ಪುರುಷರಿಗಿಂತ ಮಹಿಳೆಯರಲ್ಲಿ ತಲೆ ಕೂದಲು ಉದುರುವುದು ಹೆಚ್ಚು ಎಂಬುದಾಗಿ ಹೇಳಲಾಗುತ್ತದೆ ಆದ್ರೆ, ಅದು ಯಾಕೆ ಉದುರುತ್ತದೆ ಹಾಗು ಇದಕ್ಕೆ ಕಾರಣವೇನು ಅನ್ನೋದನ್ನ ಮುಂದೆ ನೋಡಿ.

ಸಾಮಾನ್ಯವಾಗಿ ಪುರುಷರ ಹಾಗು ಸ್ತ್ರೀಯರ ತಲೆಕೂದಲು ಪ್ರತಿದಿನ ಉದುರುತ್ತವೆ ಆದ್ರೆ ಪ್ರತಿದಿನ ೧೦೦ ರಿಂದ ೧೫೦ ಕೂದಲುಗಳು ಉದುರುವುದು ಸಾಮಾನ್ಯ ಇದಕ್ಕಿಂತ ಹೆಚ್ಚು ತಲೆ ಕೂದಲು ಉದುರಿದರೆ ತಲೆ ಬುರುಡೆಯಲ್ಲಿ ಕೂದಲು ಕಡಿಮೆಯಾಗತ್ತ ಹೋಗುತ್ತದೆ ಇದಕ್ಕೆ ಚಿಕಿತ್ಸೆ ಪಡೆಯುವುದು ಅವಶ್ಯಕ.

ಮಹಿಳೆಯರಲ್ಲಿ ಹೆಚ್ಚು ಕೂದಲು ಉದುರಲು ಕಾರಣವೇನು ಗೊತ್ತಾ.?
ಮಹಿಳೆಯರು ಬಹಳಷ್ಟು ಒತ್ತಡದ ಸಮಸ್ಯೆಯನ್ನು ಎದುರಿಸುತ್ತಾರೆ, ಈ ಒತ್ತಡದ ಸಮಸ್ಯೆಯಿಂದ ದೇಹದ್ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದ ಸರಿಯಾಗಿ ಊಟ ಮಾಡದೇ ಇರಬಹುದು ಹಾಗು ಕಡಿಮೆ ಊಟ ಮಾಡುವುದರಿಂದ ದೇಹಕ್ಕೆ ಸರಿಯಾದ ಪೌಷ್ಟಿಕಾಂಶ ಸಿಗದೇ ಇರುವುದರಿಂದ ಈ ಸಮಸ್ಯೆ ಬರುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗುತ್ತದೆ
.
ಮಹಿಳೆಯರಲ್ಲಿ ಹಾರ್ಮೋನ್ ಸಮಸ್ಯೆ ಕೂಡ ಹಲವಾರು ಸಮಸ್ಯೆಗೆ ಕಾರಣವಾಗುತ್ತದೆ, ಮಹಿಳೆಯರಲ್ಲಿ ಋತುಸ್ರಾವದ ಸಮಯದಲ್ಲಿ ಹಾಗು ಗರ್ಭಿಣಿಯ ಸಮಯದಲ್ಲಿ ದೇಹದ್ಲಲಿ ಹಾರ್ಮೋನ್ ಏರುಪೇರಾಗುವುದರಿಂದ ಈ ಕೂದಲು ಉದುರುವ ಸಮಸ್ಯೆ ಬರುತ್ತದೆ. ವಿಟಮಿನ್​ ಬಿ12 ಕೊರತೆ ಇದ್ದರು ಸಹ ಕೂದಲು ಉದುರುವ ಸಮಸ್ಯೆ ಬರುತ್ತದೆ ಇದರಿಂದ ದೇಹದ್ಲಲಿ ವಿಟಮಿನ್ ಅಂಶವಿಲ್ಲದೆ ದೇಹ ನಿಶಕ್ತಿಯಿಂದ ಬಳಲುವ ಸಾಧ್ಯತೆ ಇರುತ್ತದೆ ಹಾಗು ಕೂದಲಿಗೆ ಸರಿಯಾದ ಪೋಷಕಾಂಶ ದೊರಕದೆ ಇರಬಹುದು.

LEAVE A REPLY

Please enter your comment!
Please enter your name here