ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಹಲವು ಬಗೆ ಬಗೆಯ ಶ್ಯಾಂಪೂ ಸೋಪು ಲಗ್ಗೆ ಇಟ್ಟಿವೆ, ಅಷ್ಟೇ ಅಲ್ಲದೆ ತಲೆ ಕೂದಲು ಬೆಳೆಯಲು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುತ್ತಾರೆ. ಈ ಹಿಂದೆ ನಮ್ಮ ಪೂರ್ವಜರು ಯಾವುದೇ ಶ್ಯಾಂಪೂ ಸೋಪುಗಳನ್ನು ಬಳಸದೆ ಉತ್ತಮವಾದ ಆರೋಗ್ಯವನ್ನು ಪಡೆಯುತ್ತಿದ್ದರು ಹಾಗೂ ಉದ್ದನೆಯ ಕೂದಲುಗಳನ್ನು ಹೊಂದಿರುತ್ತಿದ್ದರು.

ಉತ್ತಮ ಆರೋಗ್ಯಕ್ಕಾಗಿ ಸಾವಿರಾರು ರೂಪಾಯಿಗಳನ್ನು ವೆಚ್ಚ ಮಾಡುವ ಬದಲು ಮನೆಯಲ್ಲಿಯೇ ತಯಾರಿಸುವಂತ ಮನೆಮದ್ದು ನಿಮ್ಮ ಬಳಕೆಗೆ ಸಹಕಾರಿಯಾಗಿದೆ. ಹೌದು ಪ್ರತಿದಿನ ಹಸಿ ತರಕಾರಿ ಹಾಗೂ ಹಸಿರು ತರಕಾರಿಗಳು, ಮೊಳಕೆಕಾಳುಗಳು, ಮುಂತಾದವುಗಳನ್ನು ಆಹಾರದಲ್ಲಿ ಬಳಸುವುದರಿಂದ ಉತ್ತಮ ಆರೋಗ್ಯವನ್ನು ಪಡೆಯಬಹುದು.

ತಲೆಕೂದಲು ಉದುರುವ ಸಮಸ್ಯೆಗೆ ಪರಿಹಾರ:
ಹಸಿರು ತರಕಾರಿಗಳನ್ನು ಸೇವಿಸುವುದರಿಂದ ನೈಸರ್ಗಿಕವಾಗಿ ಕೂದಲು ಬೆಳೆಯಲು ವಿಟಮಿನ್ ಎ, ಮತ್ತು ಸಿ,ಗಳ ಅವಶ್ಯಕತೆ ಇದ್ದು ಇವುಗಳು ಹಸಿರು ತರಕಾರಿಯಲ್ಲಿ ಹೇರಳವಾಗಿ ಸಿಗುತ್ತದೆ. ಅಷ್ಟೇ ಅಲ್ಲದೆ ತಲೆ ಕೂದಲು ಉದಾರದಂತೆ ಮಾಡುತ್ತದೆ.

ತಲೆಕೂದಲಿಗೆ ಪಾಲಕ್ ಸೊಪ್ಪಿನ ರಸ ಹೇಗೆ ಸಹಕಾರಿ.?
ಪ್ರತಿದಿನ ಒಂದು ಗ್ಲಾಸ್ ಪಾಲಕ್ ಸೊಪ್ಪಿನ ರಸವನ್ನು ಸೇವಿಸುವುದರಿಂದ ತಲೆಕೂದಲು ಉದುರುವ ಸಮಸ್ಯೆ ನಿಯಂತ್ರಣಗೊಳ್ಳುತ್ತದೆ. ತಲೆ ಕೂದಲಿಗೆ ಕೊತ್ತಂಬರಿ ಸೊಪ್ಪಿನ ರಸವನ್ನು ಹಚ್ಚಿದರೆ ಕೂದಲು ಉತ್ತಮ ರೀತಿಯಲ್ಲಿ ಬೆಳೆಯುತ್ತದೆ.

ನಿಮಗೆ ಉಪಯೋಗವಿಲ್ಲದ ನಿಂಬೆ ಬೀಜ ಕೂದಲು ಉದುರುವ ಸಮಸ್ಯೆಗೆ ಉಪಯೋಗವಾಗಿದೆ, ಹೇಗೆ ಗೊತ್ತಾ? ನಿಂಬೆ ಬೀಜದ ಜೊತೆಯಲ್ಲಿ ಒಂದು ಟೀ ಚಮಚ ಕರಿಮೆಣಸು ಸೇರಿಸಿ ಚೆನ್ನಾಗಿ ರುಬ್ಬಿ ಕೂದಲಿಗೆ ಹಚ್ಚಿ ಸ್ವಲ್ಪ ಸಮಯದ ಬಳಿಕ ತೊಳೆದರೆ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುವುದು. ಇದನ್ನು ನಿಮ್ಮ ಸ್ನೇಹಿತರಿಗೆ ಹಂಚಿಕೊಳ್ಳಿ ಹಾಗೂ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಪ್ರತಿದಿನ ಹೊಸ ವಿಷಯವನ್ನು ತಿಳಿಯಬಹುದು.

LEAVE A REPLY

Please enter your comment!
Please enter your name here