ಸಾಮಾನ್ಯವಾಗಿ ಅತ್ತಿಹಣ್ಣು ಅಂದ್ರೆ ಹಳ್ಳಿಯ ಜನಕ್ಕೆ ಹೆಚ್ಚು ಪರಿಚಿತವಾಗಿರುತ್ತದೆ, ಈ ಹಣ್ಣಿನಲ್ಲಿದೆ ಹಲವು ಆರೋಗ್ಯಕಾರಿ ಗುಣಗಳು ಈ ಹಣ್ಣು ಸಾಮಾನ್ಯ ರೋಗಗಳಿಗೆ ಹೇಗೆ ಪರಿಹಾರವನ್ನು ಒದಗಿಸುತ್ತದೆ, ಮತ್ತು ಈ ಹಣ್ಣಿನಿಂದ ದೇಹಕ್ಕೆ ಸಿಗುವ ಉಪಯೋಗಗಳು ಯಾವುವು ಅನ್ನೋದನ್ನ ಒಮ್ಮೆ ತಿಳಿಯೋಣ ಬನ್ನಿ.

ದೇಹದಲ್ಲಿ ಯಾವುದೇ ರೀತಿಯ ನೋವು ಇದ್ರೆ ಅತ್ತಿ ಬೀಜ ಮತ್ತು ಹುರಳಿ ಕಾಳು ಹಾಗೂ ಎಳ್ಳೆಣ್ಣೆ ಹಾಕಿ ತಯಾರಿಸಿದ ಎಣ್ಣೆಯನ್ನು ದೇಹದಲ್ಲಿ ಯಾವುದೇ ರೀತಿಯ ನೋವಿದ್ದರು ಅದಕ್ಕೆ ಹಚ್ಚಿದರೆ ನೋವು ಶಮನವಾಗುತ್ತದೆ. ಕಿವಿ ಸೋರುವ ಸಮಸ್ಯೆಗೆ ಅತ್ತಿ ಹಣ್ಣಿನಲ್ಲಿದೆ ಪರಿಹಾರ ಹೌದು ಅತ್ತಿ ಹಣ್ಣಿನ ರಸಕ್ಕೆ ಜೇನುತುಪ್ಪ ಬೆರೆಸಿ ಸೇವಿಸಿದರೆ ಕಿವಿ ಸೋರುವುದು ನಿಲ್ಲುತ್ತದೆ.

ಮಂಡಿ ನೋವಿಗೆ ಪರಿಹಾರವನ್ನು ನೀಡಬಲ್ಲದು ಅತ್ತಿ ಎಲೆ ಹೌದು ಮಂಡಿ ನೋವು ಇದ್ದಾಗ ಅತ್ತಿಯ ಎಲೆಗಳನ್ನು ಬಿಸಿ ಮಾಡಿ ಮಂಡಿಗಳ ಮೇಲೆ ಪ್ಯಾಕ್‌ ಮಾಡಿದರೆ ಮಂಡಿ ನೋವು ಗುಣವಾಗುತ್ತದೆ. ಕೈ ಕಾಲುಗಳಲ್ಲಿ ಗಾಯ ಆಗಿದ್ದರೆ ಬೇಗನೆ ವಾಸಿ ಆಗೋದಿಲ್ಲ ಅನ್ನೋರು ಅತ್ತಿ ಹೂವನ್ನು ಪೇಸ್ಟ್‌ ಮಾಡಿ ಗಾಯದ ಮೇಲೆ ಲೇಪಿಸಿದರೆ ಗಾಯ ಬೇಗ ಮಾಯುತ್ತದೆ.

ಬಹಳಷ್ಟು ಮಹಿಳೆಯರಲ್ಲಿ ಈ ಬಿಳಿ ಮುತ್ತಿನ ಸಮಸ್ಯೆ ಕಾಡುತ್ತಿರುತ್ತದೆ ಇದಕ್ಕೆ ಪರಿಹಾರವನ್ನು ಒದಗಿಸಲು ಅತ್ತಿಯ ಬೇರಿನ ಪುಡಿಯನ್ನು ಅಕ್ಕಿ ತೊಳದ ನೀರಿನಲ್ಲಿ ಬೆರೆಸಿ ಸೇವಿಸಿದರೆ ಬಿಳಿ ಮುಟ್ಟಿನ ಸಮಸ್ಯೆ ಕಡಿಮೆಯಾಗುತ್ತದೆ. ಚಿಕ್ಕ ಪುಟ್ಟ ಸಮಸ್ಯೆಗಳಿಗೆ ಮಾತ್ರೆಗಳನ್ನು ನುಂಗುವ ಬದಲು ನೈಸರ್ಗಿಕ ಮನೆಮದ್ದು ಬಳಸಿ, ಅತ್ತಿ ಬೀಜದಿಂದ ತಯಾರಿಸಿದ ಎಣ್ಣೆಯನ್ನು ಹಣೆಗೆ ಹಚ್ಚಿದರೆ ತಲೆ ನೋವು ಕಡಿಮೆಯಾಗುತ್ತದೆ.

LEAVE A REPLY

Please enter your comment!
Please enter your name here