ಹಾಗಲಕಾಯಿ ನೈಸರ್ಗಿಕವಾಗಿ ಉತ್ತಮ ಆರೋಗ್ಯವನ್ನು ವೃದ್ಧಿಸುತ್ತದೆ, ರುಚಿಗೆ ಕಹಿ ಅನಿಸಿದರೂ ದೇಹಕ್ಕೆ ಸಿಹಿ ಆರೋಗ್ಯವನ್ನು ನೀಡುತ್ತದೆ. ಹಾಗಲಕಾಯಿಯಿಂದ ಯಾವೆಲ್ಲ ಉಪಯೋಗಗಳನ್ನು ಪಡೆಯಬಹುದು ಅನ್ನೋದನ್ನ ತಿಳಿಸುತ್ತೇವೆ ನೋಡಿ..

ಹಾಗಲಕಾಯಿಯ ಔಷದಿ ಗುಣಗಳು:
ಮುಟಕ್ಕೂ ಮುಂಚೆ ಮೂರೂ ನಾಲ್ಕು ಗ್ರಾಂ ಹಾಗಲಕಾಯಿ ಪುಡಿಯನ್ನು ನೀರಿನೊಂದಿಗೆ ಅಥವಾ ಒಂದು ಚಮಚ ಜೇನುತುಪ್ಪದೊಂದಿಗೆ ಸೇವಿಸುವುದರಿಂದ ದೇಹದ ರಕ್ತದಲ್ಲಿನ ಸಕ್ಕರೆ ಅಂಶ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲದೆ ಸಕ್ಕರೆಕಾಯಿಲೆ ಕೂಡ ಕಾಲಾನುಕ್ರಮೇಣ ನಿಯಂತ್ರಣಗೊಳ್ಳುತ್ತದೆ.

ಬಾಯಿ ಹುಣ್ಣು ಸಮಸ್ಯೆ ಪದೇ ಪದೇ ನಿಮ್ಮನ್ನು ಕಾಡುತ್ತಿದ್ದರೆ ಹಾಗಲಕಾಯಿ ನಿವಾರಿಸುತ್ತದೆ ಹೇಗೆ ಗೊತ್ತಾ.? ಹಾಗಲಕಾಯಿ ರಸವನ್ನು ಸೀಮೆ ಸುಣ್ಣದೊಂದಿಗೆ ಬೆರಸಿ ಬಾಯಿಹುಣ್ಣು ಇರುವಂತ ಜಾಗದಲ್ಲಿ ಹಚ್ಚಿದರೆ ನಿವಾರಣೆಯಾಗುತ್ತದೆ ಎಂಬುದಾಗಿ ಆಯುರ್ವೇದ ಹೇಳುತ್ತದೆ.

ಕಿವಿ ನೋವು ಇದ್ರೆ, ಹಾಗಲಕಾಯಿ ರಸವನ್ನು ಸ್ವಲ್ಪ ಬೆಚ್ಚಗೆ ಮಾಡಿ, ಎರಡು ನೂರು ಹನಿಗಳನ್ನು ಕಿವಿಯಲ್ಲಿ ಬಿಡುವುದರಿಂದ ಕಿವಿ ನೋವು ನಿವಾರಣೆಯಾಗುತ್ತದೆ. ಹೊಟ್ಟೆ ಹುಳು ಸಮಸ್ಯೆ ಇದ್ರೆ ನಾಲ್ಕು ದಿವಸ ಹಾಗಲಕಾಯಿ ಎಳೆಗಳ ರಸವನ್ನು ಎರಡು ಮೂರೂ ಚಮಚ ಸೇವಿಸುವುದರಿಂದ ಹೊಟ್ಟೆಹುಳು ಸಮಸ್ಯೆ ನಿವಾರಣೆಯಾಗುತ್ತದೆ.

LEAVE A REPLY

Please enter your comment!
Please enter your name here