ಹರಳೆಣ್ಣೆ ಮನುಷ್ಯನ ಹಲವು ಬೇನೆಗಳನ್ನು ನಿವಾರಿಸಬಲ್ಲದು, ಈ ಎಣ್ಣೆಯನ್ನು ನಮ್ಮ ಹಿರಿಯರು ಹೆಚ್ಚಾಗಿ ಬಳಸುತ್ತಿದ್ದರು, ಆದ್ರೆ ಇದರ ಬಳಕೆ ಈಗ ಸ್ವಲ್ಪ ಮಟ್ಟಿಗೆ ಕಡಿಮೆ ಇದೆ ಅನ್ನಿಸುತ್ತದೆ. ಹರಳೆಣ್ಣೆ ನಿಮಗೆ ಕಾಡುವ ಈ ಸಾಮಾನ್ಯ ಸಮಸ್ಯೆಗಳನ್ನು ನಿವಾರಿಸಬಲ್ಲದು.

ಹರಳೆಣ್ಣೆಯ ಬಹುಪಯೋಗಗಳು:
ಮಲಬದ್ದತೆ ಸಮಸ್ಯೆ ಇದ್ರೆ ಬೆಳಗ್ಗೆ ಎದ್ದ ಕೂಡಲೇ, ಯಾವದಾದರೂ ಜ್ಯುಸ್ ನೊಂದಿಗೆ ಒಂದು ಚಮಚ ಹರಳೆಣ್ಣೆಯನ್ನು ಬೆರಸಿ ಸೇವನೆ ಮಾಡುವುದು ಉತ್ತಮ.

ಹುಳುಕಡ್ಡಿ ನಿವಾರಣೆ:
ಹುಳುಕಡ್ಡಿ ಸಮಸ್ಯೆ ಇದ್ರೆ ಈ ಎಣ್ಣೆಯನ್ನು ಬಳಸುವುದರಿಂದ ಇದರಲ್ಲಿರುವ ಡಿಸೈಲೆನಿಕ್ ಆಸಿಡ್ ಹುಳುಕಡ್ಡಿಯನ್ನು ನಿವಾರಿಸಬಲ್ಲದು.

ಚರ್ಮದ ಸಮಸ್ಯೆಗೆ ಹರಳೆಣ್ಣೆ ಉತ್ತಮ ಔಷಧಿ:
ಹರಳೆಣ್ಣೆ ಬಳಸುವುದರಿಂದ ಸುಕ್ಕು ಗಟ್ಟಿದ ಚರ್ಮ ಹಾಗು ತುರಿಕೆ, ಸ್ಟ್ರೇಟ್ ಮಾರ್ಕ್, ಒಣ ಚರ್ಮ ಮುಂತಾದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.

ಆಗಾಗ ಕೂದಲಿಗೆ ಹರಳೆಣ್ಣೆ ಹಚ್ಚುತ್ತಿದ್ದರೆ, ಕೂದಲು ಉದುರುವ ಸಮಸ್ಯೆಗೆ ಕಡಿವಾಣ ಹಾಕಬಲ್ಲದು ಹಾಗು ತಲೆಯಲ್ಲಿನ ಹೊತ್ತು ನಿವಾರಣೆ ಮಾಡುತ್ತದೆ ಈ ಎಣ್ಣೆ.

ಮೈಕೈ ನೋವು ಇದ್ದರೆ ಹರಳೆಣ್ಣೆಯಿಂದ ಮಸಾಜ್ ರೀತಿ ಮಾಡಿದರೆ ನೋವು ಕಡಿಮೆ ಮಾಡಿಕೊಳ್ಳಬಹುದು, ಹಾಗು ದೇಹದ್ಲಲಿ ನರಗಳು ಬಹು ಬಂದಿದ್ದರೆ ಎಣ್ಣೆಯಿಂದ ತಿಕ್ಕಿದರೆ ಬಹು ಕಡಿಮೆಯಾಗುತ್ತದೆ.

ಹೊಟ್ಟೆ ತೊಳೆಸುವುದು ಹಾಗು ನೋವು ಇದ್ದರೆ ಒಂದು ಚಮಚ ನಿಂಬೆ ರಸದೊಂದಿಗೆ ಇದನ್ನು ಸೇವಿಸಿದರೆ ನೋವು ನಿವಾರಣೆ ಆಗುವುದು.

LEAVE A REPLY

Please enter your comment!
Please enter your name here