ಬಹಳಷ್ಟು ಜನಕ್ಕೆ ಈ ಪ್ರಶ್ನೆ ಬಂದೆ ಬರುತ್ತದೆ, ಊಟದ ನಂತರ ಎಲೆ ಅಡಿಕೆ ಸೇವನೆ ಮಾಡುತ್ತಾರೆ ಯಾಕೆ.? ಎಲೆ ಅಡಿಕೆ ಸೇವನೆ ಮಾಡುವುದರಿಂದ ಸಿಗುವಂತ ಲಾಭವಾದರೂ ಏನು.? ಅನ್ನೋದಕ್ಕೆ ಉತ್ತರ ಇಲ್ಲಿದೆ ನೋಡಿ..

ಊಟದ ನಂತರ ಎಲೆ ಅಡಿಕೆ ಸೇವನೆ ಮಾಡುವುದರಿಂದ ಸಿಗುವಂತ ಲಾಭವೇನು ಹಾಗು ಇದರಿಂದ ಸಿಗುವಂತ ಹಲವು ಆರೋಗ್ಯಕಾರಿ ಲಾಭಗಳು ಯಾವುವು ಅನ್ನೋದನ್ನ ತಿಳಿಯೋಣ ಬನ್ನಿ..
ಇದನ್ನು ಇನ್ನೊಂದು ಅರ್ಥದಲ್ಲಿ ತಾಂಬೂಲ ಎಂಬುದಾಗಿ ಕರೆಯುತ್ತಾರೆ ಇದರ ಸೇವನೆಯಿಂದ ದೈಹಿಕ ಹಾಗು ಮಾನಸಿಕ ಒತ್ತಡ ನಿವಾರಣೆಯಾಗುತ್ತದೆ ಹಾಗು ಕೇಂದ್ರೀಯ ನರಮಂಡಲವನ್ನು ಉತ್ತೇಜಿಸುತ್ತದೆ.

ತಾಂಬೂಲ ಸೇವನೆಯಿಂದ ಜೀರ್ಣಕ್ರಿಯೆ ಸರಾಗವಾಗಿ ನಡೆಯುತ್ತದೆ, ಹಾಗು ಹಲ್ಲುಗಳ ವಸಡು ಗಟ್ಟಿಯಾಗುತ್ತದೆ. ತಾಂಬೂಲ ರಜೋವರ್ಧಕ ಹಾಗು ವೀರ್ಯಾಣು ವರ್ಧಕವು ಹೌದು ಹಾಗಾಗಿ ಇದರ ಸೇವನೆ ಒಳ್ಳೆಯದು, ತಾಂಬೂಲವನ್ನು ಅತಿಯಾಗಿ ಸೇವಿಸಬಾರದು ಯಾಕೆಂದರೆ ಅತಿಯಾದರೆ ಅಮೃತವು ವಿಷ ಆದ್ದರಿಂದ ಇದರ ಸೇವನೆ ಮಿತವಾಗಿರಲಿ.

ತಾಂಬೂಲವನ್ನು ಮಕ್ಕಳು, ಜ್ವರ ಇರುವವರು, ಕಣ್ಣಿನ ಸಮಸ್ಯೆ ಇರುವವರು, ಮಧುಮೇಹ, ಮೂರ್ಛೆ ರೋಗ ಇತ್ಯಾದಿ ಸಮಸ್ಯೆ ಇರುವವರು ತಾಂಬೂಲವನ್ನು ಸೇವಿಸಬಾರದು ಎಂಬುದಾಗಿ ಹೇಳಲಾಗುತ್ತದೆ. ಎಲೆ ಅಡಿಕೆ ಸುಣ್ಣ ಇವುಗಳಿಂದ ದೇಹಕ್ಕೆ ಉತ್ತಮ ಅರೋಗ್ಯ ಸಿಗುತ್ತದೆ, ಆದ್ರೆ ಇವುಗಳ ಜೊತೆಗೆ ತಂಬಾಕು ಅಂತಹ ಮಾದಕ ವ್ಯಸನಗಳನ್ನು ಬಳಸದೆ ಇರುವುದು ಉತ್ತಮ.

