ಹಿಂದಿನ ದಿನಗಳಲ್ಲಿ ಬಹಳಷ್ಟು ಜನರಲ್ಲಿ ಈ ಕೂದಲು ಉದುರುವ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಮಾರುಕಟ್ಟೆಯಲ್ಲಿ ಹಲವು ಔಷಧಿಗಳಿವೆ ಆದ್ರೆ ಅವುಗಳಿಂದ ಅಡ್ಡ ಪರಿಣಾಮ ಬೀರಬಹುದು ಅಥವಾ ಸರಿಯಾಗಿ ಕೆಲಸ ಮಾಡದೇನೆ ಇರಬಹುದು ಹಾಗಾಗಿ ನೈಸರ್ಗಿಕ ಪರಿಹಾರಗಳನ್ನು ಪಡೆದುಕೊಳ್ಳುವುದು ಉತ್ತಮ.

ಬೆಟ್ಟದ ನೆಲ್ಲೆಕಾಯಿ ಹಲವು ಆರೋಗ್ಯಕರ ಗುಣಗಳನ್ನು ಹೊಂದಿದೆ ಅಷ್ಟೇ ಅಲ್ಲದೆ ಇದು ದೇಹಕ್ಕೂ ಸೌಂದರ್ಯಕ್ಕೆ ಸಹಕಾರಿ, ನೀವು ಸ್ನಾನ ಮಾಡುವಾಗ ಬೆಟ್ಟದ ನೆಲ್ಲಿಕಾಯಿಯನ್ನು ಹೀಗೆ ಬಳಸಿ, ನೆಲ್ಲಿಕಾಯಿಗಳನ್ನು ಅರೆದು, ಅದಕ್ಕೆ ನಿಂಬೆಹಣ್ಣಿನ ರಸವನ್ನು ಸೇರಿಸಿ ತಲೆಗೆ ಹಚ್ಚಿಕೊಂಡು ಸ್ನಾನ ಮಾಡುತ್ತ ಬಂದರೆ ಖಂಡಿತ ತಲೆಕೂದಲು ಉದುರುವುದು ಕಡಿಮೆಯಾಗುತ್ತದೆ.

ಇದರಿಂದ ಯಾವುದೇ ಅಡ್ಡ ಪರಿಣಾಮ ಇರೋದಿಲ್ಲ, ಅಷ್ಟೇ ಅಲ್ಲದೆ ನಿಮ್ಮ ತಲೆ ಕೂದಲು ಸೊಂಪಾಗಿ ಬೆಳೆಯಲು ಮತ್ತು ಮೃದುವಾಗಲು ವಾರಕ್ಕೊಮ್ಮೆ ತಲೆಗೆ ಹರಳೆಣ್ಣೆಯನ್ನು ಹಚ್ಚಿ ಚನ್ನಾಗಿ ಕೂದಲನ್ನು ನೀವಿಕೊಂಡು ಜಿಡ್ಡು ತೆಗೆಯುವಂತ ಸೀಗೆಕಾಯಿ ಮುಂತಾದ ಪುಡಿಗಳನ್ನು ಬಳಸಿ ಸ್ನಾನ ಮಾಡಬೇಕು, ಇದರಿಂದ ಕೂದಲು ಶುಭ್ರವಾಗಿ ದೃಢವಾಗಿ ಮಿನುಗುತ್ತದೆ. ತಲೆಕೂದಲಿನ ಸಮಸ್ಯೆ ಇರೋ ನಿಮ್ಮ ಸ್ನೇಹಿತರಿಗೂ ಇದನ್ನು ತಿಳಿಸಿ ಇದರ ಉಪಯೋಗಗಳನ್ನು ಪಡೆದುಕೊಳ್ಳಲಿ.

LEAVE A REPLY

Please enter your comment!
Please enter your name here