ಮನೆಯಲ್ಲಿ ಅಡುಗೆಗೆ ಬಳಸುವ ಓಂ ಕಾಳು ಹಲವು ಔಷದಿ ಗುಣಗಳನ್ನು ಹೊಂದಿದೆ, ಓಂ ಕಾಳನ್ನು ಹೀಗೆ ಬಳಸಿ ಯಾವೆಲ್ಲ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು ಅನ್ನೋದನ್ನ ಮುಂದೆ ನೋಡಿ..

ಊಟದ ನಂತರ ಕೆಲವರಿಗೆ ಸರಿಯಾಗಿ ಜೀರ್ಣವಾಗದೆ, ಎದೆ ಹುರಿ ಸಮಸ್ಯೆ ಕಾಡುವುದುಂಟು ಈ ಸಮಸ್ಯೆಗೆ ಒಂದೆರಡು ಬಾದಾಮಿ ಜೊತೆಗೆ ಓಂಕಾಳನ್ನು ಅಗೆದು ತಿನ್ನುವುದರಿಂದ ಎದೆಹುರಿ ಕಡಿಮೆಯಾಗುತ್ತದೆ.

ಕರುಳಿನ ರೋಗಗಳನ್ನು ನಿಯಂತ್ರಿಸುತ್ತದೆ, ಬಿಸಿನೀರಲ್ಲಿ ೨-೩ ಗ್ರಾಂ ಓಂಕಾಳನ್ನು ಅರ್ಧ ಗ್ರಾಂ ಕರಿಮೆಣಸನ್ನು ಹಾಕಿ ಸೇವಿಸುವುದರಿಂದ ಕರುಳಿಗೆ ಸಂಬಂದಿಸಿದ ರೋಗಗಳನ್ನು ನಿವಾರಿಸಿಕೊಳ್ಳಬಹುದು.

ಹೊಟ್ಟೆ ಹುಳು ಸಮಸ್ಯೆಗೆ ಮಜ್ಜಿಗೆಯಲ್ಲಿ ಓಂ ಕಾಳಿನ ಪುಡಿಯನ್ನು ಹಾಕಿಕೊಂಡು ಸೇವಿಸುವುದರಿಂದ ಹೊಟ್ಟೆ ಹುಳು ಸಮಸ್ಯೆ ನಿವಾರಣೆಯಾಗುತ್ತದೆ.

ಅತಿಯಾಗಿ ನೀರು ಭೇದಿ ಸಮಸ್ಯೆ ಇದ್ರೆ, ಓಂಕಾಳನ್ನು ಉಪ್ಪಿನ ಜತೆ ನುಂಗಿ ನೀರನ್ನು ಕುಡಿದರೆ ತಕ್ಷ ಣ ಭೇದಿ ನಿಲ್ಲುತ್ತದೆ. ಹಾಗು ಮಹಿಳೆಯರಲ್ಲಿ ಮುಟ್ಟಿನ ಸಮಯದಲ್ಲಿ ರಕ್ತಸ್ರಾವ ಹೆಚ್ಚಾಗಿದ್ದರೆ, ಓಂಕಾಳಿನ ಪುಡಿಯನ್ನು ಬೆಳಗ್ಗೆ ಸಂಜೆ ಬಿಸಿ ಹಾಲಲ್ಲಿ ಬೆರೆಸಿ ಸೇವಿಸಬೇಕು.

LEAVE A REPLY

Please enter your comment!
Please enter your name here