ಈರುಳ್ಳಿ ಮನುಷ್ಯನ ದೇಹಕ್ಕೆ ಹೆಚ್ಚು ಸಹಕರಾರಿಯಾಗಿರುವಂತದ್ದು, ಇದನ್ನು ಹಲವು ಮನೆಮಡುಗಳಲ್ಲಿ ಬಳಸುತ್ತಾರೆ ಹಾಗು ಅಡುಗೆಗಳಲ್ಲಿ ಕೂಡ ಇದನ್ನು ಬಳಸುತ್ತಾರೆ. ಪ್ರತಿದಿನ ಒಂದು ಹಸಿ ಈರುಳ್ಳಿ ಸೇವಿಸುವುದರಿಂದ ದೇಹಕ್ಕೆ ಉತ್ತಮ ಆರೋಗ್ಯವನ್ನು ಪಡೆಯಬಹುದು.

ಈರುಳ್ಳಿಯಿಂದ ಯಾವೆಲ್ಲ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು ಅನ್ನೋದನ್ನ ಈ ಮೂಲಕ ತಿಳಿಯೋಣ ಬನ್ನಿ..
ದೇಹದ ಮೇಲೆ ಬಿಳಿ ಮಚ್ಚೆ ಸಮಸ್ಯೆ ಇದ್ರೆ, ಈರುಳ್ಳಿ ಬೀಜವನ್ನು ತಗೆದುಕೊಂಡು ಅದನ್ನು ನೀರಿನಲ್ಲಿ ಅರೆದು ಬಿಳಿ ಮಚ್ಚೆಇರುವ ಜಾಗಕ್ಕೆ ಲೇಪಿಸಿದಲ್ಲಿ ಬಿಳಿ ಮಚ್ಚೆ ನಿಯಂತ್ರಣವಾಗುತ್ತದೆ.

ಕಜ್ಜಿ ತುರಿಕೆಗಳನ್ನು ನಿವಾರಿಸಲು, ಬಿಳಿ ಈರುಳ್ಳಿ ರಸಕ್ಕೆ ಸ್ವಲ್ಪ ಅರಿಶಿನವನ್ನು ಸೇರಿಸಿ ಸಮಸ್ಯೆ ಇರುವ ಜಾಗಕ್ಕೆ ಹಚ್ಚಿದರೆ ನಿವಾರಣೆ ಮಾಡಿಕೊಳ್ಳಬಹುದಾಗಿದೆ.

ಮಹಿಳೆಯರಲ್ಲಿ ಮುತ್ತಿನ ಸಮಯದಲ್ಲಿ ಹೆಚ್ಚು ನೋವು ಹಾಗು ರಕ್ತ ಸ್ರಾವ ಆಗುತ್ತಿದ್ದರೆ, 20-30 ಮಿಲಿ ಬಿಳಿ ಈರುಳ್ಳಿಯ ರಸವನ್ನು ಸೇವಿಸಿದರೆ ರಕ್ತ ಸ್ರಾವ ಕಡಿಮೆಯಾಗುತ್ತದೆ. ಹಾಗು ವಸಡುಗಳಲ್ಲಿ ರಕ್ತಸ್ರಾವ ಆಗುತ್ತಿದ್ದರೆ, ಈರುಳ್ಳಿಯನ್ನು ಚನ್ನಾಗಿ ಅರೆದು ಹಚ್ಚಿದರೆ ನಿವಾರಣೆಯಾಗುತ್ತದೆ.

ಮಕ್ಕಳಲ್ಲಿನ ಕಫ ಸಮಸ್ಯೆ ನಿವಾರಿಸಲು ೬-೭ ಮಿಲಿ ಈರುಳ್ಳಿ ರಸಕ್ಕೆ ೮ ರಿಂದ ೧೦ ಗ್ರಾಂ ಕಲ್ಲು ಸಕ್ಕರೆ ಸೇರಿಸಿ ನಿಯಮಿತ ಪ್ರಮಾಣದಲ್ಲಿ ಸೇವಿಸಿದರೆ ಕಫ ಕಡಿಮೆಯಾಗುತ್ತದೆ. ಹಸಿ ಈರುಳ್ಳಿ ತಿನ್ನೋದ್ರಿಂದ ಅಜೀರ್ಣತೆ ನಿವಾರಿಯಾಗುತ್ತದೆ.

LEAVE A REPLY

Please enter your comment!
Please enter your name here