ಹಿಂದೂ ದೇವರುಗಳಲ್ಲಿ ವಿವಿಧ ರೀತಿಯ ವಿಶೇಷತೆಯನ್ನು ಹೊಂದಿರುವಂತ ಕೋಟ್ಯಾನು ಕೋಟಿ ದೇವಾನುದೇವತೆಗಳಿವೆ ಅವುಗಳಲ್ಲಿ ಕೆಲ ದೇವರುಗಳಿಗೆ ಪೂಜೆಯ ಸಮಯದಲ್ಲಿ ಯಾವ ಹೂವುಗಳನ್ನು ಸಲ್ಲಿಸಿದರೆ ಶ್ರೇಷ್ಠ ಅನ್ನೋದನ್ನ ಅನ್ನೋದನ್ನ ಇಲ್ಲಿ ತಿಳಿಯಲಾಗಿದೆ.

ಸರಸ್ವತಿ ದೇವಿಯನ್ನು ವಿದ್ಯಾದೇವತೆ ಎಂದು ನಂಬಲಾಗಿದ್ದು ಬಿಳಿಯ ಕಮಲದ ಹೂವು ಅತಿ ಹೆಚ್ಚು ಪ್ರಿಯ ಎಂದು ಭಕ್ತರು ನಂಬುತ್ತಾರೆ. ಅಂತೆಯೇ ಬಿಳಿಕಮಲ ಹಾಗೂ ಪಾರಿಜಾತ ಹೂವುಗಳನ್ನು ಸರಸ್ವತಿ ಪೂಜೆಯಲ್ಲಿ ಹೆಚ್ಚು ಬಳಸಲಾಗುತ್ತದೆ.

ಹನುಮಂತನಿಗೆ ಸಲ್ಲಿಸುವ ಪೂಜೆಯಲ್ಲಿ ತುಳಸಿ ಎಲೆಗಳು ಮತ್ತು ಅಡಿಕೆಯ ಹಿಂಗಾರದ ಹೂವಿನ ಹಾರವನ್ನು ಅರ್ಪಿಸಲಾಗುತ್ತದೆ. ಈ ಹೂವುಗಳನ್ನು ಪೂಜೆಯಲ್ಲಿ ಅರ್ಪಿಸುವ ಮೂಲಕ ವಿವಿಧ ದೇವರ ಅನುಗ್ರಹಕ್ಕೆ ಪಾತ್ರರಾಗಬಹುದು.

ಶಿವನಿಗೆ ಬಿಲ್ವಾಪತ್ರೆ ಅತ್ಯಂತ ಇಷ್ಟವಾದ ಎಲೆಗಳು ಎಂದು ಶಿವನ ಭಕ್ತರು ನಂಬುತ್ತಾರೆ. ಇದರ ಹೊರತಾಗಿ ತುಂಬೆ ಹೂವು, ನೇರಳೆ ಆರ್ಕಿಡ್ ಅಥವಾ ಮಂದಾರ ಪುಷ್ಪವೂ ಶಿವನಿಗೆ ಇಷ್ಟವಾಗಿದ್ದು ಈ ಹೂವುಗಳನ್ನು ಶಿವಪೂಜೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಇದರ ಜೊತೆಗೇ ಸಂಪಿಗೆ ಮತ್ತು ಕಿರೀಟ ಹೂ ಸಹಾ ಶಿವನ ಅನುಗ್ರಹ ಪಡೆಯಲು ನೆರವಾಗುವ ಹೂವುಗಳಾಗಿವೆ.

ಪಾರ್ವತೀದೇವಿಗೆ ಸಲ್ಲಿಸುವ ವಿಶೇಷ ಪಾರ್ಥನೆಯಾದ ಲಲಿತಾ ಸಹಸ್ರನಾಮದಲ್ಲಿ ಹಲವು ಹೂವುಗಳನ್ನು ಉಲ್ಲೇಖಿಸಲಾಗಿದೆ. ಕದಂಬ ವನ ಪಾರ್ವತಿ ಹೆಚ್ಚು ಇಷ್ಟವೆಂದು ಹಲವೆಡೆ ತಿಳಿಸಲಾಗಿದ್ದು ಇದೇ ಕಾರಣಕ್ಕೆ ಆಕೆಗೆ ಕದಂಬವನವಾಸಿನಿ ಎಂಬ ಹೆಸರೂ ಇದೆ.ಈ ವನದಲ್ಲಿ ಸಿಗುತ್ತದೆ ಎಂಬ ಕಾರಣದಿಂದ ಕದಂಬ ಹೂ ಸಂಪಿಗೆ, ದಾಸವಾಳ, ಕೆಂಡಸಂಪಿಗೆ, ಮಲ್ಲಿಗೆ ಮೊದಲಾದ ಹೂವುಗಳನ್ನು ಪಾರ್ವತಿ ದೇವಿಯ ಪೂಜೆಯಲ್ಲಿ ಬಳಸಲಾಗುತ್ತದೆ.

ಕಾಳಿಯ ಅವತಾರವಾದ ದುರ್ಗಾಮಾತೆಯ ಪೂಜೆಯಲ್ಲಿ ಸಾಮಾನ್ಯವಾಗಿ ಕೆಂಪು ಬಣ್ಣದ ಹೂವುಗಳನ್ನೇ ಬಳಸಲಾಗುತ್ತದೆ. ದಾಸವಾಳ, ಗುಡ್ಡೆ ಹೂ, ಕಣಗಿಲ ಮೊದಲಾದ ಕೆಂಪು ಹೂವುಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ.

ಲಕ್ಷ್ಮಿ ದೇವತೆಗೆ ಕಮಲದ ಹೂವು ಅತಿ ಹೆಚ್ಚು ಇಷ್ಟವಾದ ಹೂವಾಗಿದ್ದು ಲಕ್ಷ್ಮೀಪೂಜೆಯಲ್ಲಿ ಕಮಲವನ್ನೇ ಹೆಚ್ಚು ಉಪಯೋಗಿಸಲಾಗುತ್ತದೆ. ಇನ್ನುಳಿದಂತೆ ಕೇದಿಗೆ, ಸಂಪಿಗೆ, ಸೇವಂತಿಗೆ, ಗೊಂಡೆ ಹೂವುಗಳು ಸಹಾ ಪೂಜೆಗೆ ಅರ್ಹವಾಗಿವೆ.

LEAVE A REPLY

Please enter your comment!
Please enter your name here