ಬಿಲ್ವ ಪೂಜೆಗೆ ಅಷ್ಟೇ ಸೀಮಿತವಾಗಿಲ್ಲ ಹಲವು ಸಮಸ್ಯೆಗಳಿಗೆ ಆಯುರ್ವೇದ ಔಷಧಿಯಾಗಿ ಕೆಲಸ ಮಾಡುತ್ತದೆ, ಕೆಲವು ಸಮಸ್ಯೆಗಳಿಗೆ ಬಿಲ್ವ ಹೇಗೆ ಕೆಲಸ ಮಾಡುತ್ತದೆ ಹಾಗು ಅದನ್ನು ಹೇಗೆ ಬಳಸಿ ಪರಿಹಾರ ಕಂಡುಕೊಳ್ಳಬಹುದು ಅನ್ನೋದನ್ನ ಮುಂದೆ ನೋಡಿ..

ಕಫ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಹಾಗು ಕಫದಿಂದ ಎದೆ ಹುರಿ ಸಮಸ್ಯೆ ಬರುತ್ತಿದ್ದರೆ ಬಿಲ್ವ ನಿವಾರಿಸುತ್ತದೆ ಹೇಗೆ ಗೊತ್ತಾ? ಬಿಲ್ವದ ತಾಜಾ ಎಲೆಗಳನ್ನು ತಂದು ಅದನ್ನು ಚನ್ನಾಗಿ ತೊಳೆದು ಅದರ ರಸವನ್ನು ಮಾಡಿ, ಕುಡಿದರೆ ಕಫ ಕಡಿಮೆಯಾಗಿ ಎದೆ ಹುರಿ ನಿವಾರಣೆಯಾಗುವುದು.

ಕೈ ಕಾಲುಗಳು ಉತವಾಗಿದ್ದರೆ, ಬಿಲ್ವದ ಎಲೆಗಳನ್ನು ಬಿಸಿ ಮಾಡಿ ಊತ ಇರುವ ಜಾಗಕ್ಕೆ ಪಟ್ಟು ಹಾಕಿದರೆ ಉತ್ತಮ ಪರಿನವನ್ನು ಕಾಣಬಹುದು. ಅತಿಸಾರ ಸಮಸ್ಯೆ ಇದ್ರೆ ಬಿಲ್ವದ ಚಕ್ಕೆ ಹಾಗು ದೊಡ್ಡ ಏಲಕ್ಕಿ ಎರಡನ್ನು ಕುಟ್ಟಿ ಪುಡಿಮಾಡಿ ದಿನಕ್ಕೆ ಎರಡು ಬರಿ ಮಜ್ಜಿಗೆಯಲ್ಲಿ ಬೆರಸಿ ಸೇವನೆ ಮಾಡಿದರೆ ಅತಿಸಾರ ನಿವಾರಣೆಯಾಗುವುದು.

LEAVE A REPLY

Please enter your comment!
Please enter your name here