ಹೌದು ನಮ್ಮ ಹಿರಿಯರು ಹೇಳುವ ಪ್ರಕಾರ ಅಗಸೆ ಬೀಜ ಸೇವನೆಯಿಂದ ಉತ್ತಮ ಆರೋಗ್ಯವನ್ನು ಪಡೆಯಬಹುದಂತೆ. ಅಷ್ಟೇ ಅಲ್ಲದೆ ಕಾಲನು ಕ್ರಮೇಣ ಈ ರೋಗಗಳನ್ನು ನಿಯಂತ್ರಿಸಿ ಕೊಳ್ಳಬಹುದು ಎಂಬುದಾಗಿ ಕೆಲವೊಂದು ಅಧ್ಯಯನದಿಂದ ತಿಳಿಯಲಾಗಿದೆ. ಇದರಿಂದ ಯಾವೆಲ್ಲ ಲಾಭವಿದೆ, ಯಾವೆಲ್ಲ ರೋಗಗಳನ್ನು ನಿಯಂತ್ರಿಸಿ ಕೊಳ್ಳಬಹುದು ಅನ್ನೋದನ್ನ ತಿಳಿಯೋಣ ಬನ್ನಿ…

ಅಗಸೆ ಬೀಜದಲ್ಲಿ ಒಮೆಗಾ-3 ಇರುವುದರಿಂದ ಇದನ್ನು ಸೇವಿಸಿದರೆ ಉರಿಯೂತ ವಿರೋಧಿ ಕ್ರಮ ಮತ್ತು ಹೃದಯಬಡಿತ ಸಾಮಾನ್ಯ ಮಾಡುವ ಮೂಲಕ ವಿವಿಧ ಕಾರ್ಯವಿಧಾನದೊಂದಿಗೆ ಹೃದಯರಕ್ತನಾಳ ವ್ಯವಸ್ಥೆಗೆ ನೆರವಾಗುತ್ತದೆ.

ಹಲವಾರು ಅಧ್ಯಯನಗಳ ಪ್ರಕಾರ ಒಮೆಗಾ-3 ಭರಿತ ಆಹಾರಗಳು ಅಪಧಮನಿ ಗಟ್ಟಿಯಾಗುವುದನ್ನು ತಡೆಯಲು ನೆರವಾಗುತ್ತದೆ ಹಾಗು ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಎಂಬುದಾಗಿ ತಿಳಿಯಲಾಗುತ್ತದೆ..

ಅಗಸೆ ಬೀಜ ಸೇವನೆಯಿಂದ ಕಾಲಾನುಕ್ರಮೇಣ ಹೃದಯರೋಗ, ಕ್ಯಾನ್ಸರ್ ನಂತಹ ರೋಗವನ್ನು ನಿಯಂತ್ರಿಸಬಹುದಂತೆ. ಇತ್ತೀಚಿನ ಅಧ್ಯಯನಗಳ ಪ್ರಕಾರ ಅಗಸೆ ಬೀಜದ ಸೇವನೆಯಿಂದ ಸ್ತನ ಕ್ಯಾನ್ಸರ್, ಜನನಾಂಗ ಕ್ಯಾನ್ಸರ್ ಮತ್ತು ಕರುಳಿನ ಕ್ಯಾನ್ಸರ್ ಬರದಂತೆ ತಡೆಯುತ್ತದೆ ಅಷ್ಟೇ ಅಲ್ಲದೆ ಪ್ರತಿ ದಿನ ಅಗಸೆ ಬೀಜ ಸೇವನೆಯಿಂದ ಮಧುಮೇಹವನ್ನು ಕೂಡ ಕಡಿಮೆ ಮಾಡಿಕೊಳ್ಳಬಹುದು ಎಂದು ತಿಳಿಯಲಾಗಿದೆ…

ಸಂಗ್ರಹ

LEAVE A REPLY

Please enter your comment!
Please enter your name here