ರಾಜ್ಯ ಹಾಗೂ ಕೇಂದ್ರ ಸರ್ಕಾರ ಮಹಿಳೆಯರಿಗೆ ಹೆಚ್ಚಿನ ಸೌಲಭ್ಯಗಳನ್ನು ನೀಡಿ ಮಹಿಳೆಯರನ್ನು ಉತ್ತಮ ರೀತಿಯಲ್ಲಿ ಬಲಪಡಿಸಬೇಕು ಅನ್ನೋದು ಸರ್ಕಾರದ ಉದ್ದೇಶಗಳಾಗಿವೆ ಹಾಗಾಗಿ ಮಹಿಳೆಯರಿಗೆ ಹೆಚ್ಚಿನ ಸಾಲ ಸೌಲಭ್ಯಗಳನ್ನು ನೀಡಲಾಗುತ್ತದೆ. ಈ ರೀತಿಯಾಗಿ ಮಹಿಳೆಯರಿಗೆ ನೀಡುವ ಸಾಲ ಸೌಲಭ್ಯಗಳ ಯೋಜನೆಗಳ ಮಾಹಿತಿ ಇಲ್ಲಿದೆ

ಅನ್ನಪೂರ್ಣ ಯೋಜನೆ: ಇದು ಮಹಿಳೆಯರಿಗಾಗಿ ಇರುವ ಯೋಜನೆಯಾಗಿದೆ ಇದರಲ್ಲಿ ಹೋಟೆಲ್ ಮಾಡುವಂತಹ ಅವಕಾಶವಿದೆ. ಈ ಹೋಟೆಲ್ ನಲ್ಲಿ ಊಟವನ್ನು ಪ್ಯಾಕೆಟ್ ರೂಪದಲ್ಲಿ ನೀಡಬೇಕು ಮತ್ತು ಸಂಜೆಯ ಸಮಯದಲ್ಲಿ ಸ್ನ್ಯಾಕ್ಸ್ ತಯಾರಿಸಬಹುದು ಇಂತಹ ಹೋಟೆಲ್ ಮಾಡುವವರಿಗೆ ಈ ಯೋಜನೆಯ ಲಾಭಪಡೆದುಕೊಳ್ಳಬಹುದು.ಈ ಯೋಜನೆಯ ಮಾಹಿತಿ ಮತ್ತು ಲಾಭಕ್ಕಾಗಿ ನಿಮ್ಮ ಹತ್ತಿರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನಲ್ಲಿ ಸಂಪರ್ಕಿಸಿ.

ಇಪ್ಪತ್ತು ಲಕ್ಷದವರೆಗೆ ದೇನಾ ಶಕ್ತಿ ಯೋಜನೆ: ಇದು ಸಹ ಮಹಿಳೆಯರಿಗೆ ಇರುವ ಯೋಜನೆಯಾಗಿದೆ. ಈ ಯೋಜನೆಯನ್ನು ದೇನಾ ಬ್ಯಾಂಕ್ ನಲ್ಲಿ ನೀಡಲಾಗುತ್ತದೆ.ಈ ಬ್ಯಾಂಕ್ ನಲ್ಲಿ 0.25% ಬಡ್ಡಿಯ ರಿಯಾತಿಯೊಂದಿಗೆ ೨೦ ಲಕ್ಷದ ವರಗೆ ಸಾಲ ನೀಡಲಾಗುತ್ತದೆ.ಮಹಿಳೆಯರು ವಾಣಿಜ್ಯ ಉದ್ಯಮಿಗಳಾಗಲು ಈ ಯೋಜನೆಯನ್ನು ಮಾಡಲಾಗಿದೆ.

ಮಹಿಳಾ ಮುದ್ರಾ ಯೋಜನೆ: ಈ ಯೋಜನೆಯಲ್ಲಿ ಕೇಂದ್ರ ಸರ್ಕಾರ ಮಹಿಳೆಯರಿಗೆ ಮುದ್ರಾ ಯೋಜನೆಯಲ್ಲಿ ಸೌಲಭ್ಯ ನೀಡುತ್ತಿದೆ. ಈ ಯೋಜನೆಯಡಿಯಲ್ಲಿ ಸಣ್ಣ ವಾಣಿಜ್ಯ ಸ್ಥಾಪಿಸಲು, ಬ್ಯೂಟಿ ಪಾರ್ಲರ್ ತೆರೆಯಲು, ಟೈಲರಿಂಗ್ ಯುನಿಟ್, ಟ್ಯೂಶನ್ ಸೆಂಟರ್ ಶುರು ಮಾಡಲು ಸಹಾಯವಾಗುತ್ತದೆ. ಆದಷ್ಟು ಮಹಿಳೆಯರಿಗೆ ಇದರ ಉಪಯೋಗವಾಗಲಿ ಹಾಗೂ ಪ್ರತಿ ಮಹಿಳೆಯರಿಗೆ ಈ ವಿಚಾರ ತಿಳಿಯಲಿ.

LEAVE A REPLY

Please enter your comment!
Please enter your name here