ಮನುಷ್ಯನಿಗೆ ಸಾಮಾನ್ಯವಾಗಿ ಒಂದಲ್ಲ ಒಂದೇ ಬೇನೆಗಳು ಕಾಡುತ್ತಲೇ ಇರುತ್ತವೆ ಪ್ರತಿಯೊಂದಕ್ಕೂ ವೈದ್ಯರ ಬಳಿ ಹೋಗದಕ್ಕೆ ಕೆಲವರು ಬಯಸೋದಿಲ್ಲ ಅಂತವರಿಗೆ ಇಲ್ಲಿದೆ ಮನೆ ಮದ್ದು. ಹಲವು ಒತ್ತಡಗಳಿಂದ ಹಾಗು ಹಲವು ಕಾರಣಗಳಿಂದ ತಲೆನೋವು ಬರುತ್ತದೆ ಅದ್ರಲ್ಲೂ ಈ ಅರ್ಧ ತಲೆ ನೋವು ಬಂದ್ರೆ ಮುಗಿತು ಅನುಭವಿಸೋರಿಗೆ ಗೊತ್ತು ಇದರ ನೋವಿ ಏನು ಅಂತ.

ಅರ್ಧ ತಲೆ ನೋವು ನಿವಾರಣೆ ಮಾಡಿಕೊಳ್ಳಬೇಕು ಅಂದ್ರೆ, ಈ ಮನೆ ಮದ್ದನ್ನು ಬಳಸಿ ನೋಡಿ ಕೆಲವೇ ದಿನಗಳಲ್ಲಿ ಈ ನೋವು ನಿಮ್ಮ ಹತ್ತಿರ ಸುಳಿಯೋದಿಲ್ಲ. ನುಗ್ಗೆ ಸೊಪ್ಪಿನ ರಸದ ಹನಿಗಳನ್ನು ಅರ್ಧ ತಲೆ ನೋವು ಇರುವ ವಿರುದ್ಧ ದಿಕ್ಕಿನ ಕಿವಿಗೆ ದಿನದಲ್ಲಿ ಎರಡು ಬಾರಿ ಬಿಡುವುದರಿಂದ ಅರ್ಧ ತಲೆನೋವು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ.

ಕೆಂಪಕ್ಕಿಯ ಅನ್ನಕ್ಕೆ ಮೊಸರು ಸ್ವಲ್ಪ ಉಪ್ಪು ಹಾಕಿಕೊಂಡು ತಿನ್ನುವುದರಿಂದ ಅರ್ಧ ತಲೆನೋವು ಕಡಿಮೆಯಾಗುತ್ತದೆ. ತಲೆ ನೋವು ಇದ್ದರೆ, ಜಜ್ಜಿದ ಈರುಳ್ಳಿಯನ್ನು ತಿನ್ನುತ್ತಾ ಬಂದರೆ ಅಥವಾ ಮೂಸುತ್ತಿದ್ದರೆ ನೋವು ನಿವಾರಣೆಯಾಗುತ್ತದೆ.

ಸೇಬು ಹಣ್ಣನ್ನು ಉಪ್ಪಿನ ಜೊತೆ ಸೇರಿಸಿ ಎರಡು-ಮೂರು ವಾರಗಳ ಕಾಲ ನಿರಂತರವಾಗಿ ಸೇವಿಸುತ್ತಿದ್ದರೆ ಅರ್ಧ ತಲೆನೋವು ನಿವಾರಣೆಯಾಗುವುದು.

LEAVE A REPLY

Please enter your comment!
Please enter your name here