ಆರೋಗ್ಯದ ದೃಷ್ಟಿಯಿಂದ ಕಲ್ಲು ಸಕ್ಕರೆಯನ್ನು ಹೀಗೆ ಬಳಕೆ ಮಾಡಿ, ಯಾವೆಲ್ಲ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು ಹಾಗು ಇದರಿಂದ ಸಿಗುವ ಆರೋಗ್ಯಕಾರಿ ಲಾಭಗಳೇನು.? ಅನ್ನೋದನ್ನ ತಿಳಿಯೋಣ ಬನ್ನಿ..

ಮನುಷ್ಯನಿಗೆ ಸಾಮಾನ್ಯವಾಗಿ ಒಂದಲ್ಲ ಒಂದು ಆರೋಗ್ಯಕಾರಿ ಸಮಸ್ಯೆಗಳು ಕಾಡುತ್ತಿರುತ್ತದೆ, ಇವುಗಳನ್ನು ಆಯುರ್ವೇದದ ಮೂಲಕ ನಿವಾರಣೆ ಮಾಡಿಕೊಳ್ಳಬಹುದಾಗಿದೆ.

ಕಣ್ಣಿನ ಆರೋಗ್ಯವನ್ನು ವೃದ್ಧಿಸುವ ಜೊತೆಗೆ ಕಣ್ಣಿನ ದೃಷ್ಟಿಯನ್ನು ಕಲ್ಲು ಸಕ್ಕರೆ ಹೆಚ್ಚಿಸುತ್ತದೆ, ಕಣ್ಣುಗಳು ಉರಿ ಮತ್ತು ಕೆಂಪಾಗಿದ್ದರೆ, ಕಲ್ಲು ಸಕ್ಕರೆಯನ್ನು ನೀರಲ್ಲಿ ಕಲಸಿ ಆ ನೀರಲ್ಲಿ ಹತ್ತಿ ನೆನೆಸಿ ಕಣ್ಣುಗಳ ಮೇಲೆ ಇಡುವುದರಿಂದ ಕಣ್ಣು ಕೆಂಪಾಗುವುದು ಹಾಗು ಕಣ್ಣು ಉರಿ ಸಮಸ್ಯೆ ನಿವಾರಣೆಯಾಗುತ್ತದೆ.

ಪ್ರತಿದಿನ ರಾತ್ರಿ ಮಲಗುವ ಮುನ್ನ ಹಾಲಿನಲ್ಲಿ ಬಾದಾಮಿ, ಕಲ್ಲುಸಕ್ಕರೆ, ಸೋಂಪು, ಕರಿಮೆಣಸಿನ ಕಾಳುಗಳನ್ನು ಸ್ವಲ್ಪ ಪ್ರಮಾಣದಲ್ಲಿ ತಗೆದುಕೊಂಡು ಇವುಗಳನ್ನು ಪುಡಿಮಾಡಿಟ್ಟುಕೊಂಡು ಹಾಲಿಗೆ ಸೇರಿಸಿ ಪ್ರತಿ ದಿನ ರಾತ್ರಿ ಮಲಗುವ ಮುನ್ನ ಸೇವಿಸುವುದರಿಂದ ಕಣ್ಣಿನ ದೃಷ್ಟಿ ಹೆಚ್ಚುತ್ತದೆ.

ಕಲ್ಲು ಸಕ್ಕರೆ ಮೂತ್ರ ಮಾರ್ಗದಲ್ಲಿನ ಕಲ್ಲು ಕರಗಿಸುತ್ತದೆ, ಹೇಗೆ ಗೋತ್ತಾ.? ಈರುಳ್ಳಿ ರಸಕ್ಕೆ ಕಲ್ಲು ಸಕ್ಕರೆ ಬೆರೆಸಿ ಸೇವಿಸಬೇಕು. ಬೇವಿನ ಚಿಗುರನ್ನು ಕಲ್ಲು ಸಕ್ಕರೆ ಜತೆ ತಿಂದರೆ ಹೊಟ್ಟೆ ನೋವು ಬೇಗ ನಿವಾರಣೆಯಾಗುತ್ತದೆ.

ಬಾಣತಿಯರಿಗೆ ಕಲ್ಲುಸಕ್ಕರೆ ಹೆಚ್ಚು ಸಹಕಾರಿ ಯಾಕೆಂದರೆ ಕಪ್ಪು ಎಳ್ಳನ್ನು ಪುಡಿ ಮಾಡಿ ಕಲ್ಲು ಸಕ್ಕರೆ ಜತೆ ಬಾಣಂತಿಯರಿಗೆ ಕೊಟ್ಟರೆ ಎದೆ ಹಾಲು ಹೆಚ್ಚಿಸುತ್ತದೆ, ಹಾಗಾಗಿ ಬಾಣಂತಿಯರಿಗೆ ಕಲ್ಲು ಸಕ್ಕರೆ ಉತ್ತತ್ತಿ ಮುಂತಾದವುಗಳನ್ನು ಕೊಡುತ್ತಾರೆ.

LEAVE A REPLY

Please enter your comment!
Please enter your name here