ಮೂಲಂಗಿ ಹಲವು ಆರೋಗ್ಯಕಾರಿ ಲಾಭಗಳನ್ನು ಹೊಂದಿದೆ, ಮೂಲಂಗಿಯಲ್ಲಿರುವ ಪೋಷಕಾಂಶಗಳು ದೇಹಕ್ಕೆ ಹೆಚ್ಚು ಅವಶ್ಯಕವಾಗಿದೆ. ಮೂಲಂಗಿಯಲ್ಲಿದೆ ಹಲವು ರೋಗಗಳನ್ನು ನಿವಾರಿಸುವ ಶಕ್ತಿ. ಇದನ್ನು ಹೇಗೆ ಬಳಸಬೇಕು, ಹಾಗು ಯಾವೆಲ್ಲ ಬೇನೆಗಳನ್ನು ನಿವಾರಿಸುತ್ತದೆ ಅನ್ನೋದನ್ನ ತಿಳಿಯೋಣ ಬನ್ನಿ..

ಮೂತ್ರ ಮಾರ್ಗದ್ಲಲಿನ ಕಲ್ಲುಕರಗಿಸಲು ಒಂದು ಗ್ರಾಂ ಮೂಲಂಗಿ ಬೀಜವನ್ನು ನಿಯಮಿತವಾಗಿ ಸೇವಿಸಿದರೆ ಮೂತ್ರಮಾರ್ಗದಲ್ಲಿನ ಕಲ್ಲು ಕರಗಿ ಹೊರಬರುತ್ತದೆ. ಅಷ್ಟೇ ಅಲ್ಲದೆ ದೇಹದ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ನಿವಾರಿಸಿಕೊಳ್ಳಲು ಪ್ರತಿದಿನ ಬೆಳಗ್ಗೆ ಖಾಲಿಹೊಟ್ಟೆಗೆ ಅರ್ಧ ಲೋಟ ಮೂಲಂಗಿ ರಸಕ್ಕೆ ಸಮಪ್ರಮಾಣದ ನೀರನ್ನು ಬೆರೆಸಿ ಒಂದು ಚಮಚ ನಿಂಬೆ ರಸ ಸೇರಿಸಿ ಸೇವಿಸಬೇಕು.

ಮೂಲವ್ಯಾಧಿ ಸಮಸ್ಯೆ ಇರುವವರು ಮೂಲಂಗಿಯನ್ನು ಮಜ್ಜಿಗೆಯೊಂದಿಗೆ ಸೇವಿಸಿದರೆ ಮೂಲವ್ಯಾಧಿ ನಿವಾರಣೆಯಾಗುತ್ತದೆ. ಅಷ್ಟೇ ಅಲ್ಲದೆ ಮಹಿಳೆಯರಿಗೆ ಸರಿಯಾದ ಸಮಯದಲ್ಲಿ ಮುಟ್ಟು ಆಗದಿದ್ದರೆ, ಒಂದರಿಂದ ಎರಡು ಗ್ರಾಂ ಮೂಲಂಗಿ ಬೀಜವನ್ನು ಪೇಸ್ಟ್ ಮಾಡಿ ಸೇವಿಸಿದರೆ ಮುಟ್ಟು ಆಗುತ್ತದೆ.

ಮೂಲಂಗಿಯನ್ನು ಸಲಾಡ್ ರೀತಿಯಲ್ಲಿ ಸೇವಿಸುವುದರಿಂದ ಒಳ್ಳೆಯ ಆರೋಗ್ಯವನ್ನು ಪಡೆಯಬಹುದಾಗಿದೆ, ಹಾಗು ಮೂಲಂಗಿಯ ತಾಜಾ ಎಲೆಗಳಿಂದ ರಸ ತಯಾರಿಸಿ ಊಟಕ್ಕೂ ಮುಂಚೆ ಸೇವಿಸಿದರೆ ಕಣ್ಣು ಉರಿ ಮತ್ತು ಕಣ್ಣಲ್ಲಿ ನೀರು ಬರುವ ಸಮಸ್ಯೆಗೆ ಪರಿಹಾರ ಕಾಣಬಹುದು.

LEAVE A REPLY

Please enter your comment!
Please enter your name here