ತಾಂಬೂಲದಲ್ಲಿ ಬಳಸುವಂತ ವಿಳ್ಳೇದೆಲೆ ಹಲವು ಆರೋಗ್ಯಕಾರಿ ಲಾಭಗಳನ್ನು ಹೊಂದಿದೆ. ಕೆಮ್ಮು ಸಮಸ್ಯೆ ಇದ್ರೆ, ಒಂದು ವೀಳೇದೆಲೆ, ಸ್ವಲ್ಪ ಕರಿ ತುಳಸಿ, ಒಂದು ಲವಂಗವನ್ನು ಅರೆದು ದಿನಕ್ಕೆ ಎರಡು ಬಾರಿ ಸೇವಿಸಿದರೆ ಕೆಮ್ಮು ಸಮಸ್ಯೆ ನಿವಾರಣೆಯಾಗುವುದು. ಅಷ್ಟೇ ಅಲ್ಲದೆ ವಿಳ್ಳೇದೆಲೆ ಕೂದಲು ಉದುರುವ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ, ಒಂದೆರಡು ವಿಳ್ಳೇದೆಲೆಯನ್ನು ಅರೆದು ಕೊಬ್ಬರಿ ಎಣ್ಣೆಯಲ್ಲಿ ಕಲಸಿ ತೆಲೆಗೆ ೨-೩ ದಿನ ಹಚ್ಚಿ ಸ್ನಾನ ಮಾಡಿದರೆ ತಲೆ ಕೂದಲು ಉದುರುವುದು ನಿಲ್ಲುತ್ತದೆ.

ಅಜೀರ್ಣತೆಯಿಂದ ಹೊಟ್ಟೆ ನೋವು ಸಮಸ್ಯೆ ಕಾಣಿಸಿಕೊಂಡರೆ, ಒಂದೇ ವಿಳ್ಳೇದೆಲೆ ಹಾಗು ಅದರ ಜೊತೆಗೆ ಸ್ವಲ್ಪ ಉಪ್ಪನ್ನು ಜಗಿದು ರಸವನ್ನು ನುಂಗುವುದರಿಂದ ಹೊಟ್ಟೆ ನೋವು ನಿವಾರಣೆಯಾಗುತ್ತದೆ. ಚಿಕ್ಕ ಮಕ್ಕಳು ಹೊಟ್ಟೆ ಉಬ್ಬರದಿಂದ ನರಳುತ್ತಿದ್ದರೆ, ಒಂದು ವಿಳ್ಳೇದೆಲೆಯನ್ನು ತಗೆದುಕೊಂಡು ಅದಕ್ಕೆ ಹರಳೆಣ್ಣೆ ಹಚ್ಚಿ ಬಿಸಿ ಮಾಡಿ ಹೊಟ್ಟೆ ಉಬ್ಬರದಿಂದ ನರಳುವ ಮಗಿವ ಹೊಟ್ಟೆಗೆ ಕಾವು ಕೊಟ್ಟರೆ ಸಮಸ್ಯೆ ನಿವಾರಣೆಯಾಗುವುದು.

ಬರಿ ವಿಳ್ಳೆದೆಯನ್ನು ಹಾಗಾಗ ತಿನ್ನುತ್ತಿದ್ದರೆ ದಂತಕ್ಷಯ, ಒಣಕೆಮ್ಮು, ಮುಂತಾದ ಸಮಸ್ಯೆ ಇರೋದಿಲ್ಲ. ಇದನ್ನು ಬೇರೆಯವರಿಗೂ ತಿಳಿಸಿ ಇದರ ಉಪಯೋಗವನ್ನು ಪಡೆದುಕೊಳ್ಳಲಿ.

LEAVE A REPLY

Please enter your comment!
Please enter your name here