ಮುಖದ ಸೌಂದರ್ಯಕ್ಕೆ ಹಲ್ಲಿನ ಪ್ರಾಮುಖ್ಯತೆ ಕೂಡ ಹೆಚ್ಚಿದೆ, ಹಳದಿ ಗಟ್ಟಿದ ಹಲ್ಲುಗಳನ್ನು ನಿವಾರಿಸುವಂತ ಸುಲಭ ಮನೆಮದ್ದುಗಳನ್ನು ನಿಮಗೆ ತಿಳಿಸಲು ಬಯಸುತ್ತೇವೆ. ಕೆಲವೊಮ್ಮೆ ಎಷ್ಟೇ ಬ್ರಶ್ ಮಾಡಿದರು ಕೂಡ ಹಲ್ಲುಗಳಲ್ಲಿ ಸೇರಿಕೊಂಡಿರುವ ಹಳದಿ ಪಾಚಿ ನಿವಾರಣೆಯಾಗೋದಿಲ್ಲ ಅಂತಹ ಸಮಸ್ಯೆಗೆ ಈ ಮನೆಮದ್ದುಗಳು ಸೂಕ್ತವಾಗಿ ಕೆಲಸ ಮಾಡುತ್ತದೆ ಅದು ಹೇಗೆ ಅನ್ನೋದನ್ನ ಮುಂದೆ ನೋಡಿ.

ಹಲ್ಲು ನೋವು ಸಮಸ್ಯೆ ಇದ್ರೆ ಇದಕ್ಕೆ ಕಾರಣ ಬ್ಯಾಕ್ಟಿರಿಯಾಗಳು, ಹೌದು ಹಲ್ಲಿನಲ್ಲಿ ಬ್ಯಾಕ್ಟೀರಿಯಾಗಳು ಸೇರಿಕೊಂಡಿದ್ದರೆ ಹಲ್ಲು ನೋವು ಸಮಸ್ಯೆ ಬರುತ್ತದೆ ಇದರಿಂದ ಹೆಚ್ಚು ನೋವು ಆಗುವುದು ಉಂತಹ ನೋವು ನಿವಾರಿಸಲು ತೆಂಗಿನ ಎಣ್ಣೆಯಲ್ಲಿ ನಿಮ್ಮ ಹಲ್ಲುಗಳನ್ನು ಉಜ್ಜುವುದರಿಂದ ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳು ನಾಶವಾಗುತ್ತದೆ, ಜತೆಗೆ ದವಡೆಯ ಹಲ್ಲುಗಳು ಶಕ್ತಿಶಾಲಿಯಾಗಿ ಬೆಳೆಯುತ್ತವೆ.

ಹಲ್ಲುಗಳು ಸ್ವಚ್ಛವಾಗಿ ಕಾಣಲು ಒಂದು ಚಮಚ ಅಡುಗೆ ಸೋಡಾವನ್ನು ಸ್ವಲ್ಪ ಉಪ್ಪಿನೊಂದಿಗೆ ಬೆರಸಿ ಹಲ್ಲು ಉಜ್ಜುವುದರಿಂದ ಹಲ್ಲುಗಳು ಸ್ವಚ್ಛ ಆಗಿರುತ್ತವೆ. ಹಲ್ಲುಗಳ ಆರೋಗ್ಯಕ್ಕೆ ಸ್ಟ್ರಾಬರಿ ಹಣ್ಣುಗಳನ್ನು ತಿನ್ನುವುದು ಕೂಡ ಒಳ್ಳೆಯದು. ಒಮ್ಮೊಮ್ಮೆ ಕಬ್ಬನ್ನು ತಿನ್ನುವುದರಿಂದ ಹಲ್ಲುಗಳು ಗಟ್ಟಿಯಾಗುತ್ತವೆ ಹಾಗೂ ಶುದ್ಧತೆ ಹೊಂದುತ್ತವೆ.

ಹಲ್ಲಿನಲ್ಲಿ ಹಳದಿಗಟ್ಟಿದ ಪಾಚಿಯನ್ನು ನಿವಾರಿಸಿಕೊಳ್ಳಲು ನಿಂಬೆಹಣ್ಣು ಮತ್ತು ಸ್ವಲ್ಪ ಉಪ್ಪನ್ನು ಬೆರೆಸಿ ಹಲ್ಲನ್ನು ಉಜ್ಜ ಬೇಕು ಹೀಗೆ ಮಾಡುವುದರಿಂದ ಉತ್ತಮ ಪರಿಹಾರವಿದೆ. ಹಲ್ಲುಗಳ ಆರೋಗ್ಯಕ್ಕೆ ಬೇವಿನಕಡ್ಡಿ ಕೂಡ ಸಹಕಾರಿ ಬೇವಿನ ಕಡ್ಡಿಯನ್ನು ಬಳಸಿ ವಾರದಲ್ಲಿ ೨-೩ ಬಾರಿ ಹಲ್ಲು ಉಜ್ಜುವುದರಿಂದ ಹಲ್ಲುಗಳ ಅರೋಗ್ಯ ಚನ್ನಾಗಿರುತ್ತದೆ.

LEAVE A REPLY

Please enter your comment!
Please enter your name here