಿ ಹೆಚ್ಚು ರಕ್ತ ಸ್ರಾವ ಆಗುತ್ತಿದ್ದರೆ, ದಾಸವಾಳ ಮೊಗ್ಗನ್ನು ಹಾಲಿನಲ್ಲಿ ಅರೆದು ಸೇವಿಸುವುದರಿಂದ ಮುಟ್ಟಿನ ಸಮಯದಲ್ಲಾಗುವ ಅತಿಯಾದ ರಕ್ತಸ್ರಾವ ಕಡಿಮೆಯಾಗುತ್ತದೆ. ಬಾಯಿ ಹುಣ್ಣು ಸಮಸ್ಯೆ ನಿವಾರಣೆಗೆ ದಾಸವಾಳದ ಪುಷ್ಪವನ್ನು (ಹೂವನ್ನು) ಬಾಯಿ ಹುಣ್ಣು ಇದ್ದಲ್ಲಿ ಚೆನ್ನಾಗಿ ಅಗಿದು ತಿನ್ನುವುದು ಉಪಯುಕ್ತ.

LEAVE A REPLY

Please enter your comment!
Please enter your name